ಅಖಿಲ್ ಅಕ್ಕಿನೇನಿ ರಿಸೆಪ್ಷನ್​; ಹೊಸ ಲುಕ್​ನಲ್ಲಿ ಯಶ್​, ಸುದೀಪ್​ ಸಖತ್ ಸ್ಟೈಲಿಶ್​.. ಫೋಟೋಸ್​!

author-image
Bheemappa
Updated On
ಅಖಿಲ್ ಅಕ್ಕಿನೇನಿ ರಿಸೆಪ್ಷನ್​; ಹೊಸ ಲುಕ್​ನಲ್ಲಿ ಯಶ್​, ಸುದೀಪ್​ ಸಖತ್ ಸ್ಟೈಲಿಶ್​.. ಫೋಟೋಸ್​!
Advertisment
  • ನಾಗರ್ಜುನ ಮನೆಯಲ್ಲಿ ಬ್ಯಾಕ್​ ಟು ಬ್ಯಾಕ್ ಮದುವೆ ಸಂಭ್ರಮ
  • ಕಿರಿ ಮಗನ ಅದ್ಧೂರಿ ಆರತಕ್ಷತೆಗೆ ಯಾರು ಯಾರು ಬಂದಿದ್ದರು..?
  • ಅಖಿಲ್- ಜೈನಾಬ್ ರಿಸೆಪ್ಷನ್​ನಲ್ಲಿ ಯಶ್​, ಸುದೀಪ್​ ನ್ಯೂ ಲುಕ್​

ಹೈದರಾಬಾದ್: ಸೌತ್​ ಸೂಪರ್‌ ಸ್ಟಾರ್ ನಾಗಾರ್ಜುನ ಅವರ ಕಿರಿಯ ಮಗ ಅಖಿಲ್ ಅಕ್ಕಿನೇನಿ ಹಾಗೂ ಜೈನಾಬ್ ರಾವ್ಜಿ ಸಂಭ್ರಮದಿಂದ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದ್​ನ ಅನ್ನಪೂರ್ಣ ಸ್ಟೂಡಿಯೋದಲ್ಲಿ ನಡೆದ ಅದ್ಧೂರಿ ರಿಸೆಪ್ಷನ್​​ನಲ್ಲಿ ಸ್ಯಾಂಡಲ್​ವುಡ್​ನ ಸ್ಟಾರ್​ ಯಶ್​, ಸುದೀಪ್ ಸೇರಿದಂತೆ ದಕ್ಷಿಣ ಭಾರತದ ಸಿನಿರಂಗದವರು ಭಾಗಿಯಾಗಿದ್ದರು.

publive-image

ಟಾಲಿವುಡ್​ನ ಸ್ಟಾರ್ ನಟರಾದ ನಾಗಾರ್ಜುನ ಅವರ ಮನೆಯಲ್ಲಿ ಬ್ಯಾಕ್​ ಟು ಬ್ಯಾಕ್​ ಸಂಭ್ರಮಗಳು ನಡೆದಿವೆ ಎಂದು ಹೇಳಬಹುದು. ಏಕೆಂದರೆ ಕಳೆದ ವರ್ಷ ಅವರ ಹಿರಿಯ ಮಗ ನಾಗ ಚೈತನ್ಯ 2ನೇ ಮದುವೆಯಾಗಿದ್ದರು. ಇದರ ಬೆನ್ನಲ್ಲೇ ಅವರ ಕಿರಿಯ ಮಗ ಅಖಿಲ್ ಅಕ್ಕಿನೇನಿ ಅವರು ತನ್ನ ಬಹು ದಿನಗಳ ಗೆಳತಿ ಜೈನಾಬ್ ರಾವ್ಜಿ ಅವರನ್ನು ಭಾನುವಾರ ತಮ್ಮ ಸ್ವಗೃಹದಲ್ಲಿ ಗುರು, ಹಿರಿಯರ ಸಮ್ಮುಖದಲ್ಲಿ ವರಿಸಿದ್ದಾರೆ.

publive-image

ಅಖಿಲ್ ಅಕ್ಕಿನೇನಿ ಹಾಗೂ ಜೈನಾಬ್ ರಾವ್ಜಿ ಅವರ ವಿವಾಹದ ನಂತರ ಸಂಜೆ ರಿಸೆಪ್ಷನ್​​ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​ ಸ್ಟಾರ್​ಗಳಾದ ಯಶ್​ ಹಾಗೂ ಸುದೀಪ್ ಅವರಿಗೂ ಆಹ್ವಾನ ಇತ್ತು. ಅದರಂತೆ ಕಿಚ್ಚ ಸುದೀಪ್ ಹಾಗೂ ಯಶ್​ ಅವರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನವಜೋಡಿಗಳಿಗೆ ಶುಭ ಹಾರೈಸಿ, ಬಳಿಕ ಫೋಟೋಗೆ ಪೋಸ್ ಕೊಟ್ಟರು. ಸದ್ಯ ಈ ಫೋಟೋಗಳು, ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

publive-image

ಆರತಕ್ಷತೆ ಸಮಾರಂಭಕ್ಕೆ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಉಪಾಸನಾ ದಂಪತಿ, ರಾಕಿಂಗ್​ ಸ್ಟಾರ್​ ಯಶ್​​, ನ್ಯಾಚುರಲ್​ ಸ್ಟಾರ್ ನಾನಿ ದಂಪತಿ, ಕಿಚ್ಚ ಸುದೀಪ್​, ನಟ ಮಹೇಶ್​ ಬಾಬು ದಂಪತಿ, ನಟ ವೆಂಕಟೇಶ್, ನಿರ್ಮಾಪಕ ದಿಲ್ ರಾಜು, ತಮಿಳು ಸಿನಿಮಾ ನಟ ಸೂರ್ಯ ದಂಪತಿ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿದ್ದರು.

ಇದನ್ನೂ ಓದಿ:IPLನಲ್ಲಿ ಅಟ್ಟರ್​​ಫ್ಲಾಪ್​​​.. ಮಹತ್ವದ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ರೆ ವಿಕೆಟ್​ ಕೀಪರ್​ಗೆ ಗೇಟ್​ ಪಾಸ್?​

publive-image

ತೆಲುಗು ಸಿನಿಮಾ ರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಅಖಿಲ್ ಅಕ್ಕಿನೇನಿ ಮೊದಲಿನಿಂದಲೂ ಜೈನಾಬ್ ರಾವ್ಜಿ ಜೊತೆ ಸಲುಗೆಯಿಂದ ಇದ್ದರು. ಹೀಗಾಗಿ ಇಬ್ಬರ ನಡುವೆ ಪ್ರೀತಿಯಾಗಿತ್ತು. ನಿಶ್ಚಿತಾರ್ಥ 6 ತಿಂಗಳ ಹಿಂದೆಯೇ ನಡೆದಿತ್ತು. ಇದೀಗ ಅದ್ಧೂರಿಯಾಗಿ ವಿವಾಹ ಸಂಭ್ರಮ ನೆರವೇರಿದ್ದು ಎಲ್ಲರೂ ಈ ಕ್ಯೂಟ್​​ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment