ಚಿನ್ನ ಕೇಸ್​ಗೆ ಟ್ವಿಸ್ಟ್ ಕೊಟ್ಟ ED ಟೀಂ; ಬಂಗಾರಿ ಐಶ್ವರ್ಯ ಗೌಡ ಮತ್ತೆ ಅರೆಸ್ಟ್​..! ಆಗಿದ್ದೇನು?

author-image
Ganesh
Updated On
ಮತ್ತೊಂದು ವಂಚನೆ ಕೇಸ್‌.. ಐಶ್ವರ್ಯಾ ಗೌಡ ಬಂಧನದ ಬೆನ್ನಲ್ಲೇ ಬಿಡುಗಡೆ; ಏನಿದು ಹೊಸ ಟಿಸ್ಟ್‌?
Advertisment
  • ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಮತ್ತೆ ಐಶ್ವರ್ಯ ಲಾಕ್!
  • ವಿನಯ್ ಕುಲಕರ್ಣಿ ನಿವಾಸದಲ್ಲಿ ಮುಂದುವರೆದ ಶೋಧ
  • ಸತತ 16 ಗಂಟೆಗಳಿಂದ ಶೋಧಕಾರ್ಯ ನಡೀತಿದೆ

ಚಿನ್ನ ಸೇರಿದಂತೆ ಹಲವು ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಐಶ್ವರ್ಯ ಗೌಡಗೆ ಇದೀಗ ಇ.ಡಿ ಶಾಕ್ ನೀಡಿದೆ. ಐಶ್ವರ್ಯ ಜೊತೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ನಿವಾಸದಲ್ಲೂ ಇ.ಡಿ ಅಧಿಕಾರಿ ಠಿಕಾಣಿ ಹಾಕಿದ್ದಾರೆ. ಹಲವು ದಾಖಲೆಗಳ ಪರಿಶೀಲನೆ ವೇಳೆ ಐಶ್ವರ್ಯಾಳನ್ನ ಇ.ಡಿ ಟೀಂ ಬಂಧಿಸಿದೆ.

ಮತ್ತೆ ಐಶ್ವರ್ಯ ಲಾಕ್!

ಅಕ್ರಮ ಹಣಕಾಸು ವ್ಯವಹಾರದ ಸಂಬಂಧ ಈ ಇಬ್ಬರ ಮನೆಗಳ ಮೇಲೆ ಗುರುವಾರ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಐಶ್ವರ್ಯಗೌಡಳನ್ನ ಬಂಧಿಸಿದ್ದಾರೆ. ನಿನ್ನೆ ಬೆಳ್ಳಂಬೆಳಗ್ಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲಿನಲ್ಲಿರುವ ನಿವಾಸ ಹಾಗೂ ಬೆಂಗಳೂರಿನ ಯಶವಂತಪುರದ ಕಾರ್ಡಿನಲ್ ಅಪಾರ್ಟ್​​​ಮೆಂಟ್​​ನ ಫ್ಲಾಟ್​ಗೆ ಐವರು ಇ.ಡಿ ಅಧಿಕಾರಿಗಳ ತಂಡ ಎರಡು ಕಾರಿನಲ್ಲಿ ಬಂದು ದಾಳಿ ನಡೆಸಿದೆ. ಐಶ್ವರ್ಯಗೌಡ ಮನೆಯಲ್ಲಿ ರೇಡ್ ಮಾಡೋದಕ್ಕೆ ಸಿಆರ್‌ಪಿಎಫ್ ಯೋಧರನ್ನ ಭದ್ರತೆಗೆ ಕರೆತಂದು ಇಡೀ ಮನೆ ತಲಾಶ್ ಮಾಡಿದ್ದಾರೆ. ಇಂಚಿಂಚೂ ಬಿಡದೆ ಸಿಕ್ಕ ಎಲ್ಲಾ ಮಹತ್ವದ ದಾಖಲೆ ವಸಪಡಿಸಿಕೊಂಡಿದ್ದಾರೆ. ಇಡಿ ಅಧಿಕಾರಿಗಳು ಇಂದೇ ನ್ಯಾಯಧೀಶರ ಮುಂದೆ ಐಶ್ವರ್ಯಗೌಡಳನ್ನ ಹಾಜರು ಪಡಿಸಲಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಗುಡ್​ನ್ಯೂಸ್​.. 50 ವರ್ಷದ ಒಳಗಿನವರಿಗೆ 100ಕ್ಕೂ ಹೆಚ್ಚು ಉದ್ಯೋಗಗಳು

publive-image

ಮಾಜಿ ಸಚಿವ ವಿನಯ್ ಕುಲಕರ್ಣಿ ನಿವಾಸದಲ್ಲಿ ಇಡಿ ಪರಿಶೀಲನೆ ಮುಂದುವರೆದಿದೆ. ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ನಿರಂತರ 16 ಗಂಟೆಗಳಿಂತಲೂ ಹೆಚ್ಚು ಕಾಲ ಇಡಿ ಅಧಿಕಾರಿಗಳ ಪರಿಶೀಲನೆ ನಡೆದಿದೆ. 4 ಕಾರ್​ಗಳಲ್ಲಿ ಬಂದಿರೋ 10ಕ್ಕೂ ಹೆಚ್ಚು ಅಧಿಕಾರಿಗಳು ವಿನಯ್ ಕುಲಕರ್ಣಿ ಬ್ಯಾಂಕ್ ದಾಖಲಾತಿಗಳನ್ನ ಪರಿಶೀಲಿಸ್ತಿದ್ದಾರೆ.

ಇದನ್ನೂ ಓದಿ: ಅಂತೂ, ಇಂತೂ ತವರಿನಲ್ಲಿ ಗೆದ್ದ ಆರ್​ಸಿಬಿ; ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ಪಾಟೀದಾರ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment