/newsfirstlive-kannada/media/post_attachments/wp-content/uploads/2025/07/Aakash-deep.jpg)
ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಭಾರತ ಇಂಗ್ಲೆಂಡ್ ಅನ್ನು 336 ರನ್‌ಗಳಿಂದ ಸೋಲಿಸಿದೆ. ಈ ಭರ್ಜರಿ ಗೆಲುವಿಗೆ ಆಕಾಶ್ ದೀಪ್ ಕೂಡ ಕಾರಣ. ಎರಡೂ ಇನ್ನಿಂಗ್ಸ್‌ಗಳಲ್ಲಿ ಅವರು 10 ವಿಕೆಟ್‌ಗಳನ್ನು ಕಬಳಿಸಿದರು. ಪಂದ್ಯ ಗೆಲ್ಲುತ್ತಿದ್ದಂತೆಯೇ ಆಕಾಶ್ ದೀಪ್ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಒಂದು ನೋವಿನ ವಿಚಾರವನ್ನು ಹಂಚಿಕೊಂಡರು.
ಸಹೋದರಿಗೆ ಕ್ಯಾನ್ಸರ್..
ಪಂದ್ಯ ಮುಗಿದ ಬಳಿಕ ಮಾತನಾಡಿದ ಆಕಾಶ್ ದೀಪ್.. ‘ನನ್ನ ಅಕ್ಕ ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದನ್ನು ನಾನು ಯಾರಿಗೂ ಹೇಳಿರಲಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ. ನನ್ನ ಸಹೋದರಿ ಈ ಗೆಲುವು ನೋಡಿ ಖುಷಿ ಪಡುತ್ತಾರೆ. ಕಳೆದ ಎರಡು ತಿಂಗಳುಗಳಿಂದ ಅವರು ಎದುರಿಸುತ್ತಿರುವ ಪರಿಸ್ಥಿತಿಗೆ ಹೋಲಿಸಿದರೆ, ಈ ಎರಡು ತಿಂಗಳುಗಳಲ್ಲಿ ಅವರು ಪಡೆದ ದೊಡ್ಡ ಸಂತೋಷ ಇದು ಎಂದು ಆಕಾಶ್‌ದೀಪ್ ಭಾವುಕರಾದರು.
ಇದನ್ನೂ ಓದಿ: ಟೆಸ್ಟ್ ಗೆಲುವಿಗೆ ಕಾರಣ 4 ಆಟಗಾರರು.. ಟೀಂ ಇಂಡಿಯಾ ಕಂಬ್ಯಾಕ್ ಹಿಂದಿರುವ ಹೀರೋಗಳು ಇವರೇ..!
10 ವಿಕೆಟ್ ಕಿತ್ತ ಆಕಾಶ್‌ದೀಪ್
ಇಂಗ್ಲೆಂಡ್‌ನಲ್ಲಿ 10 ವಿಕೆಟ್ ಗೊಂಚಲು ಪೂರ್ಣಗೊಳಿಸಿದ ಎರಡನೇ ಭಾರತೀಯ ಬೌಲರ್ ಆಕಾಶ್‌ದೀಪ್ ಆಗಿದ್ದಾರೆ. 1986ರಲ್ಲಿ ದಂತಕಥೆ ಚೇತನ್ ಶರ್ಮಾ ಈ ಸಾಧನೆ ಮಾಡಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಆಕಾಶ್ ದೀಪ್ 88 ರನ್​​ ನೀಡಿ 4 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ 99 ನೀಡಿ ಆರು ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕೊಹ್ಲಿ ದಿಲ್ ಗೆದ್ದ ಗಿಲ್.. ಪ್ರಿನ್ಸ್ ಯಶಸ್ಸಿನ ಹಿಂದಿನ ಸಿಕ್ರೇಟ್ ರಿವೀಲ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ