/newsfirstlive-kannada/media/post_attachments/wp-content/uploads/2025/02/ALEXANDER-THE-GREAT-1.jpg)
ಅಲೆಕ್ಸಾಂಡರ್ ಯಾರಿಗೆ ಗೊತ್ತಿಲ್ಲ, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವದ ಬಹುತೇಕ ದೇಶಗಳಲ್ಲಿ ತನ್ನ ವಿಜಯ ಪತಾಕೆ ಹಾರಿಸಿದ ಮಹಾಪರಾಕ್ರಮಿ. ಪರ್ಷಿಯನ್​ರು ಈತನನ್ನು ಸಿಕಂದರ್ ಎಂದು ಕರೆದರೆ ಇಂಗ್ಲಿಷರು ಈತನನ್ನು ಅಲೆಕ್ಸಾಂಡರ್ ಎಂದು ಕರೆದರು. ಕ್ರಿಸ್ತಪೂರ್ವ 356ನೇ ಇಸ್ವಯಲ್ಲಿ ಈತನ ನಡೆಸಿದ ಮಹಾಸಂಗ್ರಾಮದ ಇತಿಹಾಸವನ್ನು ಇಂದಿಗೂ ಜಗತ್ತು ನೆನೆಯುತ್ತದೆ. ಈತನ ಯುದ್ಧ ಕಲೆ ಹಾಗೂ ವಿಶ್ವವನ್ನೇ ಗೆದ್ದು ಅದರ ಸಾಮ್ರಾಟನಾಗಬೇಕೆಂಬ ಮಹತ್ವಾಕಾಂಕ್ಷೆಯ ತುಡಿತಗಳು ಅನೇಕ ರಾಜರಿಗೆ ಪ್ರರಣೆಯಾಗಿವೆ. ಇತಿಹಾಸ ಕಂಡ ಮಹಾಯೋಧರಲ್ಲಿ ಅಲೆಕ್ಸಾಂಡರ್​ ಕೂಡ ಮುನ್ನೆಲೆಯಲ್ಲಿ ಬಂದು ನಿಲ್ಲುತ್ತಾನೆ. ಇಂದಿನ ಗ್ರೀಸ್​ನಿಂದ ಹಿಡಿದು ಭಾರತದ ಉತ್ತರ ಪಶ್ಚಿಮದವರೆಗೂ ಈತ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದ. ಪರ್ಷಿಯಾ ಸಾಮ್ರಾಜ್ಯದ ರಾಜ ಮೂರನೇ ಡೇರಿಯಸ್​ನನ್ನು ಸೋಲಿಸಿದ್ದ.
/newsfirstlive-kannada/media/post_attachments/wp-content/uploads/2025/02/ALEXANDER-THE-GREAT-2.jpg)
ಅಲೆಕ್ಸಾಂಡರ್​ನನ್ನು ಇಂದಿಗೂ ಇತಿಹಾಸ ಕಂಡ ಮಹಾಪರಾಕ್ರಮಿ ರಾಜ, ಯೋಧ ಎಂದು ಜಗತ್ತು ಗುರುತಿಸುತ್ತದೆ. ತನ್ನ ಪರಾಕ್ರಮದಿಂದಲೇ ಹೆಸರು ಮಾಡಿದ ಸಿಕಂದರ್​ ಇಡೀ ವಿಶ್ವಗೆಲ್ಲುವ ತವಕದೊಂದಿಗೆ ತನ್ನ ಕುದರೆಯನ್ನೇರಿ ವಿಶ್ವಪರ್ಯಟನೆ ಮಾಡಿದ್ದ. ಕೇವಲ ತನ್ನ 20ನೇ ವಯಸ್ಸಿನಲ್ಲಿಯೇ ಈತ ಗ್ರೀಕ್ ಸಾಮ್ರಾಜ್ಯವನ್ನು ಸಂಬಾಳಿಸಿದ್ದ. 32ನೇ ವಯಸ್ಸಿಗೆ ಗ್ರೀಸ್​ನಿಂದ ಭಾರತದವರೆಗೂ ತನ್ನ ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿ ಇಡೀ ಜಗತ್ತಿನಲ್ಲಿ ನನಗಿಂತ ಮತ್ತೊಬ್ಬ ಪರಾಕ್ರಮಶಾಲಿ ಎಂದು ಜಗತ್ತಿಗೆ ಸಾರಿ ಹೇಳಿದ್ದ. ಈ ಎಲ್ಲಾ ಸಾಮ್ರಾಜ್ಯಗಳನ್ನು ತನ್ನ ತೋಳ ತೆಕ್ಕೆಗೆ ತೆಗೆದುಕೊಳ್ಳಲು ಸಿಕಂದರ್​ನ ಒಂದು ಕುದುರೆ ಆತನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿತ್ತು. ಅನೇಕ ಯುದ್ಧಗಳಲ್ಲಿ ಭಾಗವಹಿಸಿ ಗೆಲುವಿನ ಪ್ರಮುಖ ರೂವಾರಿಯಾಗಿ ನಿಂತಿತ್ತು ಅದರ ಹೆಸರು ಬುಸೆಫಾಲಸ್.
ಇದನ್ನೂ ಓದಿ:ಇದು ಜಗತ್ತಿನ ಅತ್ಯಂತ ದುಬಾರಿ ಶಾಪಿಂಗ್ ಬೀದಿ.. ಲಂಡನ್​, ಪ್ಯಾರಿಸ್ ಅಲ್ಲವೇ ಅಲ್ಲ.. ಎಲ್ಲಿದೆ ಇದು?
ವಿಶ್ವ ಸಾಮ್ರಾಟ್​ ಅಲೆಕ್ಸಾಂಡರ್​ಗೆ ಆ ಕುದುರೆಯ ಮೇಲೆ ಎಷ್ಟೊಂದು ಪ್ರೀತಿಯಿತ್ತು ಎಂದರೆ. ಝೀಲಂ ನದಿಯ ತಟದಲ್ಲಿಯೇ ಬುಸೆಫಾಲಸ್​ ತಂಬ ತನ್ನ ಪ್ರೀತಿಯ ಕುದುರೆಯ ಹೆಸರಲ್ಲಿಯೇ ಒಂದು ನಗರವನ್ನು ಕೂಡ ಸ್ಥಾಪಿಸಿದ್ದ. ಒಂದು ಬಾರಿ ಒಂದು ಯುದ್ಧದಲ್ಲಿ ಅಲೆಕ್ಸಾಂಡರ್​ನ ಪ್ರೀತಿಯ ಕುದರೆಯ್ನು ವಿರೋಧಿಗಳು ಬಂಧಿಸಿಟ್ಟಿದ್ದರು. ಇದರಿಂದ ಕ್ರೋಧಿತಗೊಂಡಿದ್ದ ಅಲೆಕ್ಸಾಂಡರ್​ ತನ್ನ ಪ್ರೀತಿಯ ಬುಸೆಫಾಲಸ್​ನನ್ನು ಬಿಟ್ಟರೆ ಸರಿ ಇಲ್ಲದಿದ್ದಲ್ಲಿ ದೇಶಕ್ಕೆ ದೇಶವೇ ಇಲ್ಲದಂತೆ ನಾನು ದಾಳಿ ಮಾಡುತ್ತೇನೆ ಎಂದು ಅಬ್ಬರಿಸಿದಾಗ ಪತರಗುಟ್ಟಿದ ವಿರೋಧಿಗಳು ಕೂಡಲೇ ಆತನ ಕುದರೆಯನ್ನು ಕಪ್ಪ ಕಾಣಿಕೆಗಳ ಸಮೇತ ಹಿಂದುರುಗಿಸಿದ್ದರು.
ಇದನ್ನೂ ಓದಿ:ವಿಶ್ವದ ಬಲಿಷ್ಠ ಸೇನೆಗಳ ಟಾಪ್-10 ಪಟ್ಟಿಯಲ್ಲಿ ಭಾರತದ ಪರಾಕ್ರಮ; ಪಾಕಿಸ್ತಾನದ ಸ್ಥಿತಿ ಹೇಗಿದೆ ಗೊತ್ತಾ?
/newsfirstlive-kannada/media/post_attachments/wp-content/uploads/2025/02/ALEXANDER-THE-GREAT-3.jpg)
ಅಲೆಕ್ಸಾಂಡರ್ ಹಾಗೂ ಬುಸೆಫಾಲಸ್​ ಒಬ್ಬರಿಗೊಬ್ಬರು ಜೊತೆಗಾರರಾಗಿದ್ದರು. ಕೊನೆಗೆ ಬುಸೆಫಾಲಸ್ ಎಂಬ ಅಲೆಕ್ಸಾಂಡರ್​ನ ಅತ್ಯಂತ ಪ್ರೀತಿಯ ಕುದುರೆ ಅಸುನೀಗುತ್ತದೆ. ಈ ಒಂದು ಕುದರೆ ಅಂದಿನ ಶತಮಾನದ ಅತ್ಯಂತ ಪ್ರಸಿದ್ಧಿ ಪಡೆದ ತಳಿಯ ಕುದರೆಯಾಗಿತ್ತು ಎಂದು ಹೇಳಲಾಗುತ್ತದೆ. ಅಲೆಕ್ಸಾಂಡರ್​ನ ಅನೇಕ ಯುದ್ಧ ವಿಜಯಗಳಿಗೆ ಈ ಕುದರೆ ಸಾಕ್ಷಿಯಾಗಿಯಾಗಿತ್ತು ಹಾಗೂ ತನ್ನದೇ ಆದ ಮಹತ್ವಪೂರ್ಣ ಪಾತ್ರವನ್ನು ವಹಿಸಿತ್ತು ಹೀಗಾಗಿ ಅಲೆಕ್ಸಾಂಡರ್ ತನ್ನ ಈ ನೆಚ್ಚಿನ ಕುದರೆಯ ಹೆಸರು ಎಂದಿಗೂ ಅಜರಾಮರವಾಗಿರಬೇಕು ಎಂದು ಹೇಳಿ ಝೀಲಂ ನದಿಯ ತಟದಲ್ಲಿ ಬುಸೆಫಾಲಸ್ ಎಂಬ ನಗರವನ್ನು ನಿರ್ಮಾಣ ಮಾಡಿದ. ಆದರೆ ಕಾಲಾನಂತರ ಆ ನಗರದ ಹೆಸರು ಹಲವು ರೀತಿಯಲ್ಲಿ ಕರೆಯಲ್ಪಟ್ಟಿತ್ತು. 1932ರಲ್ಲಿ ಪುರಾತತ್ವಶಾಸ್ತ್ರಜ್ಞ ಔರೇಲ್ ಸ್ಟೇಲಿನ್ ಹೇಳುವ ಪ್ರಕಾರ ಇಂದಿನ ಝೀಲಂ ನದಿಯ ಪಕ್ಕದಲ್ಲಿರುವ ಆಧುನಿಕ ನಗರಿ ಜಾಲಾಪುರ ಶರೀಫ್​ ನಗರವೇ ಅಂದಿನ ಬುಸೆಫಾಲಸ್ ನಗರ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us