14 KG ಚಿನ್ನ ವಂಚಿಸಿದ ಐಶ್ವರ್ಯ ಕೇಸ್; ಕಾಂಗ್ರೆಸ್​ ಶಾಸಕನ ವಿರುದ್ಧ ಕೆ ಅನ್ನದಾನಿ ಗಂಭೀರ ಆರೋಪ​

author-image
Bheemappa
Updated On
14 KG ಚಿನ್ನ ವಂಚಿಸಿದ ಐಶ್ವರ್ಯ ಕೇಸ್; ಕಾಂಗ್ರೆಸ್​ ಶಾಸಕನ ವಿರುದ್ಧ ಕೆ ಅನ್ನದಾನಿ ಗಂಭೀರ ಆರೋಪ​
Advertisment
  • ಯಾವ ಯಾವ ಕಾಂಗ್ರೆಸ್ ನಾಯಕರ ಹೆಸರು ಕೇಳಿ ಬಂದಿದೆ?
  • ಕೋಟಿ ಕೋಟಿ ರೂಪಾಯಿ ಐಶ್ವರ್ಯ ಚಿನ್ನ ವಂಚಿಸಿದ ಕೇಸ್
  • ಕಾಂಗ್ರೆಸ್​ MLA ಮೇಲೆ ಕೆ ಅನ್ನದಾನಿ ಗಂಭೀರ ಆರೋಪ

ಮಂಡ್ಯ: ಕೋಟಿ ಕೋಟಿ ರೂಪಾಯಿ ಗೋಲ್ಡ್ ವಂಚನೆ ಪ್ರಕರಣದಲ್ಲಿ ಐಶ್ವರ್ಯ ಜೊತೆ ಕಾಂಗ್ರೆಸ್ ನಾಯಕರ ಪಾತ್ರ ಇದೆ ಎಂದು ಮಾಜಿ ಶಾಸಕ ಡಾ.ಕೆ ಅನ್ನದಾನಿ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಮಾಜಿ ಶಾಸಕ ಡಾ.ಕೆ ಅನ್ನದಾನಿ ಅವರು, ಚುನಾವಣೆಗೆ ಐಶ್ವರ್ಯ ವಂಚನೆ ಮಾಡಿದ ಹಣವನ್ನು ಬಳಸಿದ್ದಾರೆಂದು ಕಾಂಗ್ರೆಸ್​ ಶಾಸಕ ನರೇಂದ್ರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಐಶ್ವರ್ಯ ಗೌಡ ಜೊತೆ ನರೇಂದ್ರ ಸ್ವಾಮಿ ಇರೋ ಫೋಟೋಸ್ ಇವೆ. ಶಾಸಕರಿಗೂ ಆಕೆ ಜೊತೆ ನಂಟಿರುವುದಕ್ಕೆ ಈ ಫೋಟೋಗಳೇ ಸಾಕ್ಷಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:Happy new year! ಚಿನ್ನ, ಬೆಳ್ಳಿ ಖರೀದಿಸೋರಿಗೆ ಗೋಲ್ಡನ್​ ನ್ಯೂಸ್.. ಬೆಲೆಯಲ್ಲಿ ಭಾರೀ ಇಳಿಕೆ

publive-image

ಕಾಂಗ್ರೆಸ್ ನಾಯಕನ ಚುನಾವಣೆಗೆ ವಂಚನೆ ಮಾಡಿದ ದುಡ್ಡೇ ಫಂಡಿಂಗ್ ಮಾಡಲಾಗಿದೆ. ಕೈ ಶಾಸಕರು ಹಾಗೂ ಮುಖಂಡರ ಬೆಂಬಲದಿಂದಲೇ ಈ ದೋಖಾ ನಡೆದಿದೆ. ಐಶ್ವರ್ಯ ಫ್ರಾಡ್ ಕೆಲಸಕ್ಕೆ ಕೈ ನಾಯಕರು ಬೆಂಬಲ ನೀಡಿದ್ದಾರೆ. ಮಂಡ್ಯದ ಕಿರುಗಾವಲಿಂದ ಬೆಂಗಳೂರಿನವರೆಗೂ ವಂಚನೆ ನಡೆದಿದೆ. ಹೀಗಾಗಿ ಈ ಪ್ರಕರಣವನ್ನ ಸಿಬಿಐ ಹಾಗೂ ಇಡಿಗೆ ವಹಿಸಬೇಕು ಎಂದು ಹಾಲಿ ಶಾಸಕರ ಬಗ್ಗೆ ಮಾಜಿ ಶಾಸಕ ಡಾ.ಕೆ ಅನ್ನದಾನಿ ಆರೋಪಿಸಿದ್ದಾರೆ.

ವಾರಾಹಿ ವರ್ಲ್ಡ್‌ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 14 ಕೆ.ಜಿ ಚಿನ್ನ ವಂಚಿಸಿದ ಪ್ರಕರಣದಲ್ಲಿ ಐಶ್ವರ್ಯ ಗೌಡ ಎ1 ಆರೋಪಿಯಾಗಿದ್ದಾರೆ. ಅದರಂತೆ ಹರೀಶ್ ಗೌಡ ಎ2 ಆರೋಪಿಯಾಗಿದ್ದಾರೆ. ಸದ್ಯ ಇವರಿಬ್ಬರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನು ಇದೇ ಕೇಸ್​ನಲ್ಲಿ ಕಾಂಗ್ರೆಸ್​ ಮಾಜಿ ಸಂಸದ ಡಿ.ಕೆ ಸುರೇಶ್, ಶಾಸಕ ವಿನಯ್ ಕುಲಕರ್ಣಿ ಅವರ ಹೆಸರು ಕೂಡ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಇದೀಗ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ವಿರುದ್ಧ ಆರೋಪ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment