/newsfirstlive-kannada/media/post_attachments/wp-content/uploads/2025/02/Aisshwarya-DKS-Hegde.jpg)
ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಕೋಟ್ಯಾಂತರ ಜನ ಪುಣ್ಯಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದೀಗ ಮಹಾ ಕುಂಭಮೇಳದಲ್ಲಿ ಕರ್ನಾಟಕದ ಪ್ರಬಲ ರಾಜಕಾರಣಿ ಮಗಳು ಪುಣ್ಯಸ್ನಾನ ಮಾಡಿ ಪುನೀತರಾಗಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ಬಿಗ್ ರಿಲೀಫ್; ಪ್ರಕರಣಕ್ಕೆ ಟ್ವಿಸ್ಟ್ ಸಿಗಲಿದೆ ಎಂದ ಸ್ನೇಹಮಯಿ ಕೃಷ್ಣ ಪರ ವಕೀಲ
ಹೌದು, ಕೆಪಿಸಿಸಿ ಅಧ್ಯಕ್ಷರಾದ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಡಿಕೆಎಸ್ ಹೆಗ್ಡೆ ಅವರು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿ ಬಂದಿದ್ದಾರೆ. ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ಭೇಟಿ ಕೊಟ್ಟ ವಿಡಿಯೋವನ್ನು ಐಶ್ವರ್ಯಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರು ಕುಂಭಮೇಳಕ್ಕೆ ತೆರಳಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ಐಶ್ವರ್ಯಾ ಅವರು ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿರುವುದಕ್ಕೆ ಭಾರೀ ಟೀಕೆಗಳು ಕೂಡ ವ್ಯಕ್ತವಾಗಿವೆ. ಕೆಲವರು ಈ ವಿಡಿಯೋವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಟ್ಯಾಗ್ ಮಾಡಿ ಟೀಕಿಸಿದ್ದಾರೆ.
ಪ್ರಯಾಗರಾಜ್‌ನ ಮಹಾಕುಂಭ ಮೇಳಕ್ಕೆ ಕೋಟ್ಯಾಂತರ ಭಕ್ತರು ಭೇಟಿ ನೀಡಿದ್ದಾರೆ. ಗಂಗಾನದಿಯ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಈಗಾಗಲೇ ಕರ್ನಾಟಕದ ಜನಸಾಮಾನ್ಯರ ಜತೆ ಸೆಲೆಬ್ರಿಟಿಗಳು ಕೂಡ ಪವಿತ್ರ ಸ್ನಾನ ಮಾಡಿದ್ದಾರೆ. ಇದೀಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ ಅವರೂ ಭೇಟಿ ಮಾಡಿದ್ದಾರೆ.
View this post on Instagram
ಮಹಾಕುಂಭ 2025.. ಇದು ಪದಗಳನ್ನು ಮೀರಿದ ಅನುಭವ. ಪ್ರಪಂಚದ ಅತಿ ದೊಡ್ಡ ಕೂಟಗಳಲ್ಲಿ ಒಂದಾದ ಸಂಪೂರ್ಣ ಶಕ್ತಿ, ಏಕತೆ ಮತ್ತು ಆಧ್ಯಾತ್ಮಿಕ ಆಳವು ನನ್ನನ್ನು ಮಂತ್ರಮುಗ್ಧರನ್ನಾಗಿಸಿತು. ಭಕ್ತಿ ಮತ್ತು ಸಾಮೂಹಿಕ ಪ್ರಜ್ಞೆಯು ನಿಜವಾದ ದೈವಿಕ ಭಾವನೆಯ ವಾತಾವರಣವನ್ನು ಸೃಷ್ಟಿಸಿತು. ಈ ದೈವಿಕ ಪ್ರಯಾಣವನ್ನು ಸೇರಿಸುವ ಮೂಲಕ, "ದಿ ಸೇಕ್ರೆಡ್ ಶಿಫ್ಟ್ ಕಾನ್ಕ್ಲೇವ್" ನಲ್ಲಿ ಪ್ಯಾನೆಲಿಸ್ಟ್ ಆಗಿರುವ ಗೌರವವನ್ನು ನಾನು ಹೊಂದಿದ್ದೇನೆ, ರೂಪಾಂತರ ಮತ್ತು ಉದ್ದೇಶದ ಕುರಿತು ಒಳನೋಟಗಳನ್ನು ಹಂಚಿಕೊಳ್ಳುತ್ತೇನೆ. ಅಲ್ಲದೆ, ನಂಬಲಾಗದ @rickykej ಸರ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದು ನಿಜವಾಗಿಯೂ ವಿನಮ್ರವಾಗಿದೆ. ಪ್ರತಿ ಕ್ಷಣ, ಪ್ರತಿ ಸಂಭಾಷಣೆ ಮತ್ತು ಆಳವಾದ ಬುದ್ಧಿವಂತಿಕೆ ವಿನಿಮಯಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ