ಕನ್ನಡತಿ ಐಶ್ವರ್ಯ ರೈ ಬಚ್ಚನ್ ಬಾಡಿಗಾರ್ಡ್ ಸಂಬಳ ಎಷ್ಟು? ಗೊತ್ತಾದ್ರೆ ಒಂದು ಕ್ಷಣ ಬೆಚ್ಚಿ ಬೀಳ್ತೀರಾ?

author-image
Gopal Kulkarni
Updated On
ಕನ್ನಡತಿ ಐಶ್ವರ್ಯ ರೈ ಬಚ್ಚನ್ ಬಾಡಿಗಾರ್ಡ್ ಸಂಬಳ ಎಷ್ಟು? ಗೊತ್ತಾದ್ರೆ ಒಂದು ಕ್ಷಣ ಬೆಚ್ಚಿ ಬೀಳ್ತೀರಾ?
Advertisment
  • ಐಶ್ವರ್ಯ ರೈ ಬಚ್ಚನ್ ಅವರ ಬಾಡಿಗಾಡ್ ಶಿವರಾಜ್ ಸಂಬಳ ಎಷ್ಟು?
  • ಕಳೆದ ಒಂದು ದಶಕದಿಂದ ಐಶ್ವರ್ಯ ರೈರನ್ನು ರಕ್ಷಿಸುತ್ತಿರುವ ಶಿವರಾಜ್​
  • ವರ್ಷಕ್ಕೆ ಎಷ್ಟು ಕೋಟಿ ರೂಪಾಯಿ ಗಳಿಸುತ್ತಾರೆ ಗೊತ್ತಾ ಐಶ್ ಬಾಡಿಗಾರ್ಡ್?

ರಾಜಕೀಯ ನಾಯಕರ ಬಳಿಕ, ಸಿನಿಮಾ ಇಂಡಸ್ಟ್ಟಿಯಲ್ಲಿಯೇ ಹೆಚ್ಚು ಬಾಡಿಗಾರ್ಡ್​ಗಳನ್ನು ಸೆಲೆಬ್ರೆಟಿಗಳು ಹೊಂದಿರುತ್ತಾರೆ. ಅಭಿಮಾನಿಗಳ ನೂಕು ನುಗ್ಗಲು, ಬೆದರಿಕೆ ಹೀಗೆ ಹಲವು ಕಾರಣಗಳಿಗಾಗಿ ತಮ್ಮ ರಕ್ಷಣೆಗೋಸ್ಕರ ಸಿನಿಮಾ ಸ್ಟಾರ್​​ಗಳು ಬಾಡಿಗಾರ್ಡ್​ಗಳನ್ನು ನೇಮಿಸಿಕೊಂಡಿರುತ್ತಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್, ದಳಪತಿ ವಿಜಯ್ ಹೀಗೆ ಅನೇಕ ನಟ ನಟಿಯರು ತಮ್ಮ ತಮ್ಮ ಬಾಡಿಗಾರ್ಡ್​ಗಳನ್ನು ಹೊಂದಿದ್ದಾರೆ. ಇಂದು ನಾವು ಬಚ್ಚನ್ ಕುಟುಂಬದ ಬಾಡಿಗಾರ್ಡ್​ಗಳ ಬಗ್ಗೆ ನಿಮಗೆ ಹೇಳ್ತೀವಿ.

ಐಶ್ವರ್ಯ ರೈ ಬಚ್ಚನ್​ ಬಾಡಿಗಾರ್ಡ್ ಯಾರು?
ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಸಿನಿಮಾ ಜಗತ್ತಿನ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರ ಸೌಂದರ್ಯ ಸೊಬಗಿನಿಂದಲೇ ಅದೆಷ್ಟೋ ಹುಡುಗರ ನಿದ್ದೆ ಕದ್ದಿರುವ ಐಶ್ವರ್ಯ ರೈ ಬಚ್ಚನ್, ತಮ್ಮದೇ ಆದ ಒಂದು ಫ್ಯಾನ್ ಫಾಲೊವಿಂಗ್​ ಹೊಂದಿದ್ದಾರೆ. ಅದು ಕೂಡ ಪಾನ್ ಇಂಡಿಯಾ ಬೇಸ್​ ಅಭಿಮಾನಿಗಳನ್ನು ಹೊಂದಿರುವ ಐಶ್ವರ್ಯ ರೈ ಬಚ್ಚನ್, ತಮ್ಮ ರಕ್ಷಣೆಗಾಗಿ ಶಿವರಾಜ್ ಎಂಬ ಬಾಡಿಗಾರ್ಡ್​ನ್ನು ಹೊಂದಿದ್ದಾರೆ. ಏರ್​ಪೋರ್ಟ್, ಪಾರ್ಟಿ, ಇವೆಂಟ್​ಗಳಿಗೆ ಹೋಗುವಾಗಲೆಲ್ಲಾ ಅಭಿಮಾನಿಗಳು ಐಶ್ವರ್ಯ ಮೇಲೆ ಮುಗಿಬೀಳುತ್ತಾರೆ. ಇವೆಲ್ಲವನ್ನು ನಿಯಂತ್ರಿಸಲು ಅಂತ ಶಿವರಾಜ್ ಐಶ್ವರ್ಯ ರೈ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:ಲಂಡನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಮಿಂಚಿದ ರಾಧಿಕಾ ಆಪ್ಟೆ; ಬೇಬಿ ಬಂಪ್​ ಫೋಟೋಗೆ ಪೋಸ್​ ಕೊಟ್ಟ ನಟಿ

publive-image

2015ರಲ್ಲಿ ಐಶ್ವರ್ಯ ರೈ ಬಾಡಿಗಾರ್ಡ್​ ಶಿವರಾಜ್ ಅವರ ಮದುವೆಯಾಯ್ತು. ಆ ಮದುವೆಗೆ ಖುದ್ದು ಐಶ್ವರ್ಯ ಹಾಜರಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡಿದ್ದವು. ಐಶ್ವರ್ಯ ರೈ ಬಚ್ಚನ್ ಅವರ ಬಗ್ಗೆ ಅಭಿಮಾನಿಗಳು ಹಾಡಿ ಹೊಗಳಿದ್ದರು. ಮದುವೆ ಮುಗಿಯುವವರೆಗೂ ಐಶ್ವರ್ಯ ಅಲ್ಲಿಂದ ಕದಲಿರಲಿಲ್ಲ. ಇದೆಲ್ಲವೂ ಕೂಡ ಐಶ್ವರ್ಯ ಹಾಗೂ ಅವರ ಬಾಡಿಗಾರ್ಡ್​​ ನಡುವೆ ಒಂದು ಅತ್ಯುತ್ತಮ ಬಾಂಧವ್ಯ ಬೆಸೆದಿತ್ತು.

ಇದನ್ನೂ ಓದಿ:ತುತ್ತು ಅನ್ನಕ್ಕೂ ಪರದಾಡ್ತಿದ್ದ ರಿಷಭ್ ಪಂತ್.. ಇಂದು ಕೋಟಿ, ಕೋಟಿಗೆ ಬೆಲೆಬಾಳುವ ರೀತಿ ಬೆಳೆದಿದ್ದೇಗೆ?

ಐಶ್ವರ್ಯ ರೈ ಮನೆಯಿಂದಾಚೆ ಕಾಲಿಟ್ಟ ಕೂಡಲೇ ಶಿವರಾಜ್ ಅವರ ಡ್ಯೂಟಿ ಶುರುವಾಗುತ್ತದೆ. ಶಿವರಾಜ್​ ಐಶ್ವರ್ಯ ಪಕ್ಕದಲ್ಲಿ ಇದ್ದಾರೆ ಅಂದ್ರೆ ಮುಗಿತು ಐಶ್ವರ್ಯರನ್ನು ಯಾರು ಕೂಡ ಟಚ್ ಮಾಡಲು ಸಾಧ್ಯವಾಗುವುದಿಲ್ಲ ಅಷ್ಟು ಕಟ್ಟುನಿಟ್ಟಾಗಿ ಅವರನ್ನು ಶಿವರಾಜ್ ಕಾಯುತ್ತಾರೆ ಎಂದು ಎಷ್ಟೋ ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದ್ದು ಇದೆ. ಅದು ಮಾತ್ರವಲ್ಲ ಶಿವರಾಜ್ ಒಬ್ಬ ಟೆಕ್ನಿಕಲ್ ಎಕ್ಸ್​ಪರ್ಟ್​ ಕೂಡ ಹೌದು ಎಂದು ಹೇಳಲಾಗುತ್ತದೆ. ಬಾಲಿವುಡ್ ನಟ ನಟಿಯರು ತಮ್ಮ ಬಾಡಿಗಾರ್ಡ್​ನನ್ನು ಆಯ್ಕೆ ಮಾಡಿಕೊಳ್ಳುವಾಗ ಹಲವು ಮಾನದಂಡಗಳ ಮೇಲೆಯೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೂ ಅವರ ಸಂಬಳ ಲಕ್ಷಕ್ಕೂ ಮೀರಿ ಇರುತ್ತದೆ.
.

publive-image

ಅದರಲ್ಲೂ ಅತಿಹೆಚ್ಚು ಸಂಬಳ ಪಡೆಯುವ ಬಾಡಿಗಾರ್ಡ್ ಯಾರು ಎಂಬ ಬಗ್ಗೆ ಚರ್ಚೆಯಾಗುಷ್ಟು ಅವರ ಸಂಬಳಗಳಿರುತ್ತವೆ. ಐಶ್ವರ್ಯ ರೈ ಬಾಡಿಗಾರ್ಡ್​ ಆಗಿ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶಿವರಾಜ್​ ಅವರ ಸಂಬಳ ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಇದೆ ಎಂದು ಅನೇಕ ವರದಿಗಳಲ್ಲಿ ಸ್ಪಷ್ಟವಾಗಿದೆ. ಅಂದ್ರೆ ಇದು ಎಂಎನ್​ಸಿಯಲ್ಲಿ ಕಾರ್ಯನಿರ್ವಹಿಸುವ ಎಕ್ಸಿಕ್ಯೂಟಿವ್​ಗಳಿಗಿಂತ ಅದೆಷ್ಟೋ ಪಟ್ಟು ಹೆಚ್ಚು.

publive-image

ಇನ್ನೂ ಅಮಿತಾಬ್​ ಬಚ್ಚನ್ ಕೂಡ ತಮ್ಮ ಬಾಡಿಗಾರ್ಡ್ ಜಿತೇಂದ್ರ ಶಿಂಧೆ ಜೊತೆಗಿಲ್ಲದೇ ಮನೆಯಿಂದ ಆಚೆ ಬರುವುದಿಲ್ಲ. ಅಮಿತಾಬ್​ ದೇಶ ವಿದೇಶ ಎಲ್ಲಿಗೇ ಹೋಗಲಿ ಅವರ ಹಿಂದೆ ಜಿತೇಂದ್ರ ಶಿಂಧೆ ಇದ್ದೆ ಇರುತ್ತಾನೆ. ಕೆಬಿಸಿ ಸೆಟ್​ನಲ್ಲಿಯೂ ಕೂಡ ಅವರ ಶೋ ಶೂಟಿಂಗ್ ಮುಗಿಯುವವರೆಗೂ ಶಿಂಧೆ ಅಲ್ಲೇ ಇರುತ್ತಾರೆ. ಇವರ ಸಂಬಳವೂ ಕೂಡ ತಿಂಗಳಿಗೆ ಲಕ್ಷ ಲಕ್ಷ ಅಂತಲೇ ಹೇಳಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment