/newsfirstlive-kannada/media/post_attachments/wp-content/uploads/2024/02/Virat-Kohli_News.jpg)
ವಿರಾಟ್​​ ಕೊಹ್ಲಿ ಅನುಪಸ್ಥಿತಿ ಟೀಮ್​ ಇಂಡಿಯಾಗೆ ಹಿನ್ನಡೆ ಎಂಬುದು ಸುಳ್ಳು ಎಂದು ಕ್ರಿಕೆಟ್​ ದಿಗ್ಗಜ ಆಕಾಶ್​​ ಚೋಪ್ರಾ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಆಕಾಶ್​ ಚೋಪ್ರಾ, ಯಾರೇ ಬರಲಿ, ಯಾರೇ ಹೋಗಲಿ. ಜೀವನ ನಿಲ್ಲೋಕೆ ಸಾಧ್ಯವಿಲ್ಲ ಎಂದರು.
ಟೀಮ್​ ಇಂಡಿಯಾ ಖಂಡಿತವಾಗಿ ವಿರಾಟ್​ ಕೊಹ್ಲಿಯನ್ನು ಮಿಸ್​ ಮಾಡಿಕೊಳ್ಳಲಿದೆ. ಆದರೆ ಕೊಹ್ಲಿ ಅನುಪಸ್ಥಿತಿ ಭಾರತ ತಂಡಕ್ಕೆ ಹಿನ್ನಡೆ ಎಂದು ಹೇಳಕ್ಕೆ ಆಗುವುದಿಲ್ಲ. ಈಗಾಗಲೇ ಕೊಹ್ಲಿ ಇಲ್ಲದೆ ಒಂದು ಮ್ಯಾಚ್​​ ಆಸ್ಟ್ರೇಲಿಯಾದ ವಿರುದ್ಧ ಗೆದ್ದಿದ್ದೇವೆ. ಕೊಹ್ಲಿ ಇಲ್ಲದೆ ಹೋದರೆ ಸರಣಿಯನ್ನೇ ಕಳೆದುಕೊಳ್ಳುತ್ತೇವೆ ಎಂಬುದು ನಾನು ಒಪ್ಪಲ್ಲ ಎಂದರು.
ಕೊಹ್ಲಿ ಇದ್ದ ಎಷ್ಟೋ ಪಂದ್ಯಗಳು ಸೋತಿದ್ದೇವೆ, ಎಷ್ಟೋ ಪಂದ್ಯಗಳು ಗೆದ್ದಿದ್ದೇವೆ. ನಾವು ಜೀವನವೂ ಮುಂದುವರಿಸಬೇಕು, ಪ್ರದರ್ಶನ ಕೂಡ ಮುಂದುವರಿಸಬೇಕು. ತನ್ನ ಕುಟುಂಬದೊಂದಿಗೆ ಕೊಹ್ಲಿ ಇರಬೇಕಾದ ಸಮಯ ಇದು ಎಂದರು.
ಉಳಿದ ಮೂರು ಟೆಸ್ಟ್​​ಗಳಿಗೆ ಭಾರತ ತಂಡ ಪ್ರಕಟ
ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಹೊರಗುಳಿಯಲು ನಿರ್ಧರಿಸಿದ್ದು, ಬಿಸಿಸಿಐ ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದೆ. ಮೂರನೇ ಟೆಸ್ಟ್​ ತಂಡವನ್ನು ಬಿಸಿಸಿಐ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಅದರಲ್ಲಿ ಕೊಹ್ಲಿ ಲಭ್ಯರಿಲ್ಲ ಎಂದು ತಿಳಿಸಲಾಗಿದೆ. ವೈಯಕ್ತಿಕ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳನ್ನು ಕೊಹ್ಲಿ ಆಡಿರಲಿಲ್ಲ. ಮೂರನೇ ಪಂದ್ಯದಲ್ಲಿ ಆಡಲಿದ್ದಾರೆ ಎಂಬ ನಿರೀಕ್ಷೆ ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us