ರೋಹಿತ್ ಪತ್ನಿಗೆ ಕೈಜೋಡಿಸಿ ನಮಸ್ಕರಿಸಿದ IPL ಸ್ಟಾರ್.. ಆಕಾಶ್ ಮಧ್ವಾಲ್ ಸರಳತೆಗೆ ಜನ ಸೆಲ್ಯೂಟ್..!

author-image
Bheemappa
Updated On
ರೋಹಿತ್ ಪತ್ನಿಗೆ ಕೈಜೋಡಿಸಿ ನಮಸ್ಕರಿಸಿದ IPL ಸ್ಟಾರ್.. ಆಕಾಶ್ ಮಧ್ವಾಲ್ ಸರಳತೆಗೆ ಜನ ಸೆಲ್ಯೂಟ್..!
Advertisment
  • ಮಾಜಿ ಕ್ಯಾಪ್ಟನ್​ ಅನ್ನು ನೋಡಿ ಕೈ ಮುಗಿದ ಪೇಸ್ ಬೌಲರ್
  • ಪಂದ್ಯ ಮುಗಿದ ಮೇಲೆ ಅಲ್ಲಿ ಅಸಲಿಗೆ ಏನೇನು ನಡೆಯಿತು.?
  • ಭಾರತೀಯ ಸಂಸ್ಕೃತಿಯಂತೆ ಕೈ ಮುಗಿದಿದ್ದಕ್ಕೆ ಜನ ಮೆಚ್ಚುಗೆ

ತವರಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ಸೋಲೋಪ್ಪಿಕೊಂಡಿದೆ. ಮುಂಬೈ ಇಂಡಿಯನ್ಸ್​ ನೀಡಿದ್ದ 218 ರನ್​ಗಳ ಗುರಿ ಮುಟ್ಟಲಾಗದೇ 100 ರನ್​ಗಳ ಅಂತರದಿಂದ ರಾಜಸ್ಥಾನ್ ಪರಾಭವಗೊಂಡಿತು. ಈ ಪಂದ್ಯ ಮುಗಿದ ಮೇಲೆ ಹೃದಯ ಸ್ಪರ್ಶಿ ಸಂಗತಿಯೊಂದು ನಡೆದಿದೆ.

publive-image

ನಿನ್ನೆ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್​ ನಡುವೆ ಐಪಿಎಲ್ ಪಂದ್ಯ ನಡೆಯಿತು. ಪಂದ್ಯ ಮುಗಿದ ಮೇಲೆ ರಾಯಲ್ಸ್​ ತಂಡದ ಪೇಸ್ ಬೌಲರ್ ಆಗಿರುವ ಆಕಾಶ್ ಮಧ್ವಾಲ್ ರೋಹಿತ್ ಶರ್ಮಾರನ್ನು ಭೇಟಿ ಮಾಡಿದರು.

ರೋಹಿತ್ ಶರ್ಮಾ ಬಳಿ ಬರುತ್ತಿದ್ದಂತೆ ಆಕಾಶ್ ಮಧ್ವಾಲ್ ತನ್ನ 2 ಕೈಜೋಡಿಸಿ ನಮಸ್ಕಾರ ಮಾಡಿದ್ದಾರೆ. ಈ ವೇಳೆ ಇಬ್ಬರೂ ಆಟಗಾರರು ಪಂದ್ಯ ಕುರಿತು ಮಾತನಾಡುತ್ತಿದ್ದರು. ಆಗ ರೋಹಿತ್ ಶರ್ಮಾಗಾಗಿ ಹೆಂಡತಿ ರಿತಿಕಾ ಸಜ್ದೇಹ್ ಗ್ಯಾಲರಿಯಿಂದ ಕೂಗಿದ್ದಾರೆ. ಮೇಲೆ ನೋಡಿದ ರೋಹಿತ್ ಶರ್ಮಾ, ತನ್ನ ಹೆಂಡತಿಯನ್ನು ಆಕಾಶ್ ಮಧ್ವಾಲ್​ಗೆ ತೋರಿಸಿದರು.

ರಿತಿಕಾ ಸಜ್ದೇಹ್ ಅವರನ್ನು ನೋಡುತ್ತಿದ್ದಂತೆ ಆಕಾಶ್ ಮಧ್ವಾಲ್ ಮತ್ತೆ ಎರಡು ಕೈಗಳನ್ನು ಜೋಡಿಸಿ ಗೌರವಯುತವಾಗಿ ನಮಸ್ಕಾರ ಮಾಡಿದರು. ರಾಜಸ್ಥಾನ್ ಹಾಗೂ ಮುಂಬೈ ನಡುವಿನ ಪಂದ್ಯ ಮುಗಿದ ಮೇಲೆ ಈ ದೃಶ್ಯವೂ ಎಲ್ಲ ಅಭಿಮಾನಿಗಳಿಗೆ ತುಂಬಾ ಭಾವನಾತ್ಮಕವಾಗಿ ಕಂಡಿದೆ. ಭಾರತೀಯ ಸಂಸ್ಕೃತಿಯಂತೆ ಆಕಾಶ್ ಮಾಡಿರುವಂತ ನಮಸ್ಕಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: RCB 7 ಪಂದ್ಯ ಗೆದ್ದರೂ ಪ್ಲೇ ಆಫ್ ಎಂಟ್ರಿ ಸುಲಭ ಇಲ್ಲ.. ಬೆಂಗಳೂರಲ್ಲಿ ಅಗ್ನಿಪರೀಕ್ಷೆನಾ?

publive-image

ಇನ್ನು ಇದೇ ವೇಳೆ ರೋಹಿತ್ ಶರ್ಮಾರಿಂದ ಆಕಾಶ್ ಮಧ್ವಾಲ್ ತನ್ನ ಜೆರ್ಸಿ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡು ಸಂತಸ ಪಟ್ಟರು. ಬಳಿಕ ಫೋಟೋಗೂ ಪೋಸ್ ಕೊಟ್ಟರು. ಈ ಹಿಂದೆ ರೋಹಿತ್ ಶರ್ಮಾ ನಾಯಕರಾಗಿದ್ದಾಗ ಆಕಾಶ್ ಮಧ್ವಾಲ್ ಮುಂಬೈ ಇಂಡಿಯನ್ಸ್​ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇವರ ನಡುವೆ ಭಾವನಾತ್ಮಕವಾದ ಸಂಬಂಧ ಬೆಳೆದಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment