/newsfirstlive-kannada/media/post_attachments/wp-content/uploads/2025/01/Aishwarya-1.jpg)
ಬೆಂಗಳೂರು: ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 9.82 ಕೋಟಿ ರೂಪಾಯಿ ಮೌಲ್ಯದ 14 ಕೆಜಿ ಚಿನ್ನ ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಮೇಲೆ ಅವರ ವಂಚನೆಗಳು ಹೊರ ಬಂದಿದ್ದವು. ಇವುಗಳಿಗೆ ಸಂಬಂಧಿಸಿದಂತೆ ಸದ್ಯ ಐಶ್ವರ್ಯಾ ಗೌಡ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಇಡಿ ಅಧಿಕಾರಿಗಳು, ಐಶ್ವರ್ಯಾ ಗೌಡಗೆ ಸಂಬಂಧಿಸಿದ ಅಂದಾಜು 3.98 ಕೋಟಿ ಮೌಲ್ಯದ ಫ್ಲಾಟ್‌ಗಳು, 2.01 ಕೋಟಿ ವೆಚ್ಚದ ನಿರ್ಮಾಣ ಹಂತದ ಕಟ್ಟಡ, ಜಮೀನ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಗದು ಹಾಗೂ ಐಶ್ವರ್ಯ ಬಳಸುತ್ತಿದ್ದ ವಾಹನಗಳು ಸೇರಿ 1.97 ಕೋಟಿ ಮೌಲ್ಯದಷ್ಟು ವಸ್ತು ಈಗ ಇಡಿ ವಶದಲ್ಲಿವೆ.
ಇದನ್ನೂ ಓದಿ:Pahalgam Attack; ಸಹೋದರರಿಂದ ಭಯೋತ್ಪಾಕರಿಗೆ ಸಹಾಯ.. ಕೋರ್ಟ್ಗೆ ಹಾಜರು ಪಡಿಸಿದ NIA
ಹೆಚ್ಚಿನ ಆದಾಯದ ಭರವಸೆ ನೀಡಿ ಹಲವು ವ್ಯಕ್ತಿಗಳಿಂದ ಚಿನ್ನ, ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಐಶ್ವರ್ಯಾ ಗೌಡ ಪಡೆದು ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಮೇಲೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇನ್ನು ಐಶ್ವರ್ಯಾ ಗೌಡ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್ಎ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿ ಇಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೆಸರು ಹೇಳಿಕೊಂಡು ಐಶ್ವರ್ಯಾ ಗೌಡ ವಂಚನೆ ಮಾಡಿದ್ದರು. ಈ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಡಿಕೆ ಸುರೇಶ್ ಅವರಿಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ಕೆಲ ಸಮಯ ಕಾಲಾವಕಾಶ ಕೇಳಿದ್ದ ಡಿ.ಕೆ ಸುರೇಶ್ ಅವರು ಜೂನ್ 23 ಅಂದರೆ ಇಂದು ವಿಚಾರಣೆಗೆ ಹಾಜರಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ