newsfirstkannada.com

VIDEO: ಕನ್ನಡತಿ ಅಕ್ಕ ಅನುಗೆ ದಿಢೀರ್​ ಮದುವೆ ಆಯ್ತಾ..? ಈ​ ವಿಡಿಯೋ ಹಿಂದಿನ ಅಸಲಿಯತ್ತೇನು?

Share :

Published April 7, 2024 at 6:36pm

    ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ಅಕ್ಕ ಅನು

    ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅನು

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಅನು ವಿಡಿಯೋ

ಕೆಚ್ಚೆದೆಯ ಕನ್ನಡತಿ ‘ಅಕ್ಕ ಅನು’ ಯಾರಿಗೆ ಗೊತ್ತಿಲ್ಲ ಹೇಳಿ. ಸೋಷಿಯಲ್​ ಮೀಡಿಯಾ ಬಳಕೆದಾರರು ಇವರನ್ನು ನೋಡಿರುತ್ತಾರೆ. ಒಂದಲ್ಲಾ ಒಂದು ವಿಚಾರಕ್ಕೆ ಅಕ್ಕ ಅನು ಸುದ್ದಿಯಲ್ಲಿ ಇರುತ್ತಿದ್ದರು. ಸರ್ಕಾರಿ ಶಾಲೆ, ದೇವಾಲಯ ಸೇರಿದಂತೆ ಇತರೆ ಪಾರಂಪರಿಕ ತಾಣಗಳಿಗೆ ಹೋಗಿ ಸ್ವಚ್ಛತೆ ಮತ್ತು ಪುನರುಜ್ಜೀವನ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಬಗ್ಗೆ ಹಲವು ವಿಡಿಯೋಗಳನ್ನು ಸಹ ಅಕ್ಕ ಅನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅನು ಅವರು ಮಾಡುವ ಕೆಲಸಕ್ಕೆ ಸಾಕಷ್ಟು ಜನರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಅಕ್ಕ ಅನು ಅವರು ಮದುವೆ ಆಯ್ತಾ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಹೌದು, ಅಕ್ಕ ಅನು ಅವರ ವಿಡಿಯೋವೊಂದು ಸೋಷಿಯಲ್​ ಮೀಡಿಯಾ ವೈರಲ್​ ಆಗಿದೆ. ವೈರಲ್​ ಆದ ವಿಡಿಯೋದಲ್ಲಿ ಅಕ್ಕ ಅನು ಅವರು ತಲೆ ತುಂಬಾ ಹೂವನ್ನು ಮುಡಿದುಕೊಂಡು ಕುಳಿತುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅದೆಷ್ಟೋ ನೆಟ್ಟಿಗರು ಅಕ್ಕ ಅನು ಅವರ ಮದುವೆ ಆಯ್ತಾ ಅಂತಾ ಕಾಮೆಂಟ್​ ಹಾಕಿದ್ದಾರೆ.

ಇದನ್ನೂ ಓದಿ: ಮಹಿಳಾ ಸಾಧಕಿ ಪ್ರಶಸ್ತಿ ಪಡೆದ ಬಳಿಕ ಗಳಗಳನೇ ಕಣ್ಣೀರಿಟ್ಟ ‘ಕನ್ನಡತಿ ಅಕ್ಕ ಅನು’.. ಆಗಿದ್ದೇನು?

View this post on Instagram

A post shared by akka_anu_ (@team_akka_anu_1999)

ಆದರೆ ವೈರಲ್​ ಆದ ವಿಡಿಯೋದಲ್ಲಿ ಅಕ್ಕ ಅನು ಅವರು ಊರ ಜಾತ್ರೆಯ ಕ್ಷಣದಲ್ಲಿ ದೇವರಿಗೆ ದೀರ್ಘ ದಂಡ ನಮಸ್ಕಾರ ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಜಾತ್ರೆಗಳು ಇರುವಾಗ ಹರಕೆಯನ್ನು ಹೊತ್ತುಕೊಂಡಿರುವವರು ತಮ್ಮ ಮನೆಯಿಂದ ದೇವಾಲಯದವರೆಗೂ ಒದ್ದೆ ಬಟ್ಟೆಯಲ್ಲಿ ದಾರಿಯುದ್ದಕ್ಕೂ ಸಾಷ್ಟಾಂಗ ನಮಸ್ಕಾರ ಹಾಕುತ್ತಾ ಹೋಗುತ್ತಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ನು, ಈ ವಿಡಿಯೋ ನೆಟ್ಟಿಗರು, ದೇವರು ನಿನಗೆ ಒಳ್ಳೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಅನು, ನಮ್ಮ ಅಕ್ಕನಿಗೆ ಆ ದೇವರು ಆಶೀರ್ವಾದ ಸದಾ ಇರಲಿ ಎಂದು ಕಾಮೆಂಟ್​ ಮಾಡಿದ್ದಾರೆ. ಇದರಲ್ಲಿ ಓರ್ವ ನೆಟ್ಟಿಗ ದಯವಿಟ್ಟು ಯಾರು ಅನ್ಯತಾ ಭಾವಿಸಬೇಡಿ. ಇದು ಊರಿನ ಜಾತ್ರೆಗೆ ಹರೆಕೆ ತೀರಿಸಲು ಶ್ರೀದೇವಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತಿರುವುದು ಅಷ್ಟೇ. ಅವರದು ಮದುವೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕನ್ನಡತಿ ಅಕ್ಕ ಅನುಗೆ ದಿಢೀರ್​ ಮದುವೆ ಆಯ್ತಾ..? ಈ​ ವಿಡಿಯೋ ಹಿಂದಿನ ಅಸಲಿಯತ್ತೇನು?

https://newsfirstlive.com/wp-content/uploads/2024/04/akka-anu2.jpg

Load More