/newsfirstlive-kannada/media/post_attachments/wp-content/uploads/2024/10/Alak-pandey-Teacher.jpeg)
ಭಾರತದಲ್ಲಿ ಯಾವೆಲ್ಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೋ ಅವರೆಲ್ಲರಿಗೂ ಅಲಕ್ ಪಾಂಡೆ ಎಂಬ ಶಿಕ್ಷಕನ ಹೆಸರು ಚಿರಪರಿಚಿತ. ಈ ವ್ಯಕ್ತಿ ದೇಶದ ಎಲ್ಲ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೂ ಒಂದು ಲೆಕ್ಕದಲ್ಲಿ ಸ್ಫೂರ್ತಿಯ ಸೆಲೆ. ಇವರನ್ನು ಭಾರತದಲ್ಲಿಯೇ ಅತ್ಯಂತ ಶ್ರೀಮಂತ ಶಿಕ್ಷಕ ಎಂದು ಗುರುತಿಸಲಾಗುತ್ತದೆ. ಆದ್ರೆ ನೆನಪಿರಲಿ ಇವರು ಜಿಇಇ ಹಾಗೂ ಐಐಟಿ ಫೇಲ್ ಆದವರು. ಆದರೂ ಈಗ ಜೆಇಇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಇವರು ಶುರು ಮಾಡಿರುವ ತರಬೇತಿ ಕೇಂದ್ರದ ಹೆಸರು ಪಿಸಿಕ್ಸ್ ವಲ್ಹಾ ಎಂದು. ಅಲಕ್ ಪಾಂಡೆ ಈ ಒಂದು ಸಂಸ್ಥೆಯನ್ನು ಏಕಾಂಗಿಯಾಗಿ ಕಟ್ಟಿದ್ದರು. ಸದ್ಯ ಅವರ ಸಂಸ್ಥೆ ಈಗ ಸಾವಿರಾರು ಕೋಟಿ ರೂಪಾಯಿ ತಂದುಕೊಡುತ್ತಿದೆ. ಅಲಕ್ ಪಾಂಡೆಯವರು ಈ ಒಂದು ತರಬೇತಿ ಕೇಂದ್ರದಿಂದ ಗಳಿಸಿದ ಒಟ್ಟು ಆಸ್ತಿ 4500 ಕೋಟಿ ರೂಪಾಯಿ.
1991ರಲ್ಲಿ ಉತ್ತರಪ್ರದೇಶದ ಅಲಹಾಬಾದ್ನಲ್ಲಿ ಹುಟ್ಟಿದ ಅಲಕ್ ಪಾಂಡೆ, ಜೀವನ ಕಳೆದಿದ್ದು ಅತ್ಯಂತ ಮಧ್ಯಮ ವರ್ಗದ ಕುಟುಂಬದಲ್ಲಿ. ಅವರ ತಂದೆ ಖಾಸಗಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್ಥಿಕ ಪರಿಸ್ಥಿತಿ ಅವರನ್ನು ಹೇಗೆ ತಿಂದು ಹಾಕಿತ್ತು ಎಂದರೆ. ಅದರಿಂದ ಪಾರಾಗಲು ಅವರು ಸ್ವಂತ ಮನೆಯನ್ನೇ ಮಾರಿ, ಬಾಡಿಗೆ ಮನೆಗೆ ಬರಬೇಕಾಯ್ತು.
ಇದನ್ನೂ ಓದಿ: ಪಾನ್ ಮಸಾಲಾ ಜಾಹೀರಾತನ್ನು ತಿರಸ್ಕರಿಸಿದ ಖ್ಯಾತ ನಟ! 10 ಕೋಟಿ ರೂಪಾಯಿ ಆಫರ್ ಕೊಟ್ರು ಬೇಡ ಎಂದ್ರು!
ಅಲೋಕ್ ಪಾಂಡೆ 6ನೇ ತರಗತಿಯಲ್ಲಿದ್ದಾಗ ತನಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುವ ಮೂಲಕ ಅವರ ಶಿಕ್ಷಕನ ವೃತ್ತಿ ಆರಂಭವಾಯತು. ಈ ವೇಳೆ ತಮ್ಮ ಊರಿನಿಂದ ಐದು ಕಿಲೋ ಮೀಟರ್ ನಡೆದುಕೊಂಡು ಹೋಗಿ ತನ್ನ ಜೂನಿಯರ್ಗಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು ಕಟ್ಟಡ ದುರಂತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ.. ಅವಶೇಷಗಳ ಅಡಿ ಇನ್ನೂ ಆರ್ತನಾದ!
ತಮ್ಮ ಶಾಲಾ ದಿನಗಳು ಮುಗಿದ ಬಳಿಕ ಅಲಕ್ ಐಐಟಿ ಹಾಗೂ ಜೆಇಇ ಪರೀಕ್ಷೆಯನ್ನು ಎದುರಿಸಿ ವಿಫಲರಾಗಿದ್ದರು ಅಲೋಕ್, ನಂತರ ಯುಪಿಎಸ್ಸಿಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹ್ಯಾರ್ಕೋರ್ಟ್ ಬಟ್ಲರ್ ಟೆಕ್ನಿಕಲ್ ಇನ್ಸ್ಟ್ಯೂಟ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಲಿಯಲು ಆರಂಭಿಸಿದರು. ಆದ್ರೆ ಕೊನೆಗೆ ಅದನ್ನೂ ಕೂಡ ಅರ್ಧಕ್ಕೆ ನಿಲ್ಲಿಸಿ ತಮ್ಮ ಪ್ರಯಾಣವನ್ನು ಯೂಟ್ಯೂಬ್ ಚಾನೆಲ್ನತ್ತ ಹೊರಳಿಸಿದರು.
2014ರಲ್ಲಿ ತಮ್ಮದೇ ಒಂದು ಪಿಜಿಕ್ಸ್ ವಲ್ಹಾ ಎಂಬ ಚಾನೆಲ್ ಶುರು ಮಾಡಿದ ಅಲಕ್ ಪಾಂಡೆ, ಅವರ ಕಲಿಕಾ ಶೈಲಿಯಿಂದಲೇ ಫೇಮಸ್ ಆದರು. ಅವರ ವಿಡಿಯೋಗಳು ಎಲ್ಲೆಡೆ ಹರಿದಾಡಲು ಶುರುವಾದವು. ಇಲ್ಲಿಂದ ಅಲಕ್ ಪಾಂಡೆ ಅವರ ಲಕ್ ಸಂಪೂರ್ಣವಾಗಿ ಬದಲಾಯ್ತು. ಮುಂದೆ ಇದು ವೆಬ್ಸೈಟ್ ರೂಪವನ್ನು ಪಡೆದುಕೊಂಡಿತು. ಅನೇಕ ಕಡೆ ಪಿಜಿಕ್ಸ್ ವಲ್ಹಾ ಕೋಚಿಂಗ್ ಸೆಂಟರ್ಗಳನ್ನು ಶುರು ಮಾಡಿತು.ಸದ್ಯ ಅಲಕ್ ಪಾಂಡೆ ಅವರ ಆಸ್ತಿ 4100 ಕೋಟಿ ರೂಪಾಯಿ ತಲುಪುತ್ತದೆ. ಇವರು ಭಾರತದ ಅತ್ಯಂತ ಕಿರಿಯ ಬಿಲಿಯೇನಿಯರ್ಗಳಲ್ಲಿ ಒಬ್ಬರು ಎಂದು ಗುರುತಿಸಲಾಗುತ್ತದೆ. ಅದು ಮಾತ್ರವಲ್ಲ ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ ಎಂದು ಕೂಡ ಗುರುತಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ