/newsfirstlive-kannada/media/post_attachments/wp-content/uploads/2025/06/IRAN-8.jpg)
ಗೇಮ್ ಈಸ್ ನಾಟ್ ಓವರ್.. ಇದು ನಿನ್ನೆ ಇರಾನ್ ಕೈಗೊಂಡಿದ್ದ ರಣಪ್ರತಿಜ್ಞೆ.. ಶಕ್ತಿಶಾಲಿ ಪರಮಾಣು ನೆಲೆಗಳನ್ನು ಧ್ವಂಸ ಮಾಡಿ ಗಹಗಹಿಸಿದ್ದ ಅಮೆರಿಕಕ್ಕೆ ಸವಾಲೆಸೆದಿದ್ದ ಇರಾನ್.. ಇನ್ನೂ ಆಟ ಮುಗಿದಿಲ್ಲ, ಯಾರನ್ನೂ ಬಿಡುವ ಮಾತೇ ಇಲ್ಲ ಅಂತ ಶಪಥಗೈದಿತ್ತು.. ಇವತ್ತು ಕೆಣಕಿದ ದೊಡ್ಡಣ್ಣನ ಮೇಲೆ ದಾಳಿ ಮಾಡುವ ಮೂಲಕ ಇರಾನ್ ನನಗ್ಯಾರ ಭಯವಿಲ್ಲ ಅಂತ ಎದೆಯೊಡ್ಡಿದೆ. ಬೆನ್ನಲ್ಲೇ ಟ್ರಂಪ್, ಇರಾನ್ ಮತ್ತು ಇಸ್ರೇಲ್ ಕದನ ವಿರಾಮ ಘೋಷಿಸಿವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್ ಹೇಳಿಕೆಯನ್ನು ಇರಾನ್ ತಿರಸ್ಕರಿಸಿದೆ.
ಅಮೆರಿಕ ಏಟಿಗೆ ಇರಾನ್ ಎದುರೇಟು.. ಅಮೆರಿಕ ವಾಯುನೆಲೆಗಳ ಮೇಲೆ ತೂಫಾನ್ಗಳಂತೆ ತೂರಿಬಂದ ಮಿಸೈಲ್ಗಳು.. ರಾತ್ರಿ ಆಕಾಶದಲ್ಲಿ ಬಾಂಬ್ಗಳ ಸುರಿಮಳೆ.. ಹೆದರಿ ಕಕ್ಕಾಬಿಕ್ಕಿಯಾಗಿ ಓಡಿದ ನಾಗರಿಕರು.
ದಾಳಿಗೆ ಪ್ರತೀಕಾರ.. ಅಮೆರಿಕ ವಿರುದ್ಧ ಇರಾನ್ ಅಟ್ಯಾಕ್
ಪ್ರತೀಕಾರ ತೀರಿಸಿಕೊಳ್ಳುವ ಶಪಥ ಮಾಡಿದಂತೆ ಅಮೆರಿಕ ವಿರುದ್ಧ ಇರಾನ್ ಯುದ್ಧ ಆರಂಭಿಸಿದೆ.. ಆಪರೇಷನ್ ಬಷಯೇರ್ ಅಲ್ ಫತಾಹ್ ಅಂದ್ರೆ ಟೈಡಿಂಗ್ ಆಫ್ ವಿಕ್ಟರಿ ಅನ್ನೋ ಹೆಸರಲ್ಲಿ ಇರಾನ್ ದಾಳಿ ನಡೆಸಿದೆ. ಕತಾರ್ ಕ್ಯಾಪಿಟಲ್ ದೋಹಾದಲ್ಲಿರುವ ಅಲ್ ಉದೈದ್ ಏರ್ಬೇಸ್ ಟಾರ್ಗೆಟ್ ಮಾಡಿದೆ. ಸೇನಾ ನೆಲೆಗಳ ಮೇಲೆ ಇರಾನ್ 6 ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದೆ. ಈ ಭೀಕರ ದಾಳಿ ನಡೆಸಿದ ಬೆನ್ನಲ್ಲೆ, ವಿಜಯದ ಘೋಷಣೆ ಅಂತ ಇರಾನ್ ಟಿವಿ ಪ್ರಕಟಿಸಿದೆ.
ಇದನ್ನೂ ಓದಿ: ಅಮೆರಿಕ ಮೇಲೂ ಪ್ರತೀಕಾರ ಆಗಿದೆ.. ಟ್ರಂಪ್ ಕದನ ವಿರಾಮ ‘ಬರೀ ಸುಳ್ಳು’ ಎಂದ ಇರಾನ್..!
ಅಮೆರಿಕಕ್ಕೆ ಕತಾರ್ನ ಅಲ್ ಉದೈದ್ ವಾಯುನೆಲೆ, ಪ್ರಾದೇಶಿಕ ವಾಯುಯಾನಕ್ಕೆ ಕೇಂದ್ರ ಬಿಂದುವಾಗಿದೆ. ಇರಾನ್ ಸೇನೆ ದಾಳಿ ಮಾಡ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇರಾನ್ ಬಾಂಬ್ ದಾಳಿಗೆ ಕತಾರ್ನಲ್ಲಿರುವ ಜನ ದಿಕ್ಕಾಪಾಲಾಗಿ ಓಡಿದ್ರು. ಮಾಲ್ವೊಂದರಲ್ಲಿ ಶಾಪಿಂಗ್ ಮೂಡ್ನಲ್ಲಿದ್ದ ಜನ ಪ್ರಾಣಭಯದಿಂದ ಪೇರಿ ಕಿತ್ತಿದ ದೃಶ್ಯ ಬೆಚ್ಚಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
Qataris FLEE luxury Doha mall as Iranian missiles fly
Latest Iranian operations targeted US bases in Iraq and Qatar https://t.co/cVjTYFzpTIpic.twitter.com/5TCrbtio5T— RT (@RT_com) June 23, 2025
ದಾಳಿ ಯಶಸ್ವಿ ಎಂದ ಇರಾನ್.. ಕ್ಷಿಪಣಿ ತಡೆದಿದ್ದಾಗಿ ಹೇಳಿದ ಕತಾರ್!
ಅಮೆರಿಕದ ಸೇನಾನೆಲೆಗಳ ಮೇಲೆ ನಮ್ಮ ಕ್ಷಿಪಣಿ ದಾಳಿಗಳು ಯಶಸ್ವಿಯಾಗಿವೆ ಎಂದ ಇರಾನ್ ಹೇಳಿಕೊಂಡಿದೆ. ಅಮೆರಿಕದ ಆಕ್ರಮಣಕ್ಕೆ ಇರಾನ್ನ ಸಶಸ್ತ್ರ ಪಡೆಗಳಿಂದ ಪ್ರಬಲ ಪ್ರತಿಕ್ರಿಯೆ ಇದಾಗಿದೆ ಅಂತ ಸಾರಿದೆ.. ಇರಾನ್ನ ಮಿಸೈಲ್ಗಳನ್ನು ನಮ್ಮ ಏರ್ ಡಿಫೆನ್ಸ್ ಹೊಡೆದುರುಳಿಸಿದ್ದಾಗಿ ಕತಾರ್ ಹೇಳ್ತಿದೆ. ದಾಳಿಯಲ್ಲಿ ಯಾವುದೇ ಜೀವಹಾನಿ ಆಗಿಲ್ಲ ಅಂತ ತಿಳಿಸಿದೆ. ನಮ್ಮ ಮುಂದಿನ ನಿರ್ಧಾರವನ್ನು ಶೀಘ್ರದಲ್ಲೇ ಕಾಲ ತೀರ್ಮಾನಿಸಲಿದೆ ಅಂತ ಈ ಆಕ್ರಮಣಕ್ಕೆ ಕೆರಳಿದ ಕತಾರ್ ಹೇಳಿದೆ.
ವಾಯು ಪ್ರದೇಶ ಮುಚ್ಚಿದ ಮಧ್ಯಪ್ರಾಚ್ಯದ ಹಲವು ದೇಶಗಳು!
ಮತ್ತೊಂದೆಡೆ ಬಹರೇನ್ನ ಅಮೆರಿಕ ಮಿಲಿಟರಿ ಕ್ಯಾಂಪ್ಗಳಲ್ಲಿ ಸೈರನ್ ಸೌಂಡ್ ಕೇಳಿದೆ. ಸಿಡಿದು ಬರ್ತಿದ್ದ ಮಿಸೈಲ್ಗಳು ಬಹರೇನ್ ಅಂಬರದಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಸಿರಿಯಾದಲ್ಲಿರುವ ಅಮೆರಿಕ ಆರ್ಮಿ ಬೇಸ್ ಸಹ ಹೈಅಲರ್ಟ್ ಆಗಿತ್ತು.. ಕತಾರ್ ಮೇಲೆ ದಾಳಿ ನಡೆದ ಬೆನ್ನಲ್ಲೆ ಕತಾರ್ ಮಾತ್ರವಲ್ಲೇ ಬೆಹರಾನ್, ಕುವೈತ್ ವಾಯು ಪ್ರದೇಶ ಸಂಪೂರ್ಣ ಮುಚ್ಚಿವೆ. ಕತಾರ್ನತ್ತ ಬರುತ್ತಿದ್ದ ವಿಮಾನಗಳ ಮಾರ್ಗ ಬದಲಾವಣೆ ಮಾಡ್ಕೊಂಡ್ರೆ, ದೋಹಾ ಇಂಟರ್ನ್ಯಾಷನಲ್ ಏರ್ಪೋರ್ಟ್ ಹಾರಾಟವನ್ನೇ ಸ್ಥಗಿತಗೊಳಿಸಿದೆ. ಇಸ್ರೇಲ್-ಇರಾನ್ ನಡುವೆ ನಡೆಯುತ್ತಿದ್ದ ಯುದ್ಧ ಇದೀಗ ಇರಾನ್-ಅಮೆರಿಕ ನಡುವೆ ಹೊತ್ತಿದೆ. ಅಮೆರಿಕ ಕೂಡ ಸುಮ್ನೆ ಕೂರುವ ಜಾಯಮಾನದ್ದಲ್ಲ, ಯಾವುದೇ ಕ್ಷಣದಲ್ಲೂ ಇರಾನ್ ಮೇಲೆ ಎರಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಮೆರಿಕ ಮೇಲೂ ಪ್ರತೀಕಾರ ಆಗಿದೆ.. ಟ್ರಂಪ್ ಕದನ ವಿರಾಮ ‘ಬರೀ ಸುಳ್ಳು’ ಎಂದ ಇರಾನ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ