ಟೀಮ್​ ಇಂಡಿಯಾಗೆ ಮತ್ತೊಂದು ಆಘಾತ; 5ನೇ ಟೆಸ್ಟ್​ನಿಂದ ಸ್ಟಾರ್​​ ಪ್ಲೇಯರ್​ ಔಟ್​​

author-image
Ganesh Nachikethu
Updated On
ಮೊದಲ ಟೆಸ್ಟ್​ ಪಂದ್ಯದಿಂದ ಸ್ಟಾರ್​ ಆಟಗಾರರಿಗೆ ಕೊಕ್​​; ಟೀಮ್​ ಇಂಡಿಯಾದಲ್ಲಿ ಇವರಿಗೆ ಸ್ಥಾನ
Advertisment
  • ಭಾರತ, ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ
  • ಟೆಸ್ಟ್ ಸರಣಿಯ ಕೊನೆಯ ಪಂದ್ಯ ನಾಳೆ ಅಂದರೆ ಜನವರಿ 3ರಿಂದ ಶುರು
  • ಈ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್ ಶಾಕ್​ ಕೊಟ್ಟ ಸ್ಟಾರ್​​ ಆಟಗಾರ

ಇತ್ತೀಚೆಗೆ ಮೆಲ್ಬೋರ್ನ್‌ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಕ್ಯಾಪ್ಟನ್​​ ರೋಹಿತ್ ಶರ್ಮಾ ನಾಯಕತ್ವದ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 184 ರನ್‌ಗಳಿಂದ ಸೋಲು ಕಂಡಿದೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಟೀಮ್​ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 369 ರನ್‌ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 105 ರನ್‌ಗಳ ಮುನ್ನಡೆ ಸಾಧಿಸಿತು. 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 234 ರನ್ ಗಳಿಸಿ 340 ರನ್‌ಗಳ ಗೆಲುವಿನ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ 155 ರನ್‌ ಗಳಿಸಿ 184 ರನ್‌ಗಳಿಂದ ಹೀನಾಯವಾಗಿ ಸೋತಿರುವುದು ಎಲ್ಲರಿಗೂ ಗೊತ್ತಿರೋ ವಿಚಾರ.

ಭಾರತ ತಂಡ ಮೆಲ್ಬೋರ್ನ್ ಟೆಸ್ಟ್ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಆದರೆ, ಟೀಮ್​ ಇಂಡಿಯಾ ಪರ ಕೆಲವು ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್ ಪಂದ್ಯ ಸೋಲುವ ಮೂಲಕ ಟೀಮ್​ ಇಂಡಿಯಾ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ ರೇಸ್​ನಿಂದ ಹೊರಬೀಳುವ ಸಾಧ್ಯತೆ ಇದೆ. ರೇಸ್​ನಲ್ಲಿರಲು ಟೀಮ್​ ಇಂಡಿಯಾ ಕೊನೆಯ ಸಿಡ್ನಿ ಟೆಸ್ಟ್​ ಗೆಲ್ಲಲೇಬೇಕು. ಇದರ ಮಧ್ಯೆ ಟೀಮ್​ ಇಂಡಿಯಾ ಮುಖ್ಯ ಕೋಚ್​ ಗೌತಮ್​ ಗಂಭೀರ್​​ ಸ್ಟಾರ್​ ಬೌಲರ್​ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ಟಿದ್ದಾರೆ.

ತಂಡದಿಂದ ಆಕಾಶ್​ ದೀಪ್​ ಔಟ್​​

ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಬುಮ್ರಾ ನಂತರ ಅತ್ಯುತ್ತಮ ಪ್ರದರ್ಶನ ನೀಡಿದ್ದು ಆಕಾಶ್​ ದೀಪ್​​. ಇವರು ಸಿಡ್ನಿ ಟೆಸ್ಟ್​ಗೆ ಮುನ್ನ ಇಂಜುರಿಗೆ ಒಳಗಾಗಿದ್ದಾರೆ. ಹಾಗಾಗಿ ಮುಂದಿನ ಪಂದ್ಯ ಆಕಾಶ್​​ ದೀಪ್​ ಆಡುತ್ತಿಲ್ಲ ಎಂದು ಗಂಭೀರ್​​ ತಿಳಿಸಿದ್ದಾರೆ.

ಗಂಭೀರ್​ ಏನಂದ್ರು?

ಪ್ರತಿಯೊಬ್ಬ ಆಟಗಾರನಿಗೆ ತಾನು ಎಲ್ಲಿ ಸುಧಾರಿಸಬೇಕು ಅನ್ನೋದು ತಿಳಿದಿದೆ. ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಹೇಗೆ ಎಂಬ ಬಗ್ಗೆ ಮಾತ್ರ ಮಾತಾಡುತ್ತೇನೆ. ಆಕಾಶ್​ ದೀಪ್ ಬೆನ್ನಿನ ಬಿಗಿತದಿಂದಾಗಿ ಕೊನೆಯ ಟೆಸ್ಟ್ ಆಡುವುದಿಲ್ಲ ಎಂದರು ಗಂಭೀರ್​​.

ಇದನ್ನೂ ಓದಿ:ನಮ್ಮ ಮೆಟ್ರೋದಲ್ಲಿ ಯುವತಿ ಖಾಸಗಿ ಅಂಗ ಫೋಟೋ ತೆಗೆದ ಕಾಮುಕ ಅರೆಸ್ಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment