Advertisment

ಅಮೆರಿಕದಲ್ಲಿ ಒಳ್ಳೆ ಜಾಬ್, ಡಿಸೆಂಬರ್​ನಲ್ಲಿ ಮದುವೆ.. ಆದ್ರೆ ದುರಂತ ಅಂತ್ಯಕಂಡ ಯುವಕ; ಕಾರಣವೇನು?

author-image
Bheemappa
Updated On
ಅಮೆರಿಕದಲ್ಲಿ ಒಳ್ಳೆ ಜಾಬ್, ಡಿಸೆಂಬರ್​ನಲ್ಲಿ ಮದುವೆ.. ಆದ್ರೆ ದುರಂತ ಅಂತ್ಯಕಂಡ ಯುವಕ; ಕಾರಣವೇನು?
Advertisment
  • ಕೈಗೆ ಬಂದ ಮಗನನ್ನು ಕಳೆದುಕೊಂಡು ಬರಿಗೈಯಲ್ಲಿ ಕುಳಿತ ಕುಟುಂಬ
  • ಕುಟುಂಬ ಅಂದುಕೊಂಡಂತೆ ಆಗಿದ್ರೆ ಇದೇ ವರ್ಷ ಮದುವೆ ಆಗ್ತಿತ್ತು
  • ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಮುಗಿಸಿ ಜಾಬ್​ ಮಾಡ್ತಿದ್ದ

ಹೈದರಾಬಾದ್: ಅಮೆರಿಕದ ಚಿಕಾಗೋದ ಮಿಚಿಗನ್ ಸರೋವರದಲ್ಲಿ ಈಜಲು ಹೋಗಿದ್ದ ಹೈದರಾಬಾದ್ ಮೂಲದ ಉದ್ಯೋಗಿಯೊಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Advertisment

ಇದನ್ನೂ ಓದಿ:ಸಲ್ಲು ಭಾಯ್​ ಬಾಡಿಗಾರ್ಡ್​ಗೆ ಕೋಟಿ ಕೋಟಿ ರೂಪಾಯಿ ಸ್ಯಾಲರಿ..! ಇವರಿಗೆ ಏನೆಂದು ಕರೆಯುತ್ತಾರೆ ಗೊತ್ತಾ..?

ಹೈದರಾಬಾದ್​​ ನಗರದ ಕಾಟೇದಾನದ ಅಕ್ಷಿತ್ ರೆಡ್ಡಿ (26) ಸಾವನ್ನಪ್ಪಿರುವ ಯುವಕ. ಇವರ ತಂದೆ ಗೋಪಾಲ್ ರೆಡ್ಡಿ ಮಹೆಬೂಬ್‌ನಗರ ಜಿಲ್ಲೆಯ ಅಡ್ಡಕುವಿನ ಗ್ರಾಮದವರು. 25 ವರ್ಷಗಳ ಹಿಂದೆ ಕಾಟೇದಾನಕ್ಕೆ ವಲಸೆ ಬಂದಿದ್ದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಅಕ್ಷಿತ್ ರೆಡ್ಡಿ ಸೇರಿ ಒಟ್ಟು ಮೂವರು ಮಕ್ಕಳಿದ್ದರು. ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿದ್ದ ತಂದೆ ಉನ್ನತ ವ್ಯಾಸಂಗಕ್ಕಾಗಿ 3 ವರ್ಷದ ಹಿಂದೆ ಮಗನನ್ನು ಅಮೆರಿಕಕ್ಕೆ ಕಳುಹಿಸಿದ್ದರು. ಅಲ್ಲಿನ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಮುಗಿಸಿದ್ದ ಅಕ್ಷಿತ್ ಅಲ್ಲೇ ಉದ್ಯೋಗ ಮಾಡಿಕೊಂಡಿದ್ದರು.

ಹೀಗಾಗಿ ಇನ್ನೇನು ಡಿಸೆಂಬರ್​ನಲ್ಲಿ ಮದುವೆ ಮಾಡಬೇಕೆಂದು ಎಲ್ಲ ಅಂದುಕೊಂಡಿದ್ದರು. ಇದಕ್ಕೆ ಬೇಕಾದ ವ್ಯವಸ್ಥೆ ಕೂಡ ಮಾಡಿ ಅಮೆರಿಕದಲ್ಲಿದ್ದ ಅಕ್ಷಿತ್​ಗೆ ಈ ಬಗ್ಗೆ ಕೂಡ ತಿಳಿಸಿದ್ದರು. ಇದಕ್ಕೆ ಓಕೆ ಎಂದು ಹೇಳಿದ್ದನು. ಆದರೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಅಕ್ಷಿತ್ ಈಜಾಡಲೆಂದು ಅಮೆರಿಕದಲ್ಲಿನ ಚಿಕಾಗೋದ ಮಿಚಿಗನ್ ಸರೋವರಕ್ಕೆ ಹೋಗಿದ್ದಾರೆ. ಈ ವೇಳೆ ಸರೋವರದ ಮಧ್ಯೆದಲ್ಲಿರುವ ಕಲ್ಲುಬಂಡೆಗೆ ಹೋಗೋಣ ಎಂದು ಮೂವರು ಈಜಲು ಪ್ರಾರಂಭಿಸಿದ್ದಾರೆ.

Advertisment

ಇದನ್ನೂ ಓದಿ: ಮೆಟ್ಟೂರು‌ ಡ್ಯಾಂನಿಂದ ಕಾವೇರಿಗೆ ನೀರು.. ಕೃಷ್ಣೆಯಲ್ಲಿ ಕೊಚ್ಚಿ ಹೋಗ್ತಿದ್ದವನ ರಕ್ಷಣೆ; ತುಂಗಭದ್ರೆಯಿಂದ ಕಂಪ್ಲಿಗೆ ಕಂಟಕ..!

ಇದರಲ್ಲಿ ಒಬ್ಬನು ಮಾತ್ರ ಆ ಕಲ್ಲುಬಂಡೆ ತಲುಪಿದ್ದಾನೆ. ಅಕ್ಷಿತ್ ನೀರಿನ ಮಧ್ಯೆಕ್ಕೆ ಬರುತ್ತಿದ್ದಂತೆ ಸುಸ್ತಾಗಿ ಮತ್ತೆ ವಾಪಸ್​ ದಡಕ್ಕೆ ಹೋಗಲು ನಿರ್ಧರಿಸಿದ್ದ. ಈ ವೇಳೆ ವಾಪಸ್ ಹೋಗುವಾಗ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು ಪೊಲೀಸರು ಮೃತದೇಹ ಹೊರ ತೆಗೆದಿದ್ದಾರೆ. ಇನ್ನೊಬ್ಬ ಯುವಕನನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಕ್ಷಿತ್ ಮೃತದೇಹ ಹೈದರಾಬಾದ್ ತಲುಪಿದ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೋವಿನಲ್ಲೇ ಕುಟುಂಬಸ್ಥರು ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment