‘ನಾವು ಅಂದು ಸೆಕ್ಸ್​ ಮಾಡಲಿಲ್ಲ’- ಫಸ್ಟ್​​ ನೈಟ್​ ಆ ಅನುಭವದ ಬಗ್ಗೆ ಬಿಚ್ಚಿಟ್ಟ ನಟಿ ಆಲಿಯಾ!

author-image
Ganesh Nachikethu
Updated On
ಅಲಿಯಾ ಭಟ್​ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್
Advertisment
  • ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಮದುವೆ ಆಗಿ ಒಂದು ವರ್ಷ
  • ಇತ್ತೀಚೆಗೆ ಕರಣ್​ ಜೋಹರ್​ ಶೋನಲ್ಲಿ ಭಾಗಿಯಾಗಿದ್ದ ಆಲಿಯಾ ಭಟ್​​!
  • ಕರಣ್​​ ಜೋಹರ್​​ ಆಲಿಯಾಗೆ ಮದುವೆ ಬಗ್ಗೆ ಕೆಲವು ಪ್ರಶ್ನೆಗಳು ಕೇಳಿದ್ರು

ಬಾಲಿವುಡ್​ ನಟಿ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಮದುವೆಯಾಗಿ ವರ್ಷ ಕಳೆದಿದೆ. ದಂಪತಿಗೆ ಮುದ್ದಾದ ಮಗಳು ಇದ್ದಾಳೆ. ಮದುವೆ ಆದ್ಮೇಲೂ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿರೋ ಆಲಿಯಾ ಭಟ್​ ಇತ್ತೀಚೆಗೆ ಕರಣ್ ಜೋಹರ್ ಶೋನಲ್ಲಿ ಭಾಗಿಯಾಗಿದ್ದರು. ಶೋನಲ್ಲಿ ಮಾತಾಡುವಾಗ ತನ್ನ ಫಸ್ಟ್​ ನೈಟ್​ನಲ್ಲಿ ಏನೆಲ್ಲಾ ನಡೆಯಿತು? ಅನ್ನೋದರ ಬಗ್ಗೆ ಆಲಿಯಾ ಭಟ್​ ಬಿಚ್ಚಿಟ್ಟಿದ್ದಾರೆ.

ಕರಣ್​​ ಜೋಹರ್​​ ಆಲಿಯಾಗೆ ತನ್ನ ಮದುವೆ ಮತ್ತು ಸಂಬಂಧದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ರು. ಇದಕ್ಕೆ ಉತ್ತರ ನೀಡಿದ ಆಲಿಯಾ, ​ಮೊದಲರಾತ್ರಿ ಎಲ್ಲರೂ ಅಂದುಕೊಂಡಂತೆ ಆಗಲ್ಲ. ಇಡೀ ದಿನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಕಾರಣ ರೆಸ್ಟ್​ ಇರಲಿಲ್ಲ. ಫುಲ್​ ಸುಸ್ತಾಗಿತ್ತು. ಹಾಗಾಗಿ ಏನು ನಡೆದಿಲ್ಲ ಎಂದರು. ಆಲಿಯಾ ಮಾತಿಗೆ ಕರಣ್ ಜೋಹರ್ ಜೋರಾಗಿ ನಕ್ಕರು.

publive-image

ಆಲಿಯಾ ಭಟ್​ ಹೇಳಿದ್ದೇನು?

ನಾನು ರಣ್​ಬೀರ್​ ಕಪೂರ್​ ಅವರನ್ನು ಪ್ರೀತಿಸಿ ಮದುವೆಯಾದೆ. ಮೊದಲ ರಾತ್ರಿಗಾಗಿ ಹೋಟೆಲ್​ ಕೂಡ ಬುಕ್​ ಮಾಡಿದ್ದೆವು. ಬೆಡ್​ ರೂಮನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಇಬ್ಬರು ಇಷ್ಟವಾದ ಸಿನಿಮಾ ನೋಡಿದೆವು. ಮದುವೆಗೆ ಬಂದ ಅತಿಥಿಗಳ ಬಗ್ಗೆ ಮಾತನಾಡುತ್ತಾ ಹರಟೆ ಹೊಡೆದವು. ಬಹಳ ಸುಸ್ತಾಗಿದ್ದ ಕಾರಣ ಅಂದಿನ ರಾತ್ರಿ ಸೆಕ್ಸ್ ಮಾಡಲಿಲ್ಲ ಎಂದಿದ್ದಾರೆ ಆಲಿಯಾ. ಆಲಿಯಾ ಆಡಿದ ಮಾತುಗಳ ಬಗ್ಗೆ ಈಗ ಭಾರೀ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:ಮದುವೆಗೂ ಮೊದಲು ಲವ್ ಬರ್ಡ್ಸ್​ ಯಾಕೆ ಟ್ರಿಪ್ ಹೋಗಬೇಕು.. ನೀವು ತಿಳಿದುಕೊಳ್ಳಲೇಬೇಕಾದ ವಿಚಾರ ಇದು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment