ಅಲಿಯಾ ಭಟ್​ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್

author-image
Ganesh
Updated On
ಅಲಿಯಾ ಭಟ್​ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್
Advertisment
  • ಅಲಿಯಾ ಭಟ್​ಗೆ ವಂಚಿಸಿದ ವೇದಿಕಾ ಶೆಟ್ಟಿ ಯಾರು?
  • ಅಲಿಯಾಗೆ ವೇದಿಕಾ ಶೆಟ್ಟಿ ವಂಚಿಸಿದ್ದು ಹೇಗೆ ಗೊತ್ತಾ?
  • ಅಲಿಯಾಗೆ ವಂಚಿಸಿದ್ದು ಹತ್ತು, ಇಪ್ಪತ್ತು ಲಕ್ಷ ಅಲ್ಲವೇ ಅಲ್ಲ

ಬಾಲಿವುಡ್ ನಟಿ ಅಲಿಯಾ ಭಟ್‌ರ (Alia Bhatt) ಮಾಜಿ ಪರ್ಸನಲ್ ಅಸಿಸ್ಟೆಂಟ್ ವೇದಿಕಾ ಪ್ರಕಾಶ್ ಶೆಟ್ಟಿಯನ್ನು (Vedika Prakash Shetty) ಮುಂಬೈನ ಜೂಹೂ ಪೊಲೀಸರು ಬಂಧಿಸಿದ್ದಾರೆ. ಅಲಿಯಾ ಭಟ್ ಪ್ರೊಡಕ್ಷನ್ ಹೌಸ್ ಎಟರ್ನಾಲ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್​ಗೆ ( Eternal Sunshine Productions Pvt Ltd) ಹಾಗೂ ಅಲಿಯಾ ಭಟ್ ವೈಯಕ್ತಿಕ ಬ್ಯಾಂಕ್ ಖಾತೆಯಿಂದ 77 ಲಕ್ಷ ರೂಪಾಯಿ ಹಣ ಲಪಟಾಯಿಸಿ ವೇದಿಕಾ ಪ್ರಕಾಶ್ ಶೆಟ್ಟಿ ನಾಪತ್ತೆ ಆಗಿದ್ದರು.

ಬೆಂಗಳೂರಲ್ಲಿ ಅರೆಸ್ಟ್

ಫೇಕ್ ಬಿಲ್, ನಕಲಿ ಸಹಿ ಹಾಕಿ 2 ಬ್ಯಾಂಕ್ ಖಾತೆಗಳಿಂದ ವೇದಿಕಾ ಶೆಟ್ಟಿ ಹಣ ಲಪಟಾಯಿಸಿದ್ದರು. ಈ ಬಗ್ಗೆ ಅಲಿಯಾ ಭಟ್ ತಾಯಿ ಸೋನಿ ರಾಜಧಾನ್ ರಿಂದ ಮುಂಬೈನ ಜೂಹೂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೂರು ವರ್ಷಗಳ ಕಾಲ ಅಲಿಯಾ ಭಟ್​ಗೆ ಪರ್ಸನಲ್ ಅಸಿಸ್ಟೆಂಟ್ ಆಗಿದ್ದ ವೇದಿಕಾ ಶೆಟ್ಟಿ ಬರೋಬ್ಬರಿ 77 ಲಕ್ಷ ರೂಪಾಯಿ ಹಣ ವಂಚಿಸಿದ್ದರು.
ಈ ವರ್ಷದ ಜನವರಿ 23 ರಂದು ಸೋನಿ ರಾಜಧಾನ್ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ 5 ತಿಂಗಳ ಬಳಿಕ ವೇದಿಕಾ ಶೆಟ್ಟಿ ಬಂಧನವಾಗಿದೆ. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ವೇದಿಕಾ ಶೆಟ್ಟಿಯನ್ನು ಮುಂಬೈನ ಜೂಹೂ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೋರ್ಟ್ ಗೆ ಹಾಜರುಪಡಿಸಿ, ಟ್ರಾನ್ಸಿಟ್ ರಿಮ್ಯಾಂಡ್ ಪಡೆದು ಮುಂಬೈಗೆ ಕರೆದೊಯ್ದಿದ್ದಾರೆ. ಬಳಿಕ ಮುಂಬೈನ ಕೋರ್ಟ್​ಗೆ ಹಾಜರುಪಡಿಸಿರುವ ಪೊಲೀಸರು ವೇದಿಕಾ ಶೆಟ್ಟಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮಾದರಿ ಕೇಸ್​ಗೆ ಟ್ವಿಸ್ಟ್​.. ಅಂತೂ, ಇಂತೂ ಪ್ರಕರಣದ A-1 ಅರೆಸ್ಟ್..!

publive-image

ಏನು ಕೆಲಸ ಮಾಡುತ್ತಿದ್ದರು..?

ಅಲಿಯಾ ಭಟ್‌ರ ವೈಯಕ್ತಿಕ ಮತ್ತು ಬ್ಯುಸಿನೆಸ್ ವ್ಯವಹಾರಗಳನ್ನು ವೇದಿಕಾ ಶೆಟ್ಟಿ ನೋಡಿಕೊಳ್ಳುತ್ತಿದ್ದರು. ಅಲಿಯಾ ಭಟ್‌ರ ಪ್ರೊಡಕ್ಷನ್ ಹೌಸ್​ನ ಕೆಲಸ ಕಾರ್ಯಗಳನ್ನು ವೇದಿಕಾ ಶೆಟ್ಟಿ ನೋಡಿಕೊಳ್ಳುತ್ತಿದ್ದರು. 2022ರ ಮೇ ನಿಂದ 2024ರ ಆಗಸ್ಟ್ ತಿಂಗಳ ಮಧ್ಯೆ ಅಲಿಯಾ ಭಟ್​ಗೆ ವಂಚನೆ ಎಸಗಿದ್ದಾರೆ. ಕ್ರಿಮಿನಲ್ ನಂಬಿಕೆ ದ್ರೋಹ, ವಂಚನೆ ಆರೋಪದಡಿ ವೇದಿಕಾ ಶೆಟ್ಟಿ ವಿರುದ್ಧ ಕೇಸ್ ದಾಖಲಾಗಿದೆ. 2021ರ ರಿಂದ 2024 ರವರೆಗೆ ಅಲಿಯಾ ಭಟ್​ಗೆ ಪರ್ಸನಲ್ ಅಸಿಸ್ಟೆಂಟ್ ಆಗಿದ್ದ ವೇದಿಕಾ ಶೆಟ್ಟಿ, ಅಲಿಯಾ ಭಟ್​ರ ವೈಯಕ್ತಿಕ ಹಣಕಾಸು ದಾಖಲೆ, ಪೇಮೇಂಟ್, ಶೆಡ್ಯೂಲ್ ನಿರ್ವಹಣೆ ಮಾಡುತ್ತಿದ್ದರು.

ಪೊಲೀಸ್ ಕಸ್ಟಡಿಯಲ್ಲಿ ಆರೋಪಿ

ಈ ವೇಳೆ ಫೇಕ್ ಬಿಲ್ ಸೃಷ್ಟಿಸಿ, ಅಲಿಯಾ ಭಟ್ ಅವರ ಸಹಿ ಪಡೆದು ಹಣವನ್ನು ವೇದಿಕಾ ಶೆಟ್ಟಿ ಲಪಟಾಯಿಸಿದ್ದಾರೆ. ನಟಿ ಅಲಿಯಾ ಭಟ್ ಅವರ ಟ್ರಾವೆಲ್, ಮೀಟಿಂಗ್, ಇತರೆ ವ್ಯವಸ್ಥೆಗಳಿಗಾಗಿ ಹಣ ಖರ್ಚಾಗಿರುವ ಬಿಲ್ ತಯಾರು ಮಾಡಿ ಸಹಿಯನ್ನು ವೇದಿಕಾ ಶೆಟ್ಟಿ ಪಡೆದಿದ್ದರು. ಫೇಕ್ ಬಿಲ್​ಗಳನ್ನು ಅಸಲಿ ಬಿಲ್​ಗಳೆಂಬಂತೆ ಬಿಂಬಿಸಿ ವೇದಿಕಾ ಶೆಟ್ಟಿ, ನಟಿ ಅಲಿಯಾ ಭಟ್ ಅವರಿಂದ ಚೆಕ್​ಗಳಿಗೆ ಸಹಿ ಪಡೆದಿದ್ದರು. ಹಣವನ್ನು ತನ್ನ ಸ್ನೇಹಿತರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದ ವೇದಿಕಾ ಶೆಟ್ಟಿ, ಬಳಿಕ ಸ್ನೇಹಿತರ ಬ್ಯಾಂಕ್ ಖಾತೆಯಿಂದ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಅಲಿಯಾ ಭಟ್ ತಾಯಿ ದೂರು ದಾಖಲಿಸಿದ ಬಳಿಕ ಮುಂಬೈನಿಂದ ನಾಪತ್ತೆಯಾಗಿದ್ದರು. ಬಿಎನ್‌ಎಸ್ ಸೆಕ್ಷನ್ 316(4) ಹಾಗೂ 318(4) ರಡಿ ವೇದಿಕಾ ಶೆಟ್ಟಿ ವಿರುದ್ಧ ಕೇಸ್ ದಾಖಲಾಗಿದೆ. ಜುಲೈ 10 ರವರೆಗೆ ವೇದಿಕಾ ಶೆಟ್ಟಿಯನ್ನು ಜೂಹೂ ಪೊಲೀಸರು ತಮ್ಮ ಕಸ್ಟಡಿಗೆ ಪಡೆದು ತನಿಖೆ, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗಿಲ್ ಬಲು ದುಬಾರಿ.. ಬ್ರಾಂಡ್ ವ್ಯಾಲ್ಯೂ ದುಪ್ಪಟ್ಟು ಏರಿಕೆ.. ಕೊಹ್ಲಿಯನ್ನೂ ಮೀರಿಸಿ ಬಿಟ್ರಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment