/newsfirstlive-kannada/media/post_attachments/wp-content/uploads/2025/04/Ajit.jpg)
ಇಂದು ತಮಿಳು ನಟ ಅಜಿತ್ ಅಭಿನಯದ ಗುಡ್ ಬ್ಯಾಡ್ ಅಗ್ಲಿ (good bad ugly) ಸಿನಿಮಾ ಬಿಡುಗಡೆಯಾಗ್ತಿದೆ. ಆದರೆ ಅದರ ಟಿಕೆಟ್ ಬೆಲೆ 600, 800, 1000 ರೂಪಾಯಿ ದಾಟಿದೆ.
ಕರ್ನಾಟಕ ಸರ್ಕಾರ ಬಜೆಟ್ ಮಂಡನೆ ವೇಳೆ ಸಿನಿಮಾ ಟಿಕೆಟ್ ದರ ನಿಗದಿ ಪ್ರಸ್ತಾಪ ಮಾಡಿತ್ತು. ಏಕರೂಪದ ದರ ನಿಗದಿ ಮಾಡೋದಾಗಿ ಘೋಷಿಸಿತ್ತು. ಈ ಆದೇಶ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಸಿನಿಪ್ರಿಯರು ಏಕರೂಪ ದರ ನಿಗದಿ ಆಗೋದು ಯಾವಾಗ ಪ್ರಶ್ನೆ ಮಾಡ್ತಿದ್ದಾರೆ.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ಒಲಿದ ಅದೃಷ್ಟ; ಆ ನಟಿ ಎಂಟ್ರಿಗೆ ಎಲ್ಲವೂ ಬದಲು!
ಈ ವಿಚಾರವಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿದ್ದು, ಇಷ್ಟರಲ್ಲೇ ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಮಾಲೀಕರ ಸಭೆ ಕರೆಯಲಾಗಿದೆ. ಸಭೆಯ ನಂತರ ಏಕ ರೂಪ ದರ ನಿಗದಿ ಜಾರಿ ಯಾವಾಗ ಅನ್ನೋದು ತಿಳಿದು ಬರಲಿದೆ ಅಂತ ತಿಳಿಸಿದ್ದಾರೆ.
ಗುಡ್ ಬ್ಯಾಡ್ ಅಗ್ಲಿ ಚಿತ್ರವನ್ನು ಮೈತ್ರಿ ಮೂವಿ ಮೇಕರ್ (Mythri Movie Makersಅ) ನಿರ್ಮಾಣ ಮಾಡಿದೆ. ಅಧಿಕ್ ರವಿಚಂದ್ರನ್ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ತ್ರಿಷಾ ಕೃಷ್ಣನ್, ಅರ್ಜುನ್ ದಾಸ್, ಸುನಿಲ್ ಸೇರಿದಂತೆ ಹಲವು ತಾರಾಗಣ ಇದೆ. 300 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಅಂದು ಕೋರ್ಟ್ಗೆ ಹಾಜರಾಗಲಿಲ್ಲ.. ಭಾರೀ ಚರ್ಚೆ ಆಗ್ತಿದೆ ದರ್ಶನ್ ಅವರ ಈ ನಡೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ