/newsfirstlive-kannada/media/post_attachments/wp-content/uploads/2024/08/Airtel.jpg)
ಖಾಸಗಿ ಟೆಲಿಕಾಂ ಕಂಪನಿಯಾದ ಏರ್​​ಟೆಲ್​ ತನ್ನ ಪ್ರಿಪೇಯ್ಡ್​​ ಗ್ರಾಹಕರಿಗೆ 3 ಹೊಸ ಯೋಜನೆಯನ್ನ ಬಿಡುಗಡೆ ಮಾಡಿದೆ. ಮೂರು ಯೋಜನೆಗಳು ಸಹ ಡೇಟಾ ವೋಚರ್​ ಆಗಿದ್ದು, ಇಂಟರ್​ನೆಟ್​ ಬಳಕೆದಾರರಿಗೆ ಇದು ಹೆಚ್ಚು ಸಹಾಯಕವಾಗಲಿದೆ.
ಏರ್​ಟೆಲ್​​ 161 ರೂಪಾಯಿ, 181, 351 ರೂಪಾಯಿಯ ಮೂರು ಯೋಜನೆಗಳನ್ನು ಪರಿಚಯಿಸಿದೆ. ಈ ಪ್ಲಾನ್​ಗಳು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತವೆ. ಗ್ರಾಹಕರಿಗಾಗಿ ಇದರಲ್ಲಿ ಉಚಿತ SMS​​ ಅಥವಾ ಫೋನ್​ ಕರೆಗೆ ಸಂಬಂಧಿಸಿದ ಯಾವುದೇ ಸೌಲಭ್ಯವಿಲ್ಲ.
161 ರೂಪಾಯಿಯ ಪ್ಲಾನ್:
ಏರ್​ಟೆಲ್​ ಪರಿಚಯಿಸಿರುವ 161 ರೂಪಾಯಿಯ ಹೊಸ ಪ್ರಿಪೇಯ್ಡ್​ ಪ್ಲಾನ್​​​ ಮೂಲಕ 12GB ಡೇಟಾವನ್ನು ಗ್ರಾಹಕರು ಉಚಿತವಾಗಿ ಪಡೆಯಬಹುದಾಗಿದೆ. ಇದು 1 ತಿಂಗಳ ಸಿಂಧುತ್ವ ಹೊಂದಿದೆ.
181 ರೂಪಾಯಿಯ ಪ್ಲಾನ್​
ಡೇಟಾ ವೋಚರ್​ ಪ್ಲಾನ್​ಗಳ ಪಟ್ಟಿಯಲ್ಲಿ ಇದು ಎರಡನೇ ಸ್ಥಾನದಲ್ಲಿದೆ. 181 ರೂಪಾಯಿ ಪ್ಲಾನ್​​ ಅಳವಡಿಸಿಕೊಂಡರೆ 15GB ಡೇಟಾ ಸಿಗುತ್ತದೆ. 1 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ.
361 ರೂಪಾಯಿಯ ಪ್ಲಾನ್​
ಗ್ರಾಹಕರು 361 ರೂಪಾಯಿಯ ಪ್ಲಾನ್​ ರೀಚಾರ್ಜ್​ ಮಾಡಿದರೆ 50GB ಡೇಟಾ ಸಿಗುತ್ತದೆ. ಇದು 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಅಂದಹಾಗೆಯೇ ಒಂದೇ ದಿನದಲ್ಲಿ ಅಥವಾ ಒಂದು ತಿಂಗಳಲ್ಲಿ ಬಳಸಬಹುದಾದಾ ಡೇಟಾ ವೋಚರ್​​ ಇದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ