ಸುದೀಪ್ ಬಳಿ ವಿಶೇಷ ಮನವಿ ಮಾಡಿದ ಐಶ್ವರ್ಯ.. ‘ಡನ್’ ಎಂದ ಕಿಚ್ಚ..!

author-image
Ganesh
Updated On
ಸುದೀಪ್ ಬಳಿ ವಿಶೇಷ ಮನವಿ ಮಾಡಿದ ಐಶ್ವರ್ಯ.. ‘ಡನ್’ ಎಂದ ಕಿಚ್ಚ..!
Advertisment
  • ಬಿಗ್​ಬಾಸ್​ ಶೋನಿಂದ ಐಶ್ವರ್ಯ ಸಿಂಧೋಗಿ ಔಟ್
  • 93 ದಿನಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಸ್ಪರ್ಧಿ
  • ಸುದೀಪ್ ಬಳಿ ಐಶ್ವರ್ಯ ಇಟ್ಟ ರಿಕ್ವೆಸ್ಟ್ ಏನು?

ಬಿಗ್​​ಬಾಸ್​ ಮನೆಯಿಂದ ಐಶ್ವರ್ಯ ಸಿಂಧೋಗಿ ನಿನ್ನೆ ಹೊರ ಬಂದಿದ್ದಾರೆ. ಬರೋಬ್ಬರಿ 93 ದಿನಗಳ ಕಾಲ ಬಿಗ್​​ಬಾಸ್​ ಮನೆಯಲ್ಲಿದ್ದ ಅವರು ವೀಕ್ಷಕರನ್ನು, ತಮ್ಮ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು.

ಕಳೆದ ಕೆಲವು ವಾರಗಳಿಂದ ಐಶ್ವರ್ಯ ಸಿಂಧೋಗಿ ಬಾಟಂ 2ನಲ್ಲಿದ್ದರು. ಈ ವಾರ ಬಾಟಂ 2ನಲ್ಲಿ ಸ್ನೇಹಿತರಾದ ಮೋಕ್ಷಿತಾ ಪೈ ಹಾಗೂ ಐಶ್ವರ್ಯ ಇದ್ದರು. ಅಂತಿಮವಾಗಿ ಐಶ್ವರ್ಯ ಮನೆಯಿಂದ ಹೊರ ಬಿದ್ದಿದ್ದಾರೆ. ಮನೆಯಿಂದ ಹೊರ ಬರ್ತಿದ್ದ ಐಶ್ವರ್ಯಗೆ ಬಿಗ್​ಬಾಸ್​ ಕಡೆಯಿಂದ ವಿಶೇಷ ಗಿಫ್ಟ್ ಒಂದು ಸಿಕ್ಕಿತು. ತುಂಬಾ ಭಾವುಕರಾಗಿದ್ದ ಸ್ಪರ್ಧಿ, ಕಣ್ಣೀರು ಇಡುತ್ತಲೇ ಆಚೆ ಬಂದರು.

ಇದನ್ನೂ ಓದಿ:BBK11: ಹೋಗಿ ಬಾ ಮಗಳೇ.. ಐಶ್ವರ್ಯಗೆ ಬಿಗ್ ಬಾಸ್ ಮನೆಯಿಂದ ವಿಶೇಷ ಗೌರವ!
publive-image

ನಂತರ ಕಿಚ್ಚನ ಎದುರು ಐಶ್ವರ್ಯ ಎದುರಾರದು. ಅಲ್ಲಿ ತೋರಿಸಿದ ವಿಟಿ ನೋಡಿ ಮತ್ತೆ ಭಾವುಕರಾದರು. ಮೊದಲಿದ್ದ ಎನರ್ಜಿಯನ್ನು ಕಳೆದುಕೊಂಡೆ. ಅದೇ ನನ್ನ ಸೋಲಿಗೆ ಕಾರಣವಾಯ್ತು ಅಂತಾ ಕಿಚ್ಚನ ಎದುರು ಹೇಳಿದರು. ಇನ್ನು ಕಿಚ್ಚ ಸುದೀಪ್ ಸ್ಟೇಜ್​​ನಿಂದ ನಿರ್ಗಮಿಸುವ ವೇಳೆ, ಐಶ್ವರ್ಯ ಮುಂದೆ ಯಾವ ಪ್ಲಾನ್​​ನಲ್ಲಿದ್ದೀರಿ ಎಂದು ಕೇಳ್ತಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯ.. ಸರ್ ನಾನು ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕು ಎಂದು ಬೇಡಿಕೊಳ್ತಾರೆ. ಅದಕ್ಕೆ ಸುದೀಪ್, ‘ಓ..’ ಎನ್ನುತ್ತಾರೆ. ಮತ್ತೆ ಮಾತು ಮುಂದುವರಿಸಿದ ಐಶ್ವರ್ಯ, ಸರ್ ಯಾವುದೇ ಪಾತ್ರವಾದರೂ ಪರವಾಗಿಲ್ಲ. ಚಿಕ್ಕ ರೋಲ್ ಆದರೂ ಪರ್ವಾಗಿಲ್ಲ. ನಾನು ಮಾಡ್ತೀನಿ ಎಂದಿದ್ದಾರೆ. ಅದಕ್ಕೆ ಸುದೀಪ್, ‘ಡನ್’ ಅಂತಾ ಹೇಳಿದ್ದಾರೆ. ಕೊನೆಗೆ ಐ ವಿಶ್ಯು ಆಲ್​ ದಿ ಬೆಸ್ಟ್. ನೀವು ಇದ್ದಷ್ಟು ವಾರಗಳು ತುಂಬಾ ಅದ್ಭುತವಾಗಿ ಆಡಿದ್ದೀರಿ. ಒಳ್ಳೆದಾಗಲಿ ಎಂದು ಐಶ್ವರ್ಯ ಅವರನ್ನು ಸ್ಟೇಜ್​ನಿಂದ ಬೀಳ್ಕೊಟ್ಟರು.

ಇದನ್ನೂ ಓದಿ:BBK11: ಐಶ್ವರ್ಯಾ ಮೇಲೆ ದ್ವೇಷ ಸಾಧಿಸಿ ಗೆಲುವು ಸಾಧಿಸಿದ್ರಾ ಕ್ಯಾಪ್ಟನ್ ಭವ್ಯಾ? ತ್ರಿವಿಕ್ರಮ್ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment