/newsfirstlive-kannada/media/post_attachments/wp-content/uploads/2024/11/aishwaray-1.jpg)
ಕನ್ನಡದ ಬಿಗ್ಬಾಸ್ ಸೀಸನ್ 11, 7ನೇ ವಾರಕ್ಕೆ ಕಾಲಿಟ್ಟಿದೆ. ಬರೋಬ್ಬರಿ 6 ವಾರ ಬಿಗ್ಬಾಸ್ ಮನೆಯಲ್ಲಿ ಜೊತೆಯಾಗಿದ್ದ ಸ್ಪರ್ಧಿಗಳ ಮಧ್ಯೆ ಮತ್ತೆ ವೈಮನಸ್ಸು ಮೂಡಿದೆ. ಊಟದ ವಿಚಾರಕ್ಕೆ ಗೋಲ್ಡ್ ಸುರೇಶ್ ಹಾಗೂ ಐಶ್ವರ್ಯ ಸಿಂಧೋಗಿ ನಡುವೆ ಗಲಾಟೆಯಾಗಿದೆ.
ಇದನ್ನೂ ಓದಿ:ನೀವು ಗರ್ಭಿಣಿ ಎಂಬ ಸಂದೇಶ.. ಮದುವೆ ಆಗದ 35ಕ್ಕೂ ಹೆಚ್ಚು ಹುಡುಗಿಯರಿಗೆ ಬಿಗ್ ಶಾಕ್!
ಬಿಗ್ಬಾಸ್ ಮನೆಗೆ ಬಂದ ಪ್ರತಿಯೊಬ್ಬರು ಇಷ್ಟೇ ಊಟ ಮಾಡಬೇಕು ಅಂತ ರೂಲ್ಸ್ ಇದೆ. ಆದರೆ ಕೆಲವೊಂದು ಬಾರಿ ಸ್ಪರ್ಧಿಗಳು ತಟ್ಟೆಗೆ ಜಾಸ್ತಿ ರೈಸ್ ಹಾಕಿಕೊಂಡು ಫಜಿತಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಆದರೆ ಇಲ್ಲೂ ಕೂಡ ಐಶ್ವರ್ಯ ತಮ್ಮ ತಟ್ಟೆಗೆ ಜಾಸ್ತಿ ಅನ್ನವನ್ನು ಹಾಕಿಕೊಂಡಿದ್ದಾರೆ ಎಂಬ ಕಾರಣಕ್ಕೆ ಗೋಲ್ಡ್ ಸುರೇಶ್ ಜೋರಾಗಿ ಸೌಂಡ್ ಮಾಡಿದ್ದಾರೆ.
ಒಂದೊಂದು ಬೌಲ್ಅನ್ನು ನಾನೇ ಹಾಕುತ್ತೀನಿ. 8 ಜನ ಇದ್ದಾರೆ ಅವರಿಗೂ ಬೇಕು ಅಂತ ಹೇಳಿದ್ದಾರೆ. ಆಗ ಐಶ್ವರ್ಯ ನನ್ನ ಪಾರ್ಟ್ ಅನ್ನು ನಾನು ಹಾಕಿಕೊಂಡಿದ್ದೇನೆ ಅಂತ ಹೇಳಿ, ತಮ್ಮ ತಟ್ಟೆಯಲ್ಲಿರೋ ಅನ್ನವನ್ನು ಮತ್ತೆ ಹಾಕಿದ್ದಾರೆ. ತಿನ್ನೋ ತುತ್ತು ಅನ್ನಕ್ಕಾಗಿ ಜಗಳ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ