Jio ಬೆನ್ನಲ್ಲೇ Airtel ಗ್ರಾಹಕರಿಗೂ ಬಿಗ್‌ ಶಾಕ್‌; ನಾಳೆಯಿಂದಲೇ ದರ ಏರಿಕೆ

author-image
Ganesh Nachikethu
Updated On
ಜಿಯೋ, Airtel ಮತ್ತು ಐಡಿಯಾಗೆ ಬಿಗ್​ ಶಾಕ್​​; ಈ ಕಂಪನಿ ಸಿಮ್​​ಗಾಗಿ ಮುಗಿಬಿದ್ದ ಜನ!
Advertisment
  • ಜಿಯೋ ಜಾಸ್ತಿ ಮಾಡಿದ ಮರುದಿನವೇ ಏರ್‌ಟೆಲ್ ದರವೂ ಏರಿಕೆ
  • ಗ್ರಾಹಕರಿಗೆ ಬಿಗ್‌ ಶಾಕ್‌ ಏರ್‌ಟೆಲ್ ಕಂಪನಿಯ ಹೊಸ ದರ ಪಟ್ಟಿ
  • ಹೊಸ ದರ ಏರಿಕೆ ನಾಳೆ ಎಂದರೆ ಮಾರ್ಚ್​​ 18ರಿಂದಲೇ ಜಾರಿ!

ನವದೆಹಲಿ: ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್‌ ದರ ಏರಿಕೆ ಮಾಡಿದ ಬೆನ್ನಲ್ಲೇ ಏರ್‌ಟೆಲ್ ಕೂಡ ತನ್ನ ಗ್ರಾಹಕರಿಗೆ ಬಿಗ್‌ ಶಾಕ್ ಕೊಟ್ಟಿದೆ. ಏರ್‌ಟೆಲ್‌ ಕಂಪನಿ ಮೊಬೈಲ್ ಟಾರಿಫ್ ಪ್ಲಾನ್‌ಗಳ ದರ ಏರಿಕೆ ಮಾಡಿದೆ. ಹೊಸ ದರ ಏರಿಕೆ ನಾಳೆಯಿಂದಲೇ ಜಾರಿಗೆ ಬರುತ್ತಿದೆ.

ದರ ಏರಿಕೆಯ ನಿರ್ಧಾರವನ್ನ ಭಾರತಿ ಏರ್‌ಟೆಲ್ ಕಂಪನಿ ಸಮರ್ಥಿಸಿಕೊಂಡಿದೆ. ಭಾರತದ ಟೆಲಿಕಾಂ ವ್ಯವಹಾರದಲ್ಲಿ ನೆಟ್‌ವರ್ಕ್ ತಂತ್ರಜ್ಞಾನ ಮತ್ತು ಸ್ಪೆಕ್ಟ್ರಂಗಳ ಬಂಡವಾಳ ಹೂಡಿಕೆಗೆ ಇದೊಂದು ಸಾಧಾರಣ ಪ್ರಕ್ರಿಯೆ ಆಗಿದೆ. ಗ್ರಾಹಕರ ಬಜೆಟ್‌ ಹೊರೆ ಆಗುವಂತ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

publive-image

ಏರ್‌ಟೆಲ್ ಕಂಪನಿ ತನ್ನ ಗ್ರಾಹಕರಿಗೆ ಜಿಯೋದಂತೆ ಶೇಕಡಾ 11-21ರಷ್ಟು ದರ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಅಂದ್ರೆ ಇಷ್ಟು 179 ರೂಪಾಯಿ ಇದ್ದ 28 ದಿನದ ಚಂದದಾರರು 199 ರೂಪಾಯಿ ಪಾವತಿಸಬೇಕು. 265 ರೂಪಾಯಿ ಪಾವತಿಸುತ್ತಿದ್ದ ಟಾರಿಫ್ ಪ್ಲಾನ್ 299 ರೂಪಾಯಿಗೆ ಏರಿಕೆಯಾಗಿದೆ. ಜಿಯೋ ರೇಟ್ ಜಾಸ್ತಿಯಾದ ರಾತ್ರೋರಾತ್ರಿ ದರ ಏರಿಕೆ ಪರಿಷ್ಕರಣೆ ಮಾಡಿರೋದು ಟೆಲಿಕಾಂ ಕಂಪನಿಗಳ ಪೈಪೋಟಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ:ನನಗೆ ಈ ಬೌಲರ್​ನಾ ಕಂಡ್ರೆ ಭಯ ಎಂದ ವಿರಾಟ್​​​; ಕೊಹ್ಲಿಯನ್ನೇ ಕಾಡುತ್ತಿರೋ ವೇಗಿ ಯಾರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment