BBK11: ಚಿನ್ನದಂಥ ಚಾನ್ಸ್ ಮಿಸ್ ಮಾಡ್ಕೊಂಡ ಐಶು; ನನಸು ಆಗೋದೇ ಇಲ್ವಾ ಆ ಕನಸು?

author-image
Veena Gangani
Updated On
BBK11: ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಸ್ಪರ್ಧಿ ಇವರೇ ನೋಡಿ
Advertisment
  • ನಾಮಿನೇಷ್​​ನಿಂದ ಪಾರು ಮಾಡಿ ಕೊಟ್ಟಿದ್ದ ರಜತ್ ಕಿಶನ್
  • 13ನೇ ವಾರಕ್ಕೆ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆಗಿದ್ದು ಯಾರು?
  • ನಾಮಿನೇಷ್​​ನಿಂದ ಪಾರಾಗಿದ್ದ ಬೆನ್ನಲ್ಲೇ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ

ಬಿಗ್​ಬಾಸ್​ಗೆ ಬಂದ ಪ್ರತಿಯೊಬ್ಬ ಸ್ಪರ್ಧಿಗೂ ಈ ಆಸೆ ಇದೇ ಆಗಿರುತ್ತೆ. ಒಂದಲ್ಲಾ ಒಂದು ಬಾರಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುವ ಮುನ್ನ ಈ ಪಟ್ಟವನ್ನು ಸ್ವೀಕರಿಸಬೇಕು. ಅಲ್ಲದೇ ಈ ಅಧಿಕಾರ ಸಿಕ್ಕ ಮೇಲೆ ನಮ್ಮ ನಾಯಕತ್ವ ಹೇಗೆ ಇರುತ್ತೆ ಅಂತ ಎಲ್ಲರಿಗೂ ಪರಿಚಯಿಸಬೇಕು ಅಂತ. ಆದ್ರೆ ಈ ಚಾನ್ಸ್ ಎಲ್ಲ ಸ್ಪರ್ಧಿಗಳಿಗೆ ದಕ್ಕುವುದಿಲ್ಲ. ಅದುವೆ ಕ್ಯಾಪ್ಟನ್ಸಿ ಪಟ್ಟ.

ಇದನ್ನೂ ಓದಿ:ನನ್ನ ತಲೆಗೆ ಪೊಲೀಸರು ಹೊಡೆದ್ರು- ಕೋರ್ಟ್​ನಲ್ಲಿ ಆಘಾತಕಾರಿ ವಿಚಾರ ತಿಳಿಸಿದ ಸಿಟಿ ರವಿ

publive-image

ಹೌದು, ಈ ಬಾರಿಯ ಬಿಗ್​ಬಾಸ್​ ಸೀಸನ್​ 11ರಲ್ಲಿ ಸ್ಪರ್ಧಿಗಳು ಕ್ಯಾಪ್ಟನ್ಸಿ ಪಟ್ಟ ಗಿಟ್ಟಿಸಿಕೊಳ್ಳೋದಕ್ಕಾಗಿ ತುಂಬಾನೇ ಕಷ್ಟ ಪಡುತ್ತಿದ್ದಾರೆ. ಕಾಲ ಕಾಲಕ್ಕೆ ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಆಡುತ್ತಿರೋ ಸ್ಪರ್ಧಿಗಳು ಒಂದಲ್ಲಾ ಒಂದು ಕಡೆ ಎಡವುತ್ತಿದ್ದಾರೆ. ಆದರೆ ಅಚ್ಚರಿ ಎಂದರೆ ಬಿಗ್​ಬಾಸ್​ ಮನೆಯಲ್ಲಿ ಎರಡು ಬಾರಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್​ ಕ್ಯಾಪ್ಟನ್ ಪಟ್ಟವನ್ನು ಸ್ವೀಕರಿಸಿದ್ದಾರೆ.

publive-image

ಆದರೆ ಐಶ್ವರ್ಯಾ ಈ ಹಿಂದೆ ಜೋಡಿ ಕ್ಯಾಪ್ಟನ್​ ಆಗಿದ್ದರು. ​ಈ ಬಾರಿ ಸಿಂಗಲ್​ ಕ್ಯಾಪ್ಟನ್​ ಆಗಬೇಕು ಅಂತ ಆಸೆ ಇಟ್ಟುಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ 13ನೇ ವಾರಕ್ಕೆ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆಗಿ ಭವ್ಯಾ ಗೌಡ ಆಯ್ಕೆಯಾದರು. ನಿನ್ನೆಯ ಸಂಚಿಕೆಯಲ್ಲಿ ಐಶ್ವರ್ಯಾ ಸಿಂಧೋಗಿ, ಈ ಸಲ ನಾನು ಕ್ಯಾಪ್ಟನ್​ ಆಗಲೇಬೇಕು. ಇಲ್ಲವಾದರೇ ಬಿಗ್​ಬಾಸ್​ನಿಂದ ಎಲಿಮಿನೇಟ್​ ಆಗಿಬಿಡ್ತೀನಿ ಅಂತ ಹೇಳಿಕೊಂಡಿದ್ದಾರೆ. ಅವರ ಮಾತನ್ನು ಕೇಳಿಸಿಕೊಂಡಿದ್ದ ವೀಕ್ಷಕರು ಐಶ್ವರ್ಯಾಗೆ ಅವರ ಮೇಲೆ ನಂಬಿಕೆ ಇಲ್ವಾ ಅಂತ ಅಂದುಕೊಳ್ಳುತ್ತಿದ್ದಾರೆ. ಇನ್ಮುಂದೆ ಐಶ್ವರ್ಯಾ ಬಿಗ್​ಬಾಸ್​ ಮನೆಯ ಕ್ಯಾಪ್ಟನ್ ಆಗೋದೇ ಇಲ್ವಾ ಅಂತ ಅನುಮಾನ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment