/newsfirstlive-kannada/media/post_attachments/wp-content/uploads/2024/08/Airtel.jpg)
ದೇಶದ ಅತೀದೊಡ್ಡ ಟೆಲಿಕಾಂ ಕಂಪನಿ ಭಾರತಿ ಏರ್​ಟೆಲ್​​ ಮಹತ್ವದ ಹೆಜ್ಜೆಯೊಂದು ಇಟ್ಟಿದೆ. ಭಾರತದಲ್ಲಿ ಹೈಸ್ಪೀಡ್​​​ ಇಂಟರ್​ನೆಟ್​ ಸೇವೆ ಒದಗಿಸಲು ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ಜತೆ ಕೈ ಜೋಡಿಸಿದೆ. ಎಲಾನ್​​ ಮಸ್ಕ್​​ ಒಡೆತನದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡ ಕುರಿತು ಮಾಹಿತಿ ನೀಡಿದೆ.
ಭಾರತಕ್ಕೆ ಹೈ-ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವ ಸಲುವಾಗಿ ಸ್ಟಾರ್‌ಲಿಂಕ್ ತರಲು ಸ್ಪೇಸ್‌ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಭಾರತ ಏರ್​ಟೆಲ್​ ಸಹಿ ಹಾಕಿದೆ. ಇದು ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​ ಆಗಿದ್ದು, ಸ್ಪೇಸ್‌ಎಕ್ಸ್ ಉಪಗ್ರಹ ಇಂಟರ್ನೆಟ್ ವಿಭಾಗ ಸ್ಟಾರ್‌ಲಿಂಕ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲಿದೆ ಎಂದು ತಿಳಿದು ಬಂದಿದೆ.
/newsfirstlive-kannada/media/post_attachments/wp-content/uploads/2024/03/Elon-musk.jpg)
ಇನ್ನು, ಈ ಮಹತ್ವದ ಒಪ್ಪಂದದ ಬೆನ್ನಲ್ಲೇ ಭಾರತಿ ಏರ್‌ಟೆಲ್ ಷೇರುಗಳಲ್ಲಿ ಭಾರೀ ಏರಿಕೆ ಕಂಡಿದೆ. ಕಂಪನಿ ಷೇರುಗಳು ಶೇಕಡ 3ರಷ್ಟು ಏರಿಕೆ ಆಗಿದ್ದು, 1676.10 ರೂ.ಗೆ ತಲುಪಿದೆ. ಏರ್‌ಟೆಲ್ ಮತ್ತು ಸ್ಪೇಸ್‌ಎಕ್ಸ್ ಪಾಲುದಾರಿಕೆ ಇಂಟರ್ನೆಟ್ ಸಂಪರ್ಕ ಸಾಧಿಸಲು ಮತ್ತು ವಿಸ್ತರಿಸಲು ಮಾರ್ಗ ಅನ್ವೇಷಿಸಲಿದೆ.
ಏರ್​ಟೆಲ್​ ಕಂಪನಿ ಹೇಳಿದ್ದೇನು?
ಇಡೀ ದೇಶಾದ್ಯಂತ ಹೆಚ್ಚಿನ ಸಂಪರ್ಕ ಸೇವೆ ಒದಗಿಸುವ ಅಗತ್ಯ ಇದೆ. ಇದಕ್ಕಾಗಿ ಏರ್‌ಟೆಲ್ ದೀರ್ಘಕಾಲೀನ ಕಾರ್ಯತಂತ್ರಕ್ಕೆ ಮುಂದಾಗಿದೆ. ಇದರ ಅನುಗುಣವಾಗಿ ಎಲಾನ್​ ಮಸ್ಕ್​​ ಕಂಪನಿ ಜತೆ ಕೈ ಜೋಡಿಸಿದ್ದೇವೆ. ಸ್ಟಾರ್‌ಲಿಂಕ್ ಸೇರ್ಪಡೆ ಇಂಟರ್ನೆಟ್ ಪ್ರವೇಶವಿಲ್ಲದ ಪ್ರದೇಶಗಳಿಗೆ ಅದರ ವ್ಯಾಪ್ತಿ ವಿಸ್ತರಿಸುತ್ತದೆ ಎಂದು ಕಂಪನಿ ಅಧಿಕೃತ ಹೇಳಿಕೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us