/newsfirstlive-kannada/media/post_attachments/wp-content/uploads/2025/04/sisir.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇಷ್ಟು ದಿನ ಫ್ರೆಂಡ್ಸ್ ಆಗಿದ್ದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯಾ ಶಿಂಧೋಗಿ ಈಗ ಪಾರ್ಟ್ನರ್ಸ್ (ಪಾಲುದಾರಿಕೆ) ಆಗುತ್ತಿದ್ದಾರೆ.
ಇದನ್ನೂ ಓದಿ:ಸಖತ್ ಗ್ರ್ಯಾಂಡ್ ಆಗಿ ಅಮ್ಮನ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ದೀಪಿಕಾ ದಾಸ್; ಫೋಟೋಸ್ ಇಲ್ಲಿವೆ!
ಹೌದು, ಬಿಗ್ಬಾಸ್ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯಾ ಶಿಂಧೋಗಿ ರಾಮನವಮಿಯಂದೇ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬಿಗ್ಬಾಸ್ ಶೋನಿಂದ ಆಚೆ ಬರುತ್ತಿದ್ದಂತೆ ನಟ ಶಿಶಿರ್ ಶಾಸ್ತ್ರಿ, ಐಶ್ವರ್ಯಾ ಶಿಂಧೋಗಿ ಅವರು ಸಖತ್ ಸುದ್ದಿಯಲ್ಲಿದ್ದರು. ಬಿಗ್ಬಾಸ್ ಮನೆಯಲ್ಲಿ ಹುಟ್ಟಿಕೊಂಡ ಸ್ನೇಹ ಈಗ ಇನ್ನಷ್ಟು ಗಟ್ಟಿಯಾಗುತ್ತಿದೆ. ಅದಕ್ಕೆ ಸಾಕ್ಷಿಯಂತೆ ಈ ಇಬ್ಬರು ಹೊಸ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ.
View this post on Instagram
ಏನು ಬ್ಯುಸಿನೆಸ್?
ರಾಮನವಮಿಯಂದು ಶಿಶಿರ್, ಐಶ್ವರ್ಯಾ ಒಟ್ಟಿಗೆ ನಿಂತುಕೊಂಡು ತಾವು ಶುರು ಮಾಡುತ್ತಿರೋ ಹೊಸ ಬ್ಯುಸಿನೆಸ್ ಬಗ್ಗೆ ಮಾತಾಡಿದ್ದಾರೆ. ಇಂಟರ್‌ವ್ಯೂ ಒಂದರಲ್ಲಿ ಹೇಳಿದಂತೆ ನಾವು ಬ್ಯುಸಿನೆಸ್ ಪಾರ್ಟ್ನರ್ಸ್ ಆಗಿದ್ದೇವೆ. ನಾವಿಬ್ಬರೂ ಸೇರಿ ‘ಹರ ಸ್ಟುಡಿಯೋ’ ಆರಂಭಿಸಿದ್ದೇವೆ. ಇದೊಂದು ಪ್ರೊಡಕ್ಷನ್ ಹೌಸ್ ಆಗಿದ್ದು, ಕಾನ್ಸೆಪ್ಟ್ ಶೂಟ್ಸ್, ಪ್ರಿ ವೆಡ್ಡಿಂಗ್ ಫೋಟೋಶೂಟ್, ಜಾಹೀರಾತು, ಪೋರ್ಟ್‌ಫೋಲಿಯೋ ಶೂಟ್ಸ್, ಡೈರೆಕ್ಟರ್, ಕೊರಿಯೋಗ್ರಾಫರ್, ಸ್ಕ್ರಿಪ್ಟ್ ರೈಟರ್, ಮೇಕಪ್ ಆರ್ಟಿಸ್ಟ್, ಹೇರ್‌ಸ್ಟೈಲಿಸ್ಟ್ ಎಲ್ಲರೂ ಸಿಗ್ತಾರೆ ಎಂದು ಅನೌನ್ಸ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ