ಕಾನ್ ಚಿತ್ರೋತ್ಸವದಲ್ಲಿ ಹಣೆಗೆ ‘ಸಿಂಧೂರ’ವಿಟ್ಟು ಐಶ್ವರ್ಯ ರೈ ಹೊಸ ಲುಕ್​.. ಇದರ ಅರ್ಥ ಏನು?

author-image
Bheemappa
Updated On
ಕಾನ್ ಚಿತ್ರೋತ್ಸವದಲ್ಲಿ ಹಣೆಗೆ ‘ಸಿಂಧೂರ’ವಿಟ್ಟು ಐಶ್ವರ್ಯ ರೈ ಹೊಸ ಲುಕ್​.. ಇದರ ಅರ್ಥ ಏನು?
Advertisment
  • ಐಶ್ವರ್ಯ ರೈ ಹಣೆಗೆ ಇಟ್ಟುಕೊಂಡ ಸಿಂಧೂರ ಏನನ್ನು ಸೂಚಿಸುತ್ತದೆ?
  • ಹಣೆಗೆ ಸಿಂಧೂರವಿಟ್ಟು ಕಾನ್ ಫಿಲ್ಮ ಫೆಸ್ಟಿವಲ್​ನಲ್ಲಿ ನಟಿ ಮಿಂಚಿಂಗ್
  • ಫ್ರಾನ್ಸ್​​ನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ 78ನೇ ಫಿಲ್ಮ ಫೆಸ್ಟಿವಲ್

78ನೇ ಕಾನ್​ ಫಿಲ್ಮ ಫೆಸ್ಟಿವಲ್​ನ ರೆಡ್​ ಕಾರ್ಪೆಟ್​​ ಮೇಲೆ ಬಾಲಿವುಡ್​ ಸ್ಟಾರ್ ನಟಿ ಐಶ್ವರ್ಯ ರೈ ಅವರು ಸೀರೆ ಧರಿಸಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಣೆಗೆ ಸಿಂಧೂರ ಇಟ್ಟುಕೊಂಡು ಚಿತ್ರೋತ್ಸವದಲ್ಲಿ ಎಲ್ಲರ ಗಮನ ಸೆಳೆಯುವ ಮೂಲಕ ಭಾರತದ ಆಪರೇಷನ್​ ಸಿಂಧೂರಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

publive-image

ಕಳೆದ ಹಲವು ವರ್ಷಗಳಿಂದ ಈ ಪ್ರತಿಷ್ಠಿತ ಕಾನ್​ ಫಿಲ್ಮ ಫೆಸ್ಟಿವಲ್​ನಲ್ಲಿ ನಟಿ ಐಶ್ವರ್ಯ ರೈ ಅವರು ವಿಭಿನ್ನ ವಿಭಿನ್ನ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಭಾರತದ ಸಂಪ್ರದಾಯದಂತೆ ಸೀರೆಯುಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಐಶ್ವರ್ಯ ರೈ ಅವರು ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದ ಜ್ಯುವೆಲ್ಲರಿಗಳನ್ನು ಧರಿಸಿದ್ದರು. ಅಲ್ಲದೇ ಬಿಳಿ ಬಣ್ಣದ ಸೀರೆಯಲ್ಲಿ, ಹಣೆಗೆ ಸಿಂಧೂರ ಇಟ್ಟು ಕಾಣಿಸಿಕೊಂಡಿರುವುದು ಪ್ರಮುಖವಾಗಿ ಎಲ್ಲರನ್ನು ಆಕರ್ಷಣೆ ಮಾಡಿದೆ.

ಇದನ್ನೂ ಓದಿ:ಎರಡು ಪ್ರತ್ಯೇಕ ಘಟನೆ; ಹೃದಯಾಘಾತದಿಂದ ನಿಧನ ಹೊಂದಿದ ಯುವಕ, ಯುವತಿ

publive-image

ಐವರಿ ಬಣ್ಣದ ಸೀರೆಯುಟ್ಟು ಹಣೆಗೆ ಕೆಂಪು ಬಣ್ಣದ ಸಿಂಧೂರ ಇಟ್ಟುಕೊಂಡಿದ್ದರು. ಈ ಸಿಂಧೂರ ಸ್ಪಷ್ಟವಾಗಿ ಎಲ್ಲರಿಗೂ ಕಾಣುವಂತೆ ಐಶ್ವರ್ಯ ಅವರು ಹೇರ್​ಸ್ಟೈಲ್ ಮಾಡಿದ್ದರು. ಇದು ಇತ್ತೀಚೆಗೆ ಪಾಕಿಸ್ತಾನದ ಮೇಲೆ ಭಾರತದ ಆಪರೇಷನ್ ಸಿಂಧೂರ ಬಗ್ಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

publive-image

ಐಶ್ವರ್ಯ ರೈ ಅವರ ದಾಂಪತ್ಯ ಜೀವನದ ಕುರಿತು ಇತ್ತೀಚೆಗೆ ಹೆಚ್ಚು ಚರ್ಚೆ ಆಗಿತ್ತು. ಆದರೆ ಹಣೆಗೆ ಕೆಂಪು ಬಣ್ಣದ ಸಿಂಧೂರ ಇಟ್ಟು ಗಂಡನಿಗೆ ಹತ್ತಿರ ಇರುವುದಾಗಿ ಉತ್ತರ ಕೂಡ ಕೊಟ್ಟಂತೆ ಇದೆ. ಪತಿ ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯ ರೈ ದೂರ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸಿಂಧೂರ ಇಟ್ಟುಕೊಂಡು ಚಿತ್ರೋತ್ಸವದಲ್ಲಿ ಭಾಗವಹಿಸುವ ಮೂಲಕ ಡಿವೋರ್ಸ್ ವದಂತಿಯನ್ನು ದೂರ ತಳ್ಳಿದ್ದಾರೆ. ಇದೀಗ ಐಶ್ವರ್ಯ ರೈ ಅವರ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment