ನ್ಯೂಸ್​ಫಸ್ಟ್​ ಜೊತೆ ಐಶ್ವರ್ಯ ಗೌಡ EXCLUSIVE ಮಾತು.. ಎಸಿಪಿ ಭರತ್ ರೆಡ್ಡಿ ಕಡೆ ಬೊಟ್ಟು ಮಾಡಿದ್ರಾ?

author-image
Bheemappa
Updated On
ನ್ಯೂಸ್​ಫಸ್ಟ್​ ಜೊತೆ ಐಶ್ವರ್ಯ ಗೌಡ EXCLUSIVE ಮಾತು.. ಎಸಿಪಿ ಭರತ್ ರೆಡ್ಡಿ ಕಡೆ ಬೊಟ್ಟು ಮಾಡಿದ್ರಾ?
Advertisment
  • ಯಾವ ಅಧಿಕಾರಿ ಜೊತೆನೂ ಗೋವಾ ಟ್ರಿಪ್​ಗೆ ಹೋಗಿಲ್ಲ- ಐಶ್ವರ್ಯ
  • ಪರ್ಸನಲ್​ ಲೈಫ್​ದು ಏನೋ ಹೇಳ್ತಿದ್ದೀರಲ್ಲಾ ಚಾರ್ಜ್​ಶೀಟ್​​ಗೆ ಹಾಕಿ
  • ನನ್ನ ಖಾಸಗಿ ವಿಚಾರಗಳನ್ನ ಯಾಕೆ ಎಲ್ಲರ ಬಳಿ ಹೇಳ್ತಿದ್ದಾರೆ- ಆಕ್ರೋಶ

ಹತ್ತಾರು ವಂಚನೆ ಆರೋಪದಲ್ಲಿ ಸಿಲುಕಿ ವಿಲ ವಿಲ ಅಂತಿರುವ ಐಶ್ವರ್ಯಗೌಡ ನ್ಯೂಸ್​ಫಸ್ಟ್​ ಜೊತೆ EXCLUSIVE ಮಾತುಕತೆ ನಡೆಸಿದ್ದಾರೆ. ಎಲ್ಲಾ ಆರೋಪಗಳು ಸುಳ್ಳು.. ಸುಳ್ಳು ಅಂತಿರುವ ಐಶ್ವರ್ಯಗೌಡ ನಾನವಳಲ್ಲ.. ನಾನವಳಲ್ಲ.. ಅಂತ ಹೊಸ ವರಸೆ ತೆಗಿದಿದ್ದಾರೆ.

ಐಶ್ವರ್ಯ ಗೌಡ ಅಲಿಯಾಸ್ ನವ್ಯಶ್ರೀ. ವಾರಾಹಿ ಚಿನ್ನದ ಮಳಿಗೆಯಿಂದ 14 ಕೆಜಿ ಚಿನ್ನ ಪಡೆದು ವಂಚಿಸಿದ ಆರೋಪ ಹೊತ್ತಿರುವ ಆರೋಪಿ. ವನಿತಾ ಐತಾಳ್‌- ಐಶ್ವರ್ಯಗೌಡ ಎಂಬ ಪ್ರಾಣ ಸ್ನೇಹಿತೆಯರ ನಡುವಿನ ಗೋಲ್ಡ್‌ ಗುದ್ದಾಟದಲ್ಲಿ ದೊಡ್ಡ ದೊಡ್ಡವರ ಹೆಸರು ಕೇಳಿ ಬಂದಿತ್ತು. ಇದೇ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟನ ಪಾತ್ರದ ಪರಕಾಯ ಪ್ರವೇಶವಾಗಿ ಕೇಸ್​ಗೆ ಹೊಸ ಟ್ವಿಸ್ಟ್​ ಸಹ ಸಿಕ್ಕಿತ್ತು.

publive-image

ವಾರಾಹಿ ಚಿನ್ನದ ಮಳಿಗೆಗೆ ವಂಚಿಸಿದ ಆರೋಪದ ಜೊತೆ ಐಶ್ವರ್ಯ ಮೇಲೆ ಸಾಲು ಸಾಲು ಆರೋಪಗಳು ಕೇಳಿ ಬಂದಿದ್ವು ಮಂಡ್ಯದಲ್ಲೂ ಐಶ್ವರ್ಯ ವಿರುದ್ಧ ವಂಚನೆ ಕೇಸ್​ ಒಂದು ದಾಖಲಾಗಿತ್ತು ಇನ್ನೂ ಆರ್​.ಆರ್​ ನಗರದ ಸ್ಪರ್ಶ್​ ಆಸ್ಪತ್ರೆ ವೈದ್ಯೆ ಡಾ.ಮಂಜುಳಗೂ, ಅಕ್ಕಾ 5 ಕೋಟಿ 3 ಲಕ್ಷ ವಂಚಿಸಿದ್ದಾಳೆಂದು ಕೇಸ್​ ದಾಖಲಾಗಿತ್ತು. ಈ ಮಧ್ಯೆ ಐಶ್ವರ್ಯಗೌಡ ಪರಪ್ಪನ ಅಗ್ರಹಾರ ಜೈಲು ಸೇರಿ ರಿಲೀಸ್​ ಆಗಿ ವಿಚಾರಣೆ ವ್ಯೂಹದಲ್ಲಿ ಸಿಲುಕಿ ವಿಲ ವಿಲ ಅನ್ನುವಂತಾಗಿದೆ.

ಎಸಿಪಿ ಭರತ್ ರೆಡ್ಡಿಯ ಕಡೆ ಬೊಟ್ಟುಮಾಡಿದ ಐಶ್ವರ್ಯಗೌಡ

ಆರೋಪಗಳ ಸುಳಿಯಲ್ಲಿ ಸಿಲುಕಿರುವ ಐಶ್ವರ್ಯ ಗೌಡ ನ್ಯೂಸ್​ಫಸ್ಟ್ ಜೊತೆ EXCLUSIVE ಮಾತು ಕತೆ ನಡೆಸಿದ್ದಾರೆ. ಎಸಿಪಿ ಭರತ್ ರೆಡ್ಡಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ. ನನ್ನ ಖಾಸಗಿ ವಿಚಾರಗಳನ್ನ ಯಾಕೆ ಎಲ್ಲರ ಬಳಿ ಹೇಳ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

ಈಗ ಎಲ್ಲ ತೋರಿಸುತ್ತಿದ್ದಾರಲ್ಲ ಅದೆಲ್ಲಾ ಕ್ರಿಯೇಟ್ ಮಾಡಿ ಕೊಡಬಹುದೇ ಹೊರತು. ಯಾವ ಆಫೀಸರ್​ ಜೊತೆ ನಾನು ಗೋವಾ ಟ್ರಿಪ್ ಮಾಡಿದೆ. ನನ್ನ ಜೊತೆಗಿನ ಕ್ಲೀಸ್ ಫ್ರೆಂಡ್ಸ್​ಗೆ, ಕುಟುಂಬದವರಿಗೆ ಎಲ್ಲ ಗೊತ್ತಿರುತ್ತದೆ. ಗೋವಾಗೆ ಅಂತ ಹೋದರೆ ನನ್ನ ಕುಟುಂಬದ ಜೊತೆ ಮಾತ್ರ ಹೋಗಿರುವುದು. ಬೇರೆ ಯಾರ ಜೊತೆನೂ ಹೋಗಿಲ್ಲ. ಹೋಗೋದು ಇಲ್ಲ. ಗೋವಾದ ವಿಷಯದಲ್ಲಿ ಮನಸಿಗೆ ತುಂಬಾ ಹರ್ಟ್ ಆಗಿದೆ. ಫ್ರೆಂಡ್ಸ್​ ಜೊತೆನೂ ನಾನು ಗೋವಾಗೆ ಹೋಗಿಲ್ಲ. ಯಾವುದೋ ಅಧಿಕಾರಿನಾ ಗೋವಾಗೆ ಕರೆದುಕೊಂಡು ಹೋಗಿದ್ದೀನಿ ಎಂದು ಚೀಫ್.. ಚೀಫ್ ಮಾತನಾಡಿದ್ದಾರೆ. ಅದು ಏನಿದೆ ಎಂದು ತೋರಸಲಿ. ಇಲ್ಲದಿರುವುದನ್ನ ಇವರು ಕ್ರಿಯೇಟ್ ಮಾಡಿ ತೋರಿಸಬಹುದು ಹೊರತು, ಆ ತರದ್ದು ಯಾವುದನ್ನು ನಾನು ಮಾಡಿಲ್ಲ.

ಐಶ್ವರ್ಯ ಗೌಡ, ವಂಚನೆ ಆರೋಪಿ

ಇನ್ನೂ ನನ್ನ ವಿರುದ್ಧ ಕೇಳಿಬಂದ ಅಕ್ರಮವಾಗಿ ಸಿಡಿಆರ್​ ತೆಗೆಸಿರೋ ಆರೋಪವೂ ಸುಳ್ಳು ಎಂದು ಐಶ್ವರ್ಯ ತಿಳಿಸಿದರು.

ನಾನು ಯಾವುದನ್ನು ಮಾಡಿಲ್ಲ ಎಂದಿದ್ದಕ್ಕೆ ಕೋರ್ಟ್​ ಸ್ಟೇ ಕೊಟ್ಟಿದೆ. ತನಿಖೆ ಏನಿದೆ ಅದನ್ನು ಮುಂದುವರೆದು ನಮ್ಮ ವಕೀಲರು ಜೊತೆ ಚರ್ಚೆ ಮಾಡುತ್ತೇವೆ. ಅವರ ಫ್ರೆಂಡ್​ಗೆ ಕೇಸ್ ಕೊಡುತ್ತಾರಂತೆ, ಅವರ ಸ್ನೇಹಿತನೇ ಬಂದು ನನ್ನ ತನಿಖೆ ಮಾಡುತ್ತಾರಂತೆ. ಹಂಗೇನು ಇದ್ದರೇ ಚಾರ್ಜ್​ಶೀಟ್​ಗೆ ಹಾಕಿ. ನಾನು ಇನ್ನೊಂದು ಏನೋ ಮಾಡಿದ್ದೇನೆ ಎಂದು ಹೇಳುತ್ತಿದ್ದೀರಲ್ಲ. ಪರ್ಸನಲ್​ ಲೈಫ್​ದು, ಇನ್ನೊಂದು ಮತ್ತೊಂದು ಅನ್ನೋದು ತೆಗೆದು ಚಾರ್ಜ್​ಶೀಟ್​​ಗೆ ಹಾಕಿ.

ಐಶ್ವರ್ಯ ಗೌಡ, ವಂಚನೆ ಆರೋಪಿ

publive-image

ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಹೋಗಿ ಗಂಗಾಸ್ನಾನ ಮಾಡಲಾಗದ ಪರಿಸ್ಥಿತಿ.. ಮನೆಯಲ್ಲೇ ಗಂಗೆ ಚಿಮ್ಮಿಸಿದ ಗೌರಿ ಅಮ್ಮ

ಇನ್ನೂ ಡಿ.ಕೆ ಸುರೇಶ್​ ತಂಗಿ ಅಂತ ಎಲ್ಲರೂ ಹೇಳ್ತಿರೋದು ನನಗೆ ಖುಷಿ ಕೊಡ್ತಿದೆ ಅಂತ ವಿರೋಧಿಗಳಿಗೆ ಐಶ್ವರ್ಯಗೌಡ ಟಾಂಗ್ ನೀಡಿದ್ದಾರೆ.

ಡಿ.ಕೆ ಸುರೇಶ್ ಅವರು ನಮ್ಮ ಏರಿಯಾದ ಸಂಸದರು ಆಗಿದ್ದರು. ನಾನು ಇರೋದು ಆರ್​ಆರ್​ ನಗರದಲ್ಲಿ. ಗೊತ್ತಿಲ್ಲ ಅಂತ ನಾನು ಹೇಗೆ ಹೇಳಲಿ. ಅವರ ತಂಗಿ ಎಂದು ಇವರೆಲ್ಲಾ ಹೇಳುತ್ತಿರುವುದು ನನಗೆ ಒಂದು ಕಡೆ ಖುಷಿ ಕೊಟ್ರೆ, ಇನ್ನೊಂದು ಕಡೆ ನೋವು ಕೊಡುತ್ತಿದೆ. ಅಧಿಕಾರಿಗಳ ಜೊತೆ ಗೋವಾ ಟ್ರಿಪ್​ ಎಂದು ಹುಟ್ಟು ಹಾಕಿ ಸಮ್​ ಥಿಂಗ್.. ಸಮ್​ ಥಿಂಗ್ ಹೇಳುತ್ತಿದ್ದರಲ್ಲಾ.. ಹಾಗೇ ಹೇಳದೇ ಡಿ.ಕೆ ಸುರೇಶ್ ಅವರ ತಂಗಿ ಅಂತ ಹೇಳಿದ್ದಾರಲ್ಲ ಅದು ನನಗೆ ಸ್ವಲ್ಪ ಸಮಾಧಾನ. ಕೇಸ್​ಗಳೆಲ್ಲಾ ಏನಿದೆ, ಅದೆಲ್ಲಾ ಕೋರ್ಟ್​ನಲ್ಲಿವೆ. ಕೋರ್ಟ್​ ಏನು ತೀರ್ಪು ಕೊಡುತ್ತೋ ಅದನ್ನು ಕಾದು ನೋಡೋಣ.

ಐಶ್ವರ್ಯ ಗೌಡ, ವಂಚನೆ ಆರೋಪಿ

ಆರೋಪಗಳ ಸುಳಿಯಲ್ಲಿ ಸಿಲುಕಿರೋ ಐಶ್ವರ್ಯಗೌಡ ನಾನವಳಲ್ಲ ನಾನವಳಲ್ಲ ಅಂತ ಹೊಸ ವರಸೆ ತೆಗೆದಿದ್ದಾರೆ. ಹಾಗಿದ್ರೆ ಐಶ್ವರ್ಯಗೌಡ ವಂಚನೆ ಮಾಡಿಲ್ಲ ಅಂದ್ರೆ ಈ ಆರೋಪಗಳೆಲ್ಲಾ ಸುಳ್ಳಾ ಅನ್ನೋದು ಪೊಲೀಸರ ತನಿಖೆ ಬಳಿಕವಷ್ಟೇ ಹೊರಬೀಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment