Advertisment

ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್.. ಬ್ಯೂಟಿಫುಲ್ ​ ಫೋಟೋಸ್​ ಇಲ್ಲಿವೆ

author-image
Veena Gangani
Updated On
ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್.. ಬ್ಯೂಟಿಫುಲ್ ​ ಫೋಟೋಸ್​ ಇಲ್ಲಿವೆ
Advertisment
  • ನಟ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಮನೆ ಮಾಡಿದ ಸಂಭ್ರಮ
  • ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡು ಶಾಕ್​ ಕೊಟ್ಟ ಜೋಡಿ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ ಫೋಟೋಸ್

ತೆಲುಗು ಸೂಪರ್​​ ಹೀರೋ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸ್ಟಾರ್ ನಟಿ ಶೋಭಿತಾ ಧೂಲಿಪಾಲ್ ಜೊತೆಗೆ ನಟ ನಾಗ ಚೈತನ್ಯ 8.08.2024 ರಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ನಾಗ ಚೈತನ್ಯ ನಿಶ್ಚಿತಾರ್ಥ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದೇ ಫೋಟೋಸ್​ ನೋಡಿದ ಅಭಿಮಾನಿಗಳು ಅಕ್ಷರಶಃ ಶಾಕ್ ಆಗಿದ್ದರು.

Advertisment

ಇದನ್ನೂ ಓದಿ: ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್ -ಸಮಂತಾಗೆ ಕೈಕೊಟ್ಟಿದ್ದು ಇದ್ಕೆ ಎಂದು ಆಕ್ರೋಶ

publive-image

ಗುರುವಾರ ಬೆಳಗ್ಗೆ 9.42ಕ್ಕೆ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಲಿಪಾಲ್ ಎಂಗೇಜ್ಮೆಂಟ್ ನಡೆದಿದೆ. ಈ ಬಗ್ಗೆ ಖುದ್ದು ನಟ ನಾಗಾರ್ಜುನ ಅವರೇ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಲಿಪಾಲ್ ಎಂಗೇಜ್ಮೆಂಟ್ ನಡೆದಿತ್ತು. ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್​ನಲ್ಲಿರುವ ನಾಗಾರ್ಜುನ್ ಮನೆಯಲ್ಲಿ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಕುಟುಂಬಸ್ಥರು ಭಾಗಿಯಾಗಿದ್ದರು.

publive-image

ಜೊತೆಗೆ ಟ್ವೀಟ್ ಮೂಲಕ ಮಗನ ಎಂಗೇಜ್​ಮೆಂಟ್ ಬಗ್ಗೆ ಮಾಹಿತಿ ನೀಡಿರುವ ಅಕ್ಕಿನೇನಿ ನಾಗಾರ್ಜುನ್‌ ಅವರು, ಇಬ್ಬರಿಗೂ ಲೈಫ್ ಟೈಮ್ ಲವ್ ಹಾಗೂ ಸಂತೋಷವನ್ನು ಬಯಸುತ್ತೇನೆ ಅಂತ ಪೋಸ್ಟ್ ಮಾಡಿದ್ದರು. ಗುರುವಾರ ನಡೆದ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ.

Advertisment

publive-image

ಇದೇ ಫೋಟೋಗಳನ್ನು ನೋಡಿದ ಕೆಲವು ಅಭಿಮಾನಿಗಳು ಸ್ಟಾರ್ ಜೋಡಿಗೆ ಶುಭ ಹಾರೈಸಿದ್ದಾರೆ. ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ, ಒಳ್ಳೆಯ ಜೋಡಿ, ನಿಮಗೆ ಇಷ್ಟ ಆದವರ ಜೊತೆಗೆ ಖುಷಿಯಿಂದ ಇರಿ ಎಂದು ಕಾಮೆಂಟ್ಸ್​ ಹಾಕಿದ್ದಾರೆ. ಕೆಲವರು ನೀವು ಸಿಂಗಲ್​ ಆಗಿರಬೇಕಿತ್ತು, ಸಮಂತಾ ಅವರನ್ನು ಮರೆತುಬಿಟ್ರಾ ಎಂದು ಕಾಮೆಂಟ್ಸ್ ಹಾಕಿದ್ದಾರೆ.

ಇದನ್ನೂ ಓದಿ:VIDEO: ದುನಿಯಾ ವಿಜಯ್​​ ಕೊಲೆಗೆ ಯತ್ನ.. ಭೀಮಾ ರಿಲೀಸ್​ ಹೊತ್ತಲ್ಲೇ ಸ್ಫೋಟಕ ಸತ್ಯ ಬಿಚ್ಚಿಟ್ಟ ಸಲಗ

publive-image

2017ರಲ್ಲಿ‌ ನಟಿ ಸಮಂತಾ ಜೊತೆ ನಾಗಚೈತನ್ಯ ಅವರ ಮದುವೆ ಆಗಿತ್ತು. 2021ರಲ್ಲಿ‌ ಸಮಂತಾ ಮತ್ತು ನಾಗ ಚೈತನ್ಯರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ನಂತರ ವೈವಾಹಿಕ ಬದುಕು ಮುರಿದು ಬಿದ್ದಿತ್ತು. ಇದಾದ ಬಳಿಕ ಶೋಭಿತಾ ಜೊತೆ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿದ್ದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಬಹಳ ಹಿಂದೆಯೇ ಕೇಳಿ ಬಂದಿತ್ತು.

Advertisment

publive-image

ಇದೀಗ ತಂದೆ ನಾಗಾರ್ಜುನ ಅವರೇ ಮುಂದೆ ನಿಂತು ನಿಶ್ಚಿತಾರ್ಥ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಸಮಂತಾ ಜೊತೆಗಿನ‌ ಡಿವೋರ್ಸ್ ನಂತರ ನಾಗಚೈತನ್ಯ ಅವರು ಎರಡನೇ ಮದುವೆಗೆ ಮುಂದಾಗಿದ್ದಾರೆ. ಅಧಿಕೃತವಾಗಿ ಎಂಗೇಜ್ ಆಗಿರುವ ಈ ಜೋಡಿ ಮದುವೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಿಸಲಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment