Advertisment

ಮೆಗಾ ಆಕ್ಷನ್​​ಗೆ ಮುನ್ನವೇ RCB ಹೊಸ ಲಿಸ್ಟ್​ ಔಟ್​​; ಈ ಸ್ಟಾರ್​ ಆಟಗಾರರಿಗೆ ಕೊಕ್​​!

author-image
Ganesh Nachikethu
Updated On
RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ..​ ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?
Advertisment
  • 2025ರ ಐಪಿಎಲ್ ಸೀಸನ್​ಗೂ ಮುನ್ನವೇ ಮೆಗಾ ಹರಾಜು
  • ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಆರ್​​​ಸಿಬಿ ಪ್ಲಾನ್​
  • ಹರಾಜಿಗೆ ಮುನ್ನವೇ ರೆಡಿಯಾಯ್ತು ಆರ್​​​ಸಿಬಿ ಹೊಸ ಲಿಸ್ಟ್​​​

2025ರ ಐಪಿಎಲ್ ಸೀಸನ್​ಗೂ ಮುನ್ನವೇ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರ ಖರೀದಿ ಮಾಡಲು ಆರ್​​​ಸಿಬಿ ಉತ್ಸುಕವಾಗಿದೆ. ಪ್ರಮುಖ ಆಟಗಾರರು ತಮ್ಮ ಹಳೆಯ ತಂಡದಿಂದ ಹೊರ ಬಂದು ಹೊಸ ಟೀಮ್​ ಸೇರಲಿದ್ದಾರೆ. ಇದರ ಮಧ್ಯೆ ಆರ್​​ಸಿಬಿಗೆ ಭಾರತ ತಂಡದ ಮಾಜಿ ಕ್ರಿಕೆಟರ್​​ ಆಕಾಶ್​ ಚೋಪ್ರಾ ಅದ್ಭುತ ಸಲಹೆ ನೀಡಿದ್ದಾರೆ.

Advertisment

ಆಕಾಶ್ ಚೋಪ್ರಾ ಹೇಳಿದ್ದೇನು?

ಆರ್​​ಸಿಬಿ ಕೊಹ್ಲಿ ಅವರನ್ನು ಉಳಿಸಿಕೊಳ್ಳಲೇಬೇಕು. ಆದರೆ ಫಾಫ್ ಡುಪ್ಲೆಸಿಸ್ ಅವರನ್ನು 3 ವರ್ಷಗಳ ಕಾಲ ಆಡಿಸಲು ಸಾಧ್ಯವೇ ಎಂಬುದು ಪ್ರಶ್ನೆ. ಹಾಗಾಗಿ ಇವರನ್ನು ಕೈ ಬಿಡುವುದು ಒಳ್ಳೆಯದು. ವಿದೇಶಿ ಆಟಗಾರ ಕ್ಯಾಮರೂನ್ ಗ್ರೀನ್, ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಎಂದು ನಾನು ಬಯಸುತ್ತೇನೆ. ರಜತ್ ಪಾಟಿದಾರ್ ಅವರನ್ನು ಕೂಡ ಉಳಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ಮ್ಯಾಕ್ಸ್​ವೆಲ್​ ಬೇಡ ಎಂಬುದು ನನ್ನ ಅಭಿಪ್ರಾಯ ಎಂದರು ಆಕಾಶ್​ ಚೋಪ್ರಾ.

ವಿಲ್‌ ಜ್ಯಾಕ್ಸ್ ಕೂಡ ಉತ್ತಮ ಆಲ್‌ರೌಂಡರ್. ಅವರನ್ನು ಉಳಿಸಿಕೊಳ್ಳುವುದು ಕೂಡ ಉತ್ತಮ ನಿರ್ಧಾರ. ಆರ್‌ಸಿಬಿ ಮುಖ್ಯವಾಗಿ ಉತ್ತಮ ಬೌಲಿಂಗ್ ಪಡೆ ಕಟ್ಟಬೇಕು. ಕೊಹ್ಲಿ ಇದ್ದೇ ಇದ್ದಾರೆ. ಮುಖ್ಯವಾಗಿ ಕೊಹ್ಲಿಗೆ ಸಪೋರ್ಟ್​ ಮಾಡಲು ಟಿ20 ಸ್ಪೆಷಲಿಸ್ಟ್​ಗಳು ಬೇಕು ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment