ಬೈಕ್​​ನಲ್ಲಿ ಬಂದು ಏಕಾಏಕಿ ಗುಂಡು ಹಾರಿಸಿದ ಅಪರಿಚಿತರು.. ಸ್ಥಳದಲ್ಲೇ ಉಸಿರು ಚೆಲ್ಲಿದ ಕೌನ್ಸಿಲರ್

author-image
Veena Gangani
Updated On
ಬೈಕ್​​ನಲ್ಲಿ ಬಂದು ಏಕಾಏಕಿ ಗುಂಡು ಹಾರಿಸಿದ ಅಪರಿಚಿತರು.. ಸ್ಥಳದಲ್ಲೇ ಉಸಿರು ಚೆಲ್ಲಿದ ಕೌನ್ಸಿಲರ್
Advertisment
  • ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿ!
  • ಪಂಜಾಬ್‌ನಲ್ಲಿ ಅಕಾಲಿ ದಳ ಕೌನ್ಸಿಲರ್ ಮೇಲೆ ಗುಂಡಿನ ದಾಳಿ!
  • ಭಗವಂತ್ ಮಾನ್ ನೇತೃತ್ವದ​ ಸರ್ಕಾರದ ವಿರುದ್ಧ ಭಾರೀ ಟೀಕೆ

ಪಂಜಾಬ್​ನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಅಮೃತಸರದ ಛೆಹರ್ತಾದಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಲು ಬಂದಿದ್ದ ಅಕಾಲಿ ಕೌನ್ಸಿಲರ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಉಸಿರು ನಿಲ್ಲಿಸಿದ್ದಾರೆ.

ಇದನ್ನೂ ಓದಿ:ಮಳೆಯೋ ಮಳೆ.. ಕರ್ನಾಟಕದಲ್ಲಿ ನಿನ್ನೆ ಮಳೆರಾಯ ಏನೆಲ್ಲ ಅನಾಹುತ ಮಾಡಿದ್ದಾನೆ..? Photos

publive-image

ಹೌದು, ಅಮೃತಸರದ ಗುರುದ್ವಾರದ ಬಳಿ ಅಕಾಲಿ ದಳ ಕೌನ್ಸಿಲರ್ ಹರ್ಜಿಂದರ್ ಸಿಂಗ್ ಸಮಾರಂಭದಿಂದ ಹೊರಬಂದ ತಕ್ಷಣವೇ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಹರ್ಜಿಂದರ್ ಸಿಂಗ್​ನನ್ನ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಹರ್ಜಿಂದರ್ ದಾರಿಯಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಹರ್ಪಾಲ್ ಸಿಂಗ್ ರಾಂಧವ ಮಾಹಿತಿ ನೀಡಿದ್ದಾರೆ.


">May 25, 2025

ಈ ಘಟನೆ ಸಂಬಂಧ ಎಎಪಿ ಪಕ್ಷದ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ ಅಕಾಲಿ ದಳ ನಾಯಕರು ತೀವ್ರ ವಿರೋಧ ವ್ಯಕ್ತ ಪಡ್ತಿದ್ದಾರೆ. ಪಂಜಾಬ್​ನಲ್ಲಿ ಕಾನೂನು ಸುವ್ಯವಸ್ಥೆ ಸತ್ತೋಗಿದೆ ಎಂದು ಕಿಡಿ ಕಾರುತ್ತಿದ್ದಾರೆ. ಒಟ್ಟಾರೆ, ಪ್ರಸೆಂಟ್ ಕೌನ್ಸಿಲರ್​ಗೆ ಈ ಗತಿ ಅಂದ್ರೆ ಸಾಮಾನ್ಯರ ಪರಿಸ್ಥಿತಿ ಏನು ಅನ್ನೋದು ಎಲ್ಲರ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment