14 kg ಚಿನ್ನ ವಂಚಿಸಿದ ‘ಬಂಗಾರಿ’ ಕೇಸ್‌ಗೆ ಹೊಸ ಟ್ವಿಸ್ಟ್‌.. ಐಶ್ವರ್ಯಾ ಗೌಡ ಬಂಧನ; ಆಗಿದ್ದೇನು?

author-image
admin
Updated On
₹9 ಕೋಟಿ ಚಿನ್ನ ವಂಚನೆ ಕೇಸ್.. ಐಶ್ವರ್ಯಾ ಗೌಡ ಬಿಡುಗಡೆಗೆ ಹೈಕೋರ್ಟ್ ಆದೇಶ; ಮುಂದೇನು?
Advertisment
  • ವಾರಾಹಿ ವರ್ಲ್ಡ್‌ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಪ್ರಕರಣ
  • ಕೊನೆಗೂ ಎ1 ಐಶ್ವರ್ಯ ಗೌಡ, ಎ2 ಹರೀಶ್ ಗೌಡ ಬಂಧನ
  • 14 ಕೆ.ಜಿ 660 ಗ್ರಾಂ ಚಿನ್ನಾಭರಣ ಖರೀದಿಸಿದ ದಾಖಲೆಗಳು

ಬೆಂಗಳೂರು: ವಾರಾಹಿ ವರ್ಲ್ಡ್‌ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 14 ಕೆಜಿ ಚಿನ್ನ ವಂಚಿಸಿದ ಪ್ರಕರಣದಲ್ಲಿ ಕೊನೆಗೂ ಎ1 ಐಶ್ವರ್ಯ ಗೌಡ, ಎ2 ಹರೀಶ್ ಗೌಡ ಅವರನ್ನ ಬಂಧಿಸಲಾಗಿದೆ. ವಿಚಾರಣೆಗೆ ಹಾಜರಾಗಿದ್ದ ವೇಳೆ ಚಂದ್ರ ಲೇಔಟ್ ಪೊಲೀಸರು ಇಂದು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

ವಾರಾಹಿ ವರ್ಲ್ಡ್‌ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಾದ ವನಿತಾ ಐತಾಳ್ ಅವರು ಐಶ್ವರ್ಯ ಗೌಡ ವಿರುದ್ಧ ಕೇಸ್ ದಾಖಲಿಸಿದ್ದರು. FIR ದಾಖಲಾದ್ರೂ ಐಶ್ವರ್ಯ ಅವರನ್ನ ಬಂಧಿಸದೇ ಇರೋದು ಟೀಕೆಗೆ ಗುರಿಯಾಗಿತ್ತು. ನಾಪತ್ತೆಯಾಗಿದ್ದ ಐಶ್ವರ್ಯ ಗೌಡ ಅವರು ಇಂದು ಪೊಲೀಸ್ ಠಾಣೆಗೆ ಹಾಜರಾಗಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ.

publive-image

ಪೊಲೀಸರಿಗೆ ದಾಖಲೆ ಸಲ್ಲಿಕೆ!
ದೂರುದಾರೆ ವನಿತಾ ಅವರಿಗೆ ತನಿಖಾಧಿಕಾರಿಗಳು ಚಿನ್ನ ಖರೀದಿ ದಾಖಲಾತಿಯನ್ನು ಒದಗಿಸುವಂತೆ ಸೂಚಿಸಿದ್ದರು. ಅದರಂತೆ ಚಂದ್ರಾಲೇಔಟ್ ಠಾಣೆ ಇನ್ಸ್​ಪೆಕ್ಟರ್ ಭರತ್​ ಅವರಿಗೆ ವನಿತಾ ಅವರು ದಾಖಲೆಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: 9 ಕೋಟಿ ಗೋಲ್ಡ್​ ಖರೀದಿಸಿ ವಂಚನೆ ಪ್ರಕರಣ; ಯಾರು ಈ ಐಶ್ವರ್ಯಗೌಡ? ಹಿನ್ನೆಲೆ ಏನು? 

ಐಶ್ವರ್ಯ ಗೌಡ, ಪತಿ ಹರೀಶ್, ನಟ ಧರ್ಮೇಂದ್ರ ವಿರುದ್ಧ ಕೇಸ್ ದಾಖಲಿಸಿದ್ದ ವನಿತಾ ಐತಾಳ್ ಅವರು ಆರೋಪಿಗಳು ವಾರಾಹಿ ಜ್ಯುವೆಲ್ಲರ್ಸ್‌ನಲ್ಲಿ 14 ಕೆ.ಜಿ 660 ಗ್ರಾಂ ಚಿನ್ನಾಭರಣ ಖರೀದಿಸಿದ ದಾಖಲೆಯನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ.

ವಾರಾಹಿ ಗೋಲ್ಡ್‌ನ ಕೋಟಿ, ಕೋಟಿ ವಂಚನೆ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದ್ದಂತೆ ಪ್ರಕರಣದ ಮೂವರು ಆರೋಪಿಗಳು ನಾಪತ್ತೆಯಾಗಿದ್ದರು. ಐಶ್ವರ್ಯ ಗೌಡ, ಪತಿ ಹರೀಶ್, ನಟ ಧರ್ಮೇಂದ್ರ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ ಆಗಿದ್ದರು. ಐಶ್ವರ್ಯ ಗೌಡ, ಪತಿ ಹರೀಶ್, ನಟ ಧರ್ಮೇಂದ್ರಗೆ ಪೊಲೀಸರು ನೋಟಿಸ್ ನೀಡಿದ್ದು ಶೋಧ ಕಾರ್ಯ ನಡೆಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment