/newsfirstlive-kannada/media/post_attachments/wp-content/uploads/2025/01/HVR_AKKA.jpg)
ಅವರೆಲ್ಲಾ ಲಿಂಗತ್ವ ಅಲ್ಪಸಂಖ್ಯಾತರು. ಅವರಿಗೆ ಉದ್ಯೋಗಾವಕಾಶಗಳನ್ನ ನೀಡಿ, ಸಮಾಜಮುಖಿಯನ್ನಾಗಿ ಮಾಡಬೇಕೆಂದು ಸರ್ಕಾರ ಹತ್ತು ಹಲವು ಯೋಜನೆ ಜಾರಿ ಮಾಡ್ತಿದೆ. ಈಗ ಹಾವೇರಿ ಜಿಲ್ಲಾಡಳಿತ ಅಕ್ಕ ಕೆಫೆ ಮಾಡುವ ಮೂಲಕ ಲಿಂಗತ್ವ ಅಲ್ಪಸಂಖ್ಯಾತರಿಗೆ ಉದ್ಯೋಗ ಅವಕಾಶ ನೀಡಿದೆ. ರಾಜ್ಯದಲ್ಲಿ ಪ್ರಥಮ ಭಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ನೇತೃತ್ವದಲ್ಲಿ ನಡೆಯುವ ಅಕ್ಕ ಕೆಫೆ ಇವತ್ತಿನಿಂದ ಪ್ರಾರಂಭವಾಗಲಿದೆ.
ಹಾವೇರಿಯ ಜಿಲ್ಲಾಪಂಚಾಯತಿ ಆವರಣದಲ್ಲಿ ನಿರ್ಮಾಣಗೊಂಡ ಕೆಫೆ ಅದರ ಉಸ್ತುವಾರಿ ಹೊತ್ತಿರುವ ಲಿಂಗತ್ವ ಅಲ್ಪಸಂಖ್ಯಾತರು. ರಾಜ್ಯ ಸರ್ಕಾರ ವಿವಿಧೆಡೆಯಲ್ಲಿ ಮಹಿಳೆಯರಿಗೆ ಉದ್ಯೋಗ ಅವಕಾಶ ಹಾಗೂ ಸ್ವಾವಲಂಬಿ ಬದುಕು ನಡೆಸಲು ಅಕ್ಕ ಕೆಫೆ ಯೋಜನೆ ಜಾರಿ ಮಾಡಿದೆ. ರಾಜ್ಯದಲ್ಲಿ ಈಗಾಗ್ಲೇ 50 ಅಕ್ಕ ಕೆಫೆಯನ್ನ ಸ್ಥಾಪಿಸಲಾಗಿದೆ. ಇದೀಗ ಹಾವೇರಿಯ ಜಿಲ್ಲಾಪಂಚಾಯತಿ ಆವರಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸುಮಾರು 15 ಲಕ್ಷ ರೂಪಾಯಿ ಅನುದಾನದಲ್ಲಿ ಅಕ್ಕ ಕೆಫೆಯನ್ನ ನಿರ್ಮಾಣ ಮಾಡಲಾಗಿದೆ.
ಜಿಲ್ಲಾ ಪಂಚಾಯತಿ ಸಿಇಓ ಏನ್ ಹೇಳುತ್ತಾರೆ?
ರಾಜ್ಯದಲ್ಲಿ ಪ್ರಥಮ ಭಾರಿಗೆ ಲಿಂಗತ್ವ ಅಲ್ಪಸಂಖ್ಯಾತರು ಹಾವೇರಿ ಅಕ್ಕ ಕೆಫೆಯನ್ನ ನಿರ್ವಹಣೆ ಮಾಡಲಿದ್ದಾರೆ. ಈ ಕೆಫೆಯಲ್ಲಿ ಅಡುಗೆ ಮಾಡೋದು, ಸರ್ವ್ ಮಾಡೋದು ಸೇರಿದಂತೆ ಎಲ್ಲಾ ಕೆಲಸವೂ ಸಹ ಅಕ್ಕ ಕೆಫೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರೆ ಮಾಡುತ್ತಾರೆ ಎಂದು ಜಿಲ್ಲಾ ಪಂಚಾಯತಿ ಸಿಇಓ ಅಕ್ಷಯ ಶ್ರೀಧರ್ ಹೇಳಿದ್ದಾರೆ.
ಅಕ್ಕ ಕೆಫೆಯಲ್ಲಿ 15 ಜನರು ಲಿಂಗತ್ವ ಅಲ್ಪಸಂಖ್ಯಾತರು ಕೆಲಸ ಮಾಡಲಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಊಟವನ್ನ ಮಾಡಲಾಗ್ತಿದೆ. ಸಾವಯವ ಊಟಕ್ಕೆ ಹೆಚ್ಚು ಒತ್ತು ಕೊಡಲಾಗ್ತಿದೆ. ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ಮತ್ತು ವೇಶ್ಯಾವಾಟಿಕೆಯಿಂದ ಬದುಕು ಕಟ್ಟಿಕೊಳ್ಳುವಂತವರು ಅನ್ನೋ ವಾತಾವರಣ ಇತ್ತು. ಆದ್ರೆ ಜಿಲ್ಲಾಡಳಿತ ಅವರನ್ನು ಸಮಾಜಮುಖಿಗಳನ್ನಾಗಿ ಮಾಡಬೇಕು ಅನ್ನೋ ಉದ್ದೇಶದಿಂದ ಅಕ್ಕ ಕೆಫೆ ನಿರ್ವಹಣೆ ನಮಗೆ ಕೊಟ್ಟಿದ್ದಾರೆ. ನಮಗೆ ಉದ್ಯೋಗ ನೀಡಿದ್ದು ಸಂತೋಷವಾಗಿದೆ ಅಂತ ಲಿಂಗತ್ವ ಅಲ್ಪಸಂಖ್ಯಾತರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ CBSC.. ಪಿಯುಸಿ ಮುಗಿಸಿದವ್ರಿಗೂ ಗೋಲ್ಡನ್ ಚಾನ್ಸ್
ರಾಜ್ಯದಲ್ಲಿ 50 ಅಕ್ಕ ಕೆಫೆ ಸ್ಥಾಪನೆ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲ ಕಡೆ ಮಹಿಳೆಯರು ನಿರ್ವಹಣೆ ಮಾಡಿದರೆ ಹಾವೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ನಿರ್ವಹಣೆಗೆ ಅವಕಾಶ ಕೊಟ್ಟು, ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಈ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ