/newsfirstlive-kannada/media/post_attachments/wp-content/uploads/2024/04/Rajani_Dhanush.jpg)
ಬರೋಬ್ಬರಿ 18 ವರ್ಷಗಳ ಬಳಿಕ ಎರಡು ವರ್ಷಗಳ ಹಿಂದೆಯಷ್ಟೇ ಸೂಪರ್​ ಸ್ಟಾರ್​​ ರಜನಿಕಾಂತ್​​ ಮಗಳು ಐಶ್ವರ್ಯಾ, ನಟ ಧನುಷ್​​​​​​ ಡಿವೋರ್ಸ್​ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು. ಇಷ್ಟು ದಿನ ಪ್ರತ್ಯೇಕವಾಗಿ ವಾಸ ಮಾಡಿದ್ರೂ ಮಕ್ಕಳಿಗಾಗಿ ಒಂದಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕಾಗಿ ನಟ ರಜನಿಕಾಂತ್​​ ಬಹಳ ಪ್ರಯತ್ನಪಟ್ಟರು. ಇಷ್ಟಾದ್ರೂ ಯಾರ ಮಾತಿಗೆ ಕ್ಯಾರೇ ಎನ್ನದ ಇಬ್ಬರು ಕೊನೆಗೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/04/Dhanush_Aishwarya.jpg)
ಯೆಸ್​​, ನಟ ಧನುಷ್ ಮತ್ತು ಐಶ್ವರ್ಯಾ 2004ರಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಮಕ್ಕಳಿಗಾಗಿ ಪ್ರತ್ಯೇಕವಾದ ಮೇಲೂ ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ತಿದ್ರು. ಶಾಲಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಆಗಾಗ ಭೇಟಿಯಾಗಿ ಸ್ನೇಹಿತರಂತೆ ಇದ್ದರು. ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ಇದರ ಮಧ್ಯೆ ಧನುಷ್, ಐಶ್ವರ್ಯಾ ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಚೆನ್ನೈ ಫ್ಯಾಮಿಲಿ ಕೋರ್ಟಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಇಬ್ಬರ ಮಧ್ಯೆ ಭಿನ್ನಾಭಿಪ್ರಾ ಇತ್ತು. ಹಾಗಾಗಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು. ಒಂದು ದಿನ ಪರಸ್ಪರ ಒಪ್ಪಿಗೆ ಮೇರೆಗೆ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಸೆಪರೇಟ್​​ ಆಗುತ್ತಿದ್ದೇವೆ ಎಂದು ಘೋಷಿಸಿದ್ರು. ಇಬ್ಬರ ನಡುವಿನ ಸಮಸ್ಯೆ ಬಗೆಹರಿಸಲು ರಜನಿಕಾಂತ್ ಕುಟುಂಬಸ್ಥರು ಹಾಗೂ ಸ್ನೇಹಿತರು ಪ್ರಯತ್ನಿಸಿದ್ರೂ ಫಲಿಸದೆ ಕೊನೆಗೂ ಡಿವೋರ್ಸ್​ ಮುಂದಾಗಿದ್ದಾರೆ.
ಇದನ್ನೂ ಓದಿ: ವಿಜಯ್ ದೇವರಕೊಂಡ ಟೀಮ್​ನಿಂದ ಸೈಬರ್ ಕ್ರೈಮ್​ಗೆ ಕಂಪ್ಲೇಟ್.. ಕಾರಣ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us