/newsfirstlive-kannada/media/post_attachments/wp-content/uploads/2024/12/aishwarya-rai-bachchan-1.jpg)
ಬಾಲಿವುಡ್ ತಾರಾ ದಂಪತಿ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಇಂದು ನಿನ್ನೆಯದಲ್ಲ. ಬಹಳ ವರ್ಷಗಳಿಂದಲೂ ಈ ಸುದ್ದಿ ಬಿಟೌನ್‌ನಲ್ಲಿ ಸದ್ದು ಮಾಡುತ್ತಲೇ ಬಂದಿದೆ. ತಮ್ಮ ದಾಂಪತ್ಯ ಜೀವನದ ಬಗ್ಗೆ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಇದುವರೆಗೂ ಯಾವುದೇ ಮಾತನಾಡದೆ ಇರೋದು ಪ್ರಮುಖ ಕಾರಣವಾಗಿದೆ.
ಈ ಬಾರಿ ಎಲ್ಲಾ ಗೊಂದಲಕ್ಕೂ ತೆರೆ ಎಳೆದಿರುವ ಈ ಸ್ಟಾರ್ ಜೋಡಿ ಒಂದು ಸೆಲ್ಫಿ ಮೂಲಕ ಸ್ಪೆಷಲ್ ಮೆಸೇಜ್ ನೀಡಿದೆ. ಡಿವೋರ್ಸ್ ಗಾಸಿಪ್‌ಗಳ ಮಧ್ಯೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿಯ ಕಾರ್ಯಕ್ರಮದಲ್ಲಿ ಇಬ್ಬರೂ ಬ್ಲ್ಯಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು ಸಂತೋಷ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪುಷ್ಪ ಸಿನಿಮಾಗೂ ತಿರುಪತಿಯ ಗಂಗಮ್ಮ ದೇವರಿಗೂ ಇದೆ ಲಿಂಕ್.. ಚಿತ್ರದ ಹಿಂದಿನ ಸ್ವಾರಸ್ಯಕರ ಕಥೆ..!
ಇತ್ತೀಚೆಗೆ ನಡೆದ ಅನಂತ್ ಅಂಬಾನಿ ಮದುವೆಗೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದರು. ನಾನೊಂದು ತೀರ, ನೀನೊಂದು ತೀರ ಅನ್ನೋ ಇವರಿಬ್ಬರ ನಡವಳಿಕೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಈ ಇಬ್ಬರೂ ಬೇರೆ, ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಚರ್ಚೆ ಆಗುತ್ತಾ ಇತ್ತು.
ಸದ್ಯ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ನಗು, ನಗುತ್ತಾ ಸೆಲ್ಫಿಗೆ ಫೋಸ್ ಕೊಡುತ್ತಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ತೆರೆ ಎಳೆಯುವ ಸುಳಿವು ಕೊಟ್ಟಿದ್ದಾರೆ.
ಸಾಮಾನ್ಯವಾಗಿ ತಾರಾ ದಂಪತಿಗಳು ಡಿವೋರ್ಸ್ ಪಡೆದಿದ್ದರೆ ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸುತ್ತಾರೆ. ಆದರೆ ಐಶ್ಚರ್ಯಾ ರೈ- ಅಭಿಷೇಕ್ ಬಚ್ಚನ್ ಈ ರೀತಿ ಯಾವುದೇ ಘೋಷಣೆ ಮಾಡಿಲ್ಲ. ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂದೇ ಬಾಲಿವುಡ್‌ನಲ್ಲಿ ಈಗಲೂ ಗುಸು, ಗುಸು ಕೇಳಿ ಬರುತ್ತಿದೆ. ಡಿವೋರ್ಸ್ ಆಗಿಯೂ ಫ್ಯಾಮಿಲಿ ಕಾರ್ಯಕ್ರಮದಲ್ಲಿ ಜೊತೆಯಾಗಿ ಭಾಗಿಯಾಗಿರಬಹುದು ಎಂದ ಕೆಲವರು ಲೆಕ್ಕಾಚಾರ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ