ವಂಚನೆ ಕೇಸ್‌.. ಐಶ್ವರ್ಯಾಗೆ ಬಿಗ್ ಶಾಕ್ ಕೊಟ್ಟ ಪೊಲೀಸರು; Audi, BMW ಕಾರುಗಳು ಸೀಜ್!

author-image
admin
Updated On
ವಂಚನೆ ಕೇಸ್‌.. ಐಶ್ವರ್ಯಾಗೆ ಬಿಗ್ ಶಾಕ್ ಕೊಟ್ಟ ಪೊಲೀಸರು; Audi, BMW ಕಾರುಗಳು ಸೀಜ್!
Advertisment
  • ಐಶ್ವರ್ಯಾ ಮನೆಯಲ್ಲಿದ್ದ Audi, BMW, ಹಾಗೂ ಫಾರ್ಚೂನರ್
  • 100 ಗ್ರಾಂ ಚಿನ್ನ, 28 ಕೆಜಿ ಬೆಳ್ಳಿ ಸೇರಿ ದಾಖಲೆಗಳು ಪೊಲೀಸ್‌ ವಶಕ್ಕೆ
  • ಪೊಲೀಸರಿಗೆ ಮತ್ತೆ ಕೆಲವು ದಾಖಲೆ ನೀಡಿದ ದೂರುದಾರೆ ವನಿತಾ!

ಬೆಂಗಳೂರು: ವಾರಾಹಿ ವರ್ಲ್ಡ್‌ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 14 ಕೆಜಿ ಚಿನ್ನ ವಂಚಿಸಿದ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಆರೋಪಿ ಐಶ್ವರ್ಯಾ ಗೌಡಗೆ ಸಂಕಷ್ಟ ತಪ್ಪಿಲ್ಲ. ವಂಚನೆ ಕೇಸ್‌ಗೆ ಸಂಬಂಧಪಟ್ಟಂತೆ ಪೊಲೀಸರು ಐಶ್ವರ್ಯಾ ಅವರ ಮನೆ ಮೇಲೆ ದಾಳಿ ಮಾಡಿದ್ದು, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಆರ್‌.ಆರ್‌ ನಗರ ಪೊಲೀಸರು ನಿನ್ನೆ ಐಶ್ವರ್ಯಾ ಗೌಡ ಅವರ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಐಶ್ವರ್ಯಾ ಅವರ ಮನೆಯಲ್ಲಿದ್ದ Audi, BMW, ಹಾಗೂ ಫಾರ್ಚೂನರ್ ಕಾರುಗಳನ್ನ ಸೀಜ್ ಮಾಡಲಾಗಿದೆ. 100 ಗ್ರಾಂ ಚಿನ್ನ, 28 ಕೆಜಿ ಬೆಳ್ಳಿ ಸೇರಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

publive-image

ಇದನ್ನೂ ಓದಿ: ₹9 ಕೋಟಿ ಚಿನ್ನ ವಂಚನೆ ಕೇಸ್.. ಐಶ್ವರ್ಯಾ ಗೌಡ ಬಿಡುಗಡೆಗೆ ಹೈಕೋರ್ಟ್ ಆದೇಶ; ಮುಂದೇನು? 

ಐಶ್ವರ್ಯಾ ಗೌಡ ಅವರಿಗೆ ಸೇರಿದ ಈ ಐಷಾರಾಮಿ ಕಾರುಗಳು ಪತಿ ಹರೀಶ್ ಅವರ ಹೆಸರಿನಲ್ಲಿದೆ. ವಾರಾಹಿ ವರ್ಲ್ಡ್‌ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಾದ ವನಿತಾ ಐತಾಳ್ ಅವರು ದೂರು ನೀಡಿದ್ದು, ತನಿಖೆ ಮುಂದುವರಿದಿದೆ. ವನಿತಾ ಅವರು ಇಂದು ACP ಕಚೇರಿಯಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ದೂರುದಾರೆ ವನಿತಾ ಐತಾಳ್ ಪೊಲೀಸರು ಒಂದಷ್ಟು ದಾಖಲೆಗಳನ್ನ ಕೇಳಿದ್ರು ಎಲ್ಲವನ್ನೂ ಒದಗಿಸಿದ್ದೇನೆ. ವಿಚಾರಣೆ ಎಲ್ಲಾ ಚೆನ್ನಾಗಿ ನಡೆಸ್ತಿದ್ದಾರೆ ಎಂದು ಹೇಳಿದ್ದಾರೆ.

ಮತ್ತೆ ಐಶ್ವರ್ಯಾ ಗೌಡ ವಿಚಾರಣೆ!
9 ಕೋಟಿ ಚಿನ್ನ ವಂಚನೆಯ ಆರೋಪಿ ಐಶ್ವರ್ಯಾ ಗೌಡ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಆದರೆ ಆರ್.ಆರ್ ನಗರ ಠಾಣೆಯ ಪೊಲೀಸರು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment