/newsfirstlive-kannada/media/post_attachments/wp-content/uploads/2024/09/ACTOR-AJIT-NEW-CAR.jpg)
ಚೆನ್ನೈ: ತಮಿಳು ಚಿತ್ರರಂಗ ಕಂಡ ಅತ್ಯಂತ ಲ್ಯಾವಿಶ್ ನಟ ಅಂದ್ರೆ ಅದು ಥಲಾ ಅಜಿತ್. ಅವರು ಎಷ್ಟು ಜನಪ್ರಿಯ ನಟರೋ ಅಷ್ಟೇ ಅವರ ಮನೆಯ ಕಾರುಗಳು ಕೂಡ ಜನಪ್ರಿಯತೆ ಕಂಡಿವೆ. ಅಜಿತ್ ಅವರಿಗೆ ಕಾರ್​​ಗಳ ಕ್ರೇಜ್ ಸಿಕ್ಕಾಪಟ್ಟೆ ಇದೆ. ಹೀಗಾಗಿ ಮಾರುಕಟ್ಟೆಗೆ ಬಂದ ಹೊಸ ಕಾರ್​ಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಖರೀದಿಸುವವರೆಗೂ ಅವರಿಗೆ ಸಮಾಧಾನವಿರಲ್ಲವೆನೋ ಗೊತ್ತಿಲ್ಲಾ. ಆಗಾಗ ಅವರ ಹೊಸ ಕಾರ್​ಗಳು ಸುದ್ದಿಯಾಗುತ್ತಲೇ ಇರುತ್ತವೆ. ಈಗ ನಟ ಅಜಿತ್ ಮನೆಯಂಗಳಕ್ಕೆ ಮತ್ತೆರೆಡು ಐಷಾರಾಮಿ ಹಾಗೂ ದುಬಾರಿ ಕಾರುಗಳು ಬಂದಿವೆ.
ಇದನ್ನೂ ಓದಿ:Thalapathy 69: ವಿಜಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಬಿಗ್ ಬಜೆಟ್ ಸಿನಿಮಾ ಘೋಷಿಸಿದ KVN ಪ್ರೊಡಕ್ಷನ್ಸ್!
ಅಜಿತ್ ಕಾರ್​ಗಳ ಕಲೆಕ್ಷನ್​ನಲ್ಲಿ ಈಗ 3.5 ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಕಾರ್​ ಸೇರಿಕೊಂಡಿದೆ. ಅಜಿತ್ ತಮ್ಮ ಪತ್ನಿ ಶಾಲಿನಿ ಅಜಿತ್​ಗೋಸ್ಕರ ಅಂತ ಪೋರ್ಶೆ 911 ಜಿಟಿ3 ಕಾರು ಖರೀದಿ ಮಾಡಿ ಕೊಟ್ಟಿದ್ದಾರೆ. ಇದರ ಬೆಲೆ ಬರೋಬ್ಬರಿ 3.5 ಕೋಟಿ ರೂಪಾಯಿ. ಸದ್ಯ ಅಜಿತ್ ಖರೀದಿ ಮಾಡಿದ ಕಾರ್​ನ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಾಲಿನಿ ಅಜಿತ್ ಅವರು ಕಾರ್​ ಜೊತೆಗೆ ಸ್ಟೈಲ್ ಹಾಗೂ ನನ್ನ ಹೃದಯವನ್ನು ಕೊಂಡುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ:ದರ್ಶನ್‌ಗೆ ರಾಜಾತಿಥ್ಯದ ಕೇಸ್‌ಗೆ ಬಿಗ್ ಟ್ವಿಸ್ಟ್.. ಇಡೀ ರಾಜ್ಯದ ಕಾರಾಗೃಹಗಳಿಗೆ ಮಹತ್ವದ ಆದೇಶ; ಏನದು?
Exclusive Pics of THALA AJITH With Porsche GT3RS ?️?
Man And the Machine.,??
#VidaaMuyarchi | #Ajithkumarpic.twitter.com/sydMXebHaD
— AJITHKUMAR FANS CLUB (@ThalaAjith_FC)
Exclusive Pics of THALA AJITH With Porsche GT3RS 🏎️💨
Man And the Machine.,🚨🚧
#VidaaMuyarchi | #Ajithkumarpic.twitter.com/sydMXebHaD— AJITHKUMAR FANS CLUB (@ThalaAjith_FC) September 13, 2024
">September 13, 2024
ಮತ್ತೊಂದು ಎಕ್ಸ್​ ಖಾತೆಯ ಪೋಸ್ಟ್​ನಲ್ಲಿ ಲ್ಯಾವೀಶ್ ಆಗಿ ಕಾಣಿಸಿಕೊಳ್ಳುತ್ತಿರುವ ನಟ ಅಜಿತ್ ವೈಟ್ ಶರ್ಟ್ ಮತ್ತು ಬ್ಲ್ಯೂ ಕಾರ್ಗೊ ಪ್ಯಾಂಟ್​ನಲ್ಲಿ ಮಿರಿ ಮಿರಿ ಮಿಂಚುತ್ತಿದ್ದಾರೆ.ಅಜಿತ್ ಖರೀದಿಸಿದ ಕಾರ್​ನ ಲುಕ್​ಗೆನೇ ಅನೇಕ ಜನರು ಫಿದಾ ಆಗಿದ್ದಾರೆ. ಆ ಐಷಾರಾಮಿ ಕಾರ್​ನೊಂದಿಗೆ ಪೋಸ್​ ಕೊಟ್ಟಿರುವ ಅಜಿತ್ ಫೋಟೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us