ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಕಿನೇನಿ ಕಿರಿಯ ಮಗ.. ಅಖಿಲ್ ಮದುವೆ ಫೋಟೋಸ್​ ಇಲ್ಲಿವೆ!

author-image
Veena Gangani
Updated On
ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಕಿನೇನಿ ಕಿರಿಯ ಮಗ.. ಅಖಿಲ್ ಮದುವೆ ಫೋಟೋಸ್​ ಇಲ್ಲಿವೆ!
Advertisment
  • ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಮದುವೆ ಸಂಭ್ರಮ ಜೋರು
  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಕಿನೇನಿ ನಾಗಾರ್ಜುನ ಕಿರಿ ಮಗ
  • ನಾಗಾರ್ಜುನ ಎರಡನೇ ಪುತ್ರ ಅಖಿಲ್ ಅಕ್ಕಿನೇನಿ ಫೋಟೋಸ್ ನೋಡಿ

ತೆಲುಗು ಸೂಪರ್​​ ಸ್ಟಾರ್​ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅಕ್ಕಿನೇನಿ ನಾಗಾರ್ಜುನ ಅವರ ಎರಡನೇ ಪುತ್ರ ಅಖಿಲ್ ಅಕ್ಕಿನೇನಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾದ FIR ಸಿಐಡಿಗೆ ವರ್ಗಾವಣೆ -ಕಾಲ್ತುಳಿತದ ವಿರುದ್ಧ ಸರ್ಕಾರ 6 ಆದೇಶ

publive-image

ಬ್ಯಾಚುಲರ್ ಲೈಫ್​ಗೆ ವಿದಾಯ ಹೇಳಿ, ಗೆಳತಿ ಝೈನಾಬ್ ರಾವಡ್ಜಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗಿನ ಜಾವ 3 ಗಂಟೆಗೆ ಜುಬಿಲಿ ಹಿಲ್ಸ್‌ನಲ್ಲಿರುವ ನಾಗಾರ್ಜುನ ಅವರ ನಿವಾಸದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ.

publive-image

ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಝೈನಾಬ್ ರಾವಡ್ಜಿ ಜೊತೆಗೆ ಅಖಿಲ್ ಅಕ್ಕಿನೇನಿ ಮದುವೆಯಾಗಿದೆ. ಇನ್ನೂ ಈ ಸ್ಟಾರ್​ ಜೋಡಿ ಮದುವೆಗೆ ಆಪ್ತರು ಮತ್ತು ಸಿನಿಮಾ ತಾರೆಯರು ಭಾಗವಹಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ ಮತ್ತು ಸುರೇಖಾ, ರಾಮ್ ಚರಣ್ ಉಪಾಸನ, ನಿರ್ದೇಶಕ ಪ್ರಶಾಂತ್ ನೀಲ್, ನಾಯಕ ಸುಮಂತ್, ಕೆಜಿಎಫ್​ ಡೈರೆಕ್ಟರ್ ಪ್ರಶಾಂತ್​ ನೀಲ್​ ಮತ್ತು ಚಿತ್ರರಂಗದ ಇತರರು ಹಾಜರಿದ್ದರು. ಇನ್ನೂ, ಜೂನ್ 8ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ಆರತಕ್ಷತೆ ಸಮಾರಂಭ ನಡೆಯಲಿದೆ.

publive-image

ಅಖಿಲ್ ಅಕ್ಕಿನೇನಿಯನ್ನು ಮದುವೆಯಾಗಿರೋ ಹುಡುಗಿ ಹೆಸರು ಝೈನಾಬ್ ರಾವಡ್ಜಿ. ಈ ಹಿಂದೆ ಅಖಿಲ್ ಅಕ್ಕಿನೇನಿ ಅವರು ಝೈನಾಬ್ ರಾವಡ್ಜಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ಖುದ್ದು ನಾಗಾರ್ಜುನ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದರು.

publive-image

ಅಖಿಲ್ ಅಕ್ಕಿನೇನಿ ಕೈ ಹಿಡಿದ ಚಲುವೆ ಯಾರು?

ತೆಲುಗು ನಟ ಅಖಿಲ್ ಅಕ್ಕಿನೇನಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಹೆಸರು ಝೈನಾಬ್ ರಾವಡ್ಜಿ. ಇವರಿಗೆ ಪೇಂಟಿಂಗ್​ನಲ್ಲಿ ಒಲವು ಜಾಸ್ತಿ ಇದೆ. ಪೇಂಟಿಂಗ್​ ಕ್ಷೇತ್ರದಲ್ಲಿಯೇ ಹೆಸರುವಾಸಿಯಾದ ಪ್ರತಿಭಾವಂತ ಕಲಾವಿದೆಯಾಗಿದ್ದಾರೆ. 27ನೇ ವರ್ಷದ ಝೈನಾಬ್ ರಾವಡ್ಜಿ ಅವರು ಹೈದರಾಬಾದ್‌ನಲ್ಲಿ “ರಿಫ್ಲೆಕ್ಷನ್ಸ್” ನಂತಹ ಪ್ರದರ್ಶನಗಳೊಂದಿಗೆ ಕಲಾ ಜಗತ್ತಿನಲ್ಲಿ ಛಾಪು ಮೂಡಿಸಿದ್ದಾರೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಜೈನಾಬ್ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಇನ್ನೂ ಝೈನಾಬ್ ರಾವಡ್ಜಿ ಅವರ ನಿವ್ವಳ ಮೌಲ್ಯ ಮತ್ತು ಶಿಕ್ಷಣದ ವಿವರಗಳು ಖಾಸಗಿಯಾಗಿಯೇ ಉಳಿದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment