/newsfirstlive-kannada/media/post_attachments/wp-content/uploads/2025/03/AISWARYA.jpg)
ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಮುಂಬೈನಲ್ಲಿ ಬಸ್ ಮತ್ತು ಕಾರು ನಡುವೆ ದುರ್ಘಟನೆ ಸಂಭವಿಸಿದ್ದು, ವಿಚಾರ ತಿಳಿದು ಅಭಿಮಾನಿಗಳು ಒಂದು ಕ್ಷಣ ಗಾಬರಿಯಾಗಿದ್ದಾರೆ.
ಅಪಘಾತದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದರಿಂದ ಅಭಿಮಾನಿಗಳು ಆತಂಕ ವ್ಯಕ್ತಪಡಿಸ್ತಿದ್ದರು. ಇದೀಗ ಅಭಿಮಾನಿಗಳು ನಿಟ್ಟುಸಿರುವ ಬಿಡುವಂತಹ ಸುದ್ದಿಯನ್ನು ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರು ನೀಡಿದ್ದಾರೆ.
ಇದನ್ನೂ ಓದಿ: ರಜತ್, ವಿನಯ್ ಗೌಡ ರೀಲ್ಸ್ ಕೇಸ್ಗೆ ಬಿಗ್ ಟ್ವಿಸ್ಟ್; ಕೋರ್ಟ್ನಿಂದ ಮಹತ್ವದ ಆದೇಶ
ಕಾರು ಅಪಘಾತಕ್ಕೆ ಒಳಗಾಗಿದ್ದು, ನಿಜ. ಆದರೆ ಕಾರಿನಲ್ಲಿ ಐಶ್ವರ್ಯ ರೈ ಇರಲಿಲ್ಲ. ಪರಿಶೀಲನೆ ನಡೆಸಿದಾಗ ಐಶ್ವರ್ಯ ರೈ ಅವರ ಕಾರು ಅನ್ನೋದು ಮಾತ್ರ ದೃಢವಾಗಿದೆ. ಆದರೆ ಅವರು ಪ್ರಯಾಣಿಸುತ್ತಿರಲಿಲ್ಲ ಎಂದು ಮುಂಬೈ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.
ವೈರಲ್ ಆಗಿದ್ದು ಹೇಗೆ..?
ಅಪಘಾತ ಬೆನ್ನಲ್ಲೇ ಪಾಪರಾಜಿ (Paparazzi) ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದು ಅಪ್ಲೋಡ್ ಆಗಿತ್ತು. ವಿಡಿಯೋದಲ್ಲಿ ಅಪಘಾತದ ಸಂದರ್ಭದಲ್ಲಿನ ದೃಶ್ಯವನ್ನು ತೋರಿಸಲಾಗಿತ್ತು. ಇದನ್ನು ನೋಡಿದ ಐಶ್ವರ್ಯ ರೈ ಅಭಿಮಾನಿಗಳು ಗಾಬರಿಯಾಗಿ, ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡರು.
ಐಶ್ವರ್ಯ ರೈ ಅವರ ಕಾರಿನ ನಂಬರ್ 5050 ಆಗಿತ್ತು. ಇದೊಂದು ಫ್ಯಾನ್ಸಿ ನಂಬರ್ ಪ್ಲೇಟ್. ಐಶ್ವರ್ಯ ರೈ ಕಾರಿನ ನಂಬರ್ ಪ್ಲೇಟ್ ಬಗ್ಗೆ ಪಾಪರಾಜಿಗಳಿಗೆ ಗೊತ್ತಿತ್ತು. ಕಾರು ಫಾಲೋ ಮಾಡ್ತಿದ್ದಾಗ ಅಪಘಾತ ಆಗಿರೋದನ್ನು ನೋಡಿ, ಐಶ್ವರ್ಯ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ತಪಾಸಣೆ ವೇಳೆ ಕಾರಿನಲ್ಲಿ ಐಶ್ವರ್ಯ ರೈ ಇರಲಿಲ್ಲ ಅನ್ನೋದು ದೃಢವಾಗಿದೆ.
ಇದನ್ನೂ ಓದಿ: ಯುಗಾದಿ ಸಮೀಪದಲ್ಲೇ ಮತ್ತೆ ಮುನ್ನೆಲೆಗೆ ಬಂದ ಹಲಾಲ್ ಕಟ್! ಪ್ರಮೋದ್ ಮುತಾಲಿಕ್ ಹೇಳಿದ್ದೇನು?
Queen Aishwarya Rai 's car is hot by a bus 💔, Just praying that she is fine. pic.twitter.com/3TASTZr21P
— Empress Aishwarya Fan (@badass_aishfan) March 26, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ