newsfirstkannada.com

‘ದುಡ್ಡು ಕೊಡು, ಇಲ್ಲ ಮಂಚಕ್ಕೆ ಬಾ..’- ಯೂನಿವರ್ಸಿಟಿ HOD ವಿರುದ್ಧ ಲೈಂಗಿಕ ಕಿರುಕುಳ ಆರೋಪ!

Share :

Published March 13, 2024 at 9:05pm

    ಹಲವು ಸಂಶೋಧನಾ ವಿದ್ಯಾರ್ಥಿನಿಯರಿಗೂ ಲೈಂಗಿಕ ಕಿರುಕುಳ

    ಅಕ್ಕಮಹಾದೇವಿ ವಿವಿಯಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ವಾ?

    HOD ವಿರುದ್ಧ ಗಂಭೀರ ಆರೋಪ ಮಾಡಿದ ವಿದ್ಯಾರ್ಥಿನಿ..!

ವಿಜಯಪುರ: ವಿದ್ಯಾ ಮಂದಿರ ಅಂದ್ರೆ ಪವಿತ್ರ ಜಾಗ. ಇಂಥಾ ಪವಿತ್ರ ಜಾಗದಲ್ಲಿ ಪಾಠ ಮಾಡಬೇಕಾದ ಶಿಕ್ಷಕ ಅಪವಿತ್ರ ಕೆಲಸ ಮಾಡಿರುವ ಆರೋಪ ಕೇಳಿ ಬಂದಿದೆ. ಪ್ರತಿಷ್ಠಿತ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪ ಬಂದಿದ್ದು, ವಿದ್ಯಾರ್ಥಿನಿಯರಿಗೆ ಈ ಯೂನಿವರ್ಸಿಟಿ ಎಷ್ಟು ಸೇಫ್​? ಅನ್ನೋ ಚರ್ಚೆ ಶುರುವಾಗಿದೆ. ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಮಲ್ಲಿಕಾರ್ಜುನ ವಿರುದ್ಧ ವಿದ್ಯಾರ್ಥಿನಿ ಆರೋಪಗಳ ಸುರಿಮಳೆಯನ್ನ ಸುರಿಸಿದ್ದಾರೆ.

ವಿವಿಯಲ್ಲಿ ಲೈಂಗಿಕ ಕಿರುಕುಳ? ಹೆಚ್‌ಒಡಿ ಹೇಳಿದ್ದೆಲ್ಲಾ ಕೇಳ್ಬೇಕಾ ಸ್ಟೂಡೆಂಟ್ಸ್?

ರಾಜ್ಯದಲ್ಲಿರುವ ಏಕೈಕ ಮಹಿಳಾ ವಿಶ್ವ ವಿದ್ಯಾಲಯ ಅಕ್ಕ ಮಹಾದೇವಿ ಯೂನಿರ್ವಸಿಟಿ. ಹೆಣ್ಮಕಳ್ಳಿಗೆ ಯಾರಿಂದಲೂ ತೊಂದರೆ ಆಗದೇ ಇರಲಿ. ಯಾವುದೇ ಭಯವಿಲ್ಲದೇ ಹೆಣ್ಮಕಳ್ಳು ಓದಲಿ ಅನ್ನೋ ಉದ್ದೇಶದಿಂದಲೇ ಈ ವಿಶ್ವ ವಿದ್ಯಾಲಯದ ಸ್ಥಾಪನೆ ಮಾಡಲಾಗಿದೆ. ಎರಡು ದಶಕದಿಂದ ಅದೆಷ್ಟು ಹೆಣ್ಮಕಳು ಇಲ್ಲಿ ಕಲಿತು ಉನ್ನತ ಸ್ಥಾನದಲ್ಲಿ ಕೆಲಸ ಮಾಡ್ತಿದ್ದಾರೆ. ಆದರೆ ಈಗ ಮಹಿಳಾ ವಿಶ್ವ ವಿದ್ಯಾಲಯದಲ್ಲೇ ಮಹಿಳೆಯರಿಗೆ ಸುರಕ್ಷತೆ ಇಲ್ವಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಈ ವಿದ್ಯಾರ್ಥಿನಿಯ ಆರೋಪಗಳು.

ಅಶ್ಲೀಲ ಪದಗಳಿಂದ ಬೈಯ್ತಾರೆ.. ಸಂಶೋಧನಾ ವಿದ್ಯಾರ್ಥಿನಿಗೆ ಟಾರ್ಚರ್?

ಅಕ್ಕಮಹಾದೇವಿ ಯೂನಿರ್ವಸಿಟಿಲ್ಲಿ ಎಂಬಿಎ ಮುಗಿಸಿರುವ ಪ್ರಿಯಾಂಕ ಈಗ ಪಿಎಚ್​ಡಿ ಓದುತ್ತಿದ್ದಾರೆ. ಚೆನ್ನಾಗಿ ಓದಿ ಒಂದೊಳ್ಳೆ ಬದುಕು ಕಟ್ಕೋಬೇಕು ಅನ್ನೋದು ಪ್ರಿಯಾಂಕ ಕನಸಾಗಿದೆ. ಆದ್ರೀಗ ಅಕ್ಕಮಹಾದೇವಿ ವಿಶ್ವ ವಿದ್ಯಾನಿಲಯದ ವ್ಯವಹಾರ ಅಧ್ಯಯನದ ಮುಖ್ಯಸ್ಥ ಪ್ರೊ ಮಲ್ಲಿಕಾರ್ಜುನ ಈ ಹುಡುಗಿ ಕನಸಿಗೆ ತಣ್ಣೀರು ಎರಚುವ ಕೆಲಸ ಮಾಡೋದಕ್ಕೆ ಮುಂದಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಪಿಎಚ್​ಡಿ ಕಂಪ್ಲೀಟ್ ಆಗ್ಬೇಕು ಅಂದ್ರೆ ನಾಲ್ಕೈದು ಲಕ್ಷ ಹಣ ಕೊಡ್ಬೇಕು. ಇಲ್ಲ ಮಂಚ ಹತ್ತಬೇಕು ಅಂತ ಪ್ರೊ.ಮಲ್ಲಿಕಾರ್ಜುನ ಕಿರುಕುಳ ಕೊಟ್ಟಿದ್ದಾರೆ ಅಂತ ಸಂಶೋಧನಾ ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಕಳೆದ ಆರು ತಿಂಗಳಿಂದ ವ್ಯವಹಾರ ಅಧ್ಯಯನದ ಮುಖ್ಯಸ್ಥ ಪ್ರೊ ಮಲ್ಲಿಕಾರ್ಜುನ್ ಲೈಂಗಿಕ ಕಿರುಕುಳ ನೀಡುತ್ತಿದ್ದಾನಂತೆ. ಪಿಎಚ್​ಡಿ ಕಂಪ್ಲೀಟ್ ಆಗ್ಬೇಕಾದ್ರೆ ನನಗೆ ಸಹಕರಿಸು, ಇಲ್ಲ ಹಣ ಕೊಡು ಅಂತ ಪೀಡಿಸ್ತಾ ಇದ್ನಂತೆ ಅನ್ನೋದು ವಿದ್ಯಾರ್ಥಿನಿಯ ಆರೋಪ. ಆದ್ರೆ ಹುಡುಗಿ ಈ ಬೆದರಿಕೆಗಳಿಗೆ ಅಂಜದೇ ಇದ್ದಾಗ ಪ್ರೊ ಮಲ್ಲಿಕಾರ್ಜುನ ಅಶ್ಲೀಲ ಪದಗಳಿಂದ ನಿಂದನೆ ಮಾಡೋದು, ತನ್ನ ರೂಮ್​ನಲ್ಲಿ ಕರೆಸಿ ಕೆಟ್ಟದಾಗಿ ನೋಡೋದೆಲ್ಲ ಮಾಡ್ತಿದ್ನಂತೆ. ಇದ್ರಿಂದ ಬೇಸತ್ತಿದ್ದ ಹುಡುಗಿ ಆತಹ್ಮತ್ಯೆಗೂ ಯತ್ನಿಸಿರೋದಾಗಿ ತನ್ನ ಅಳಲು ತೋಡಿಕೊಂಡಿದ್ದಾಳೆ.

ನನಗೆಷ್ಟೇ ಅಲ್ಲ ಹಲವು ಸಂಶೋಧನಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆಗ್ತಿದೆ. ಯಾರು ಹೇಳಲು ಮುಂದೆ ಬಂದಿಲ್ಲ. ಹೀಗಾಗಿ ನಾನು ಇದಕ್ಕೆಲ್ಲ ಫುಲ್ ಸ್ಟಾಪ್ ಇಡೋ ಕಾರಣಕ್ಕೆ ದೂರು ಕೊಟ್ಟಿದ್ದೇನೆ ಅಂತ ಸಂಶೋದನಾ ವಿದ್ಯಾರ್ಥಿನಿ ಆಪಾದಿಸಿದ್ದಾರೆ. ವಿದ್ಯಾರ್ಥಿನಿ ಸ್ಥಿತಿ ಕಂಡು ಕುಟುಂಬದವರು ಕೂಡ ಕಂಗಲಾಗಿದ್ದಾರೆ. ಮಗಳ ಭವಿಷ್ಯ ಕಟ್ಬೇಕು ಅಂತ ಕನಸು ಕಟ್ಕೊಂಡವರು ಕಂಗಲಾಗಿದ್ದು, ಪ್ರೋ. ಮಲ್ಲಿಕಾರ್ಜುನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕೂಡಲೇ ಪ್ರೊಫೆಸರ್​​ನನ್ನ ಬಂಧಿಸಿ ಶಿಕ್ಷೆ ನೀಡ್ಬೇಕು ಎಂದು ಆಗ್ರಹಿಸಿದ್ದಾರೆ. ಮಹಿಳಾ ವಿಶ್ವ ವಿದ್ಯಾಲಯ ಅಂದ್ರೆ ಮಹಿಳೆಯರಿಗೆ ಆಧ್ಯತೆ ನೀಡ್ಬೇಕು. ಹೆಣ್ಮಕ್ಕಳು ನಿರ್ಭಯವಾಗಿ ಓದೋದಕ್ಕೆ ಅವಕಾಶ ಇರಬೇಕು. ಆದ್ರೀಗ ಮಹಿಳಾ ಯುನಿರ್ವಸಿಟಿಯಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲದೇ ಇರೋದು ನಿಜಕ್ಕೂ ಆತಂಕಕಾರಿ ಅಂತ ಸ್ಥಳೀಯರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಪ್ರೊಪೆಸರ್ ವಿರುದ್ಧ ಸಾಲು ಸಾಲು ಆರೋಪ ಮಾಡಿರುವ ವಿದ್ಯಾರ್ಥಿನಿ ಸಿಎಂ, ಉನ್ನತ ಶಿಕ್ಷಣ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೂ ದೂರು ನೀಡೋದಾಗಿ ಹೇಳಿದ್ದಾರೆ. ಅದೇನೆ ಇರಲಿ ಮಹಿಳೆಯರ ಶ್ರೇಯೋಭಿವೃದ್ಧಿಗೆ ಅಂತ ಇರೋ ಮಹಿಳಾ ವಿಶ್ವ ವಿದ್ಯಾಲಯದಲ್ಲೇ ಇಂಥಾದೊಂದು ಆರೋಪ ಕೇಳಿ ಬಂದಿರೋದು ನಿಜಕ್ಕೂ ದುರದೃಷ್ಟಕರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದುಡ್ಡು ಕೊಡು, ಇಲ್ಲ ಮಂಚಕ್ಕೆ ಬಾ..’- ಯೂನಿವರ್ಸಿಟಿ HOD ವಿರುದ್ಧ ಲೈಂಗಿಕ ಕಿರುಕುಳ ಆರೋಪ!

https://newsfirstlive.com/wp-content/uploads/2024/03/vijaypura.jpg

Load More