/newsfirstlive-kannada/media/post_attachments/wp-content/uploads/2024/04/Iphone-16.jpg)
ಆ್ಯಪಲ್ ಐಫೋನ್ ಬಳಕೆದಾರರು ಅಲಾರಂ ಸಮಸ್ಯೆ ಎದುರಿಸುತ್ತಿದ್ದಾರೆ. ಕಂಪನಿ ಈಗಗಾಲೇ ಕ್ಲಾಕ್ ಅಪ್ಲಿಕೇಶನ್ನಿಂದಾದ ಸಮಸ್ಯೆ ಬಗ್ಗೆ ಎಲ್ಲದರಲ್ಲಿ ಬರೆದು ಹಾಕುತ್ತಿದ್ದಾರೆ. ಹೀಗಾಗಿ ಕಂಪನಿಗೂ ಈ ವಿಚಾರ ತಿಳಿದಿದ್ದು, ಸದ್ಯ ಈ ಬಗ್ಗೆ ಆ್ಯಪಲ್ ಸರಿಪಡಿಸುವ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ.
ಐಫೋನ್ನಲ್ಲಿ ಬಗ್ವೊಂದು ಕಾಣಿಸಿದೆ. ಇದು ಕ್ಲಾಕ್ ಅಪ್ಲಿಕೇಶನ್ನ ಅಲಾರಂ ಮೇಲೆ ನೇರ ಪರಿಣಾಮ ಬಿದ್ದಿದೆ. ಇದರಿಂದ ಐಫೋನ್ ಬಳಕೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ.
ರೆಡ್ಡಿಟ್ನಲ್ಲಿ ಐಫೋನ್ ಅಲಾರಂ ಬಗ್ಗೆ ದೂರುಗಳ ಮತ್ತು ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿವೆ. ಆದರೆ ಇದಕ್ಕೆ ಉತ್ತಮ ಪರಿಹಾರವೆಂದರೆ ನವೀಕರಣ ಮಾಡೋದು ಬೆಸ್ಟ್ ಎಂದು ಚರ್ಚೆ ನಡೆಯುತ್ತಿವೆ.
ಇನ್ನು ಆ್ಯಪಲ್ ಐಫೋನ್ ಅಲಾರಂ ಆ್ಯಪ್ ಆಫ್ ಆಗಲು ನಿಜವಾದ ಕಾರಣವನ್ನು ಹೇಳಿಕೊಂಡಿಲ್ಲ. ಬೆಳಗ್ಗೆ ಏಕೆ ಎಲಾರಂ ಆಗುತ್ತಿಲ್ಲ ಎಂಬ ಸಮಸ್ಯೆಯನ್ನು ಕಂಪನಿಯೇ ಪರಿಶೀಲಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ