ರೋಹಿತ್​​ರನ್ನು ಹೊರಗಿಟ್ಟಿದ್ದು ಗಂಭೀರ ಅಲ್ಲ; ಈ ನಿರ್ಧಾರದ ಹಿಂದೆ ಮತ್ತೊಬ್ಬ ವ್ಯಕ್ತಿಯ ಕೈವಾಡ..!

author-image
Ganesh
Updated On
ರೋಹಿತ್​​ರನ್ನು ಹೊರಗಿಟ್ಟಿದ್ದು ಗಂಭೀರ ಅಲ್ಲ; ಈ ನಿರ್ಧಾರದ ಹಿಂದೆ ಮತ್ತೊಬ್ಬ ವ್ಯಕ್ತಿಯ ಕೈವಾಡ..!
Advertisment
  • ಸಿಡ್ನಿ ಟೆಸ್ಟ್ ಆಡಲು ಬಯಸಿದ್ದ ರೋಹಿತ್ ಶರ್ಮಾ
  • ನಿರಂತರ ವೈಫಲ್ಯದಿಂದ ಟೀಕೆಗೆ ಗುರಿಯಾಗಿದ್ದರು
  • ಆಸ್ಟ್ರೇಲಿಯಾದಲ್ಲಿ BGT ಟೆಸ್ಟ್ ಆಡ್ತಿರುವ ಟೀಂ ಇಂಡಿಯಾ

ಸಿಡ್ನಿ ಟೆಸ್ಟ್ ಆರಂಭವಾಗಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾರನ್ನು ಡ್ರಾಪ್ ಮಾಡಲಾಗಿದೆ. ಸತತ ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾ ಮ್ಯಾನೇಜ್ಮೆಂಟ್​ ರೋಹಿತ್​​ಗೆ ವಿಶ್ರಾಂತಿ ನೀಡಿ ಬುಮ್ರಾ ನೇತೃತ್ವದಲ್ಲಿ ತಂಡವನ್ನು ಫೀಲ್ಡ್​​ಗೆ ಇಳಿಸಿದೆ.

ತಂಡದಿಂದ ರೋಹಿತ್​ ಅವರನ್ನು ಕೈಬಿಟ್ಟಿರುವ ಹಿಂದೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೈವಾಡ ಇದೆ ಎಂಬ ಆರೋಪ ಇದೆ. ಬೆನ್ನಲ್ಲೇ ಗಂಭೀರ್ ಮಾತ್ರವಲ್ಲ, ಈ ನಿರ್ಧಾರದ ಹಿಂದೆ ಬಿಸಿಸಿಐ ಅಧಿಕಾರಿಯ ಪಾತ್ರವೂ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ರೋಹಿತ್​ಗೆ ಮತ್ತೊಂದು ಬಿಗ್ ​ಶಾಕ್; ODI ಕ್ರಿಕೆಟ್​ಗೆ ಹೊಸ ನಾಯಕನ ಕಂಡುಕೊಂಡ BCCI

ವರದಿಗಳ ಪ್ರಕಾರ.. ರೋಹಿತ್ ಶರ್ಮಾ ಅವರನ್ನು ಸಿಡ್ನಿ ಟೆಸ್ಟ್‌ನಿಂದ ಕೈಬಿಡುವ ನಿರ್ಧಾರವು ಗೌತಮ್ ಗಂಭೀರ್ ಅವರದ್ದಲ್ಲ. ಈ ನಿರ್ಧಾರದಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಲಹೆ ಪಡೆದ ನಂತರ ಹಿಟ್‌ಮ್ಯಾನ್‌ನನ್ನು ಕೈಬಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆಯ್ಕೆ ಸಮಿತಿಯ ಉಳಿದವರನ್ನೂ ಲೂಪ್‌ನಲ್ಲಿ ಇರಿಸಲಾಗಿದೆ. ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಆಡಲು ಬಯಸಿದ್ದರು. ಕೊನೆಯಲ್ಲಿ ಗಂಭೀರ್ ಗಿಲ್ ಅವರನ್ನು ಪ್ಲೇಯಿಂಗ್ ಹನ್ನೊಂದರಲ್ಲಿ ಮರಳಿ ಕರೆತರಲು ನಿರ್ಧರಿಸಿದರು ಎಂದು ವರದಿಯಾಗಿದೆ.

ಇದನ್ನೂ ಓದಿ:ಅಮ್ಮ ನೀನೇಕೆ ಎಷ್ಟು ಕ್ರೂರಿಯಾದೆ..? ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment