/newsfirstlive-kannada/media/post_attachments/wp-content/uploads/2025/04/Aliens.jpg)
ಅಮೆರಿಕ ಕೇಂದ್ರ ಗುಪ್ತಚರ ಸಂಸ್ಥೆ (CIA) ಆಘಾತಕಾರಿ ದಾಖಲೆ ಒಂದನ್ನು ರಿವೀಲ್ ಮಾಡಿದೆ. ಯುಎಫ್ಓ (Unidentified flying object) ದಿಂದ ಬಂದ ಐವರ ತಂಡವೊಂದು ಇಡೀ ಮಿಲಿಟರಿ ಪಡೆಯನ್ನೇ ಕಲ್ಲಾಗಿ ಪರಿವರ್ತಿಸಿದ ಹತ್ಯಾಕಾಂಡದ ಬಗ್ಗೆ ಉಲ್ಲೇಖಿಸಿದೆ.
ಶೀತಲ ಸಮರದ ನೆರಳಿನಲ್ಲಿ ಹೂತು ಹೋಗಿದ್ದ ಹಳೆಯ ರಹಸ್ಯವೊಂದು ಇದೀಗ ಪುನರುಜ್ಜೀವನಗೊಂಡಿದೆ. ಇದು ಸೋವಿಯತ್ ಸೈನ್ಯದ ಮೇಲೆ UFO ದಾಳಿಯ ಬಗ್ಗೆ ಮಾತನಾಡುತ್ತಿದೆ. ಕೇವಲ ಒಂದು ಪುಟದ ಸಂಚಲನಕಾರಿ ದಾಖಲೆಯು ಸೋವಿಯತ್ ಸೈನಿಕರೊಂದಿಗೆ ಸಂಭವಿಸಿದ ಭಯಾನಕ ಘಟನೆಯನ್ನು ವಿವರಿಸುತ್ತಿದೆ. 1989 ಅಥವಾ 1990ರಲ್ಲಿ ಸೋವಿಯತ್ ಸೈನಿಕರು UFO ಸಂಪರ್ಕಕ್ಕೆ ಬಂದ ಬೆನ್ನಲ್ಲೇ ಕಲ್ಲಿನ ಪ್ರತಿಮೆಗಳಾಗಿ ಪರಿವರ್ತಿಸಲ್ಪಟ್ಟರು ಎಂದು ಹೇಳುತ್ತಿದೆ. ಬೆನ್ನಲ್ಲೇ ಪ್ರಪಂಚದಲ್ಲಿ ಏಲಿಯನ್ಗಳ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಏನಾದ್ರೂ ಆಗ್ಲಿ.. ಜೀವನೋತ್ಸಾಹ ಹೀಗೆ ಇರಲಿ; ಈ ಜೋಡಿ ಖುಷಿಯ ವಿಡಿಯೋ ಒಮ್ಮೆ ನೋಡಿ!
ಸೋರಿಕೆಯಾದ ವರದಿಯಲ್ಲಿ ಏನಿದೆ..?
ಕೆಜಿಬಿ (Komitet Gosudarstvennoy Bezopasnosti) ಸೋವಿಯತ್ ಮಿಲಿಟರಿ ಪಡೆಗಳು ತಟ್ಟೆ ಆಕಾರದ ಬಾಹ್ಯಾಕಾಶ ನೌಕೆಯನ್ನು ಗಮನಿಸಿದವು. ಆಗ ಓರ್ವ ಸೈನಿಕ ಅದರತ್ತ ಕ್ಷಿಪಣಿ ಹಾರಿಸಿದ. ಅದರಿಂದ ಅದು ಕಳಕ್ಕೆ ಪತನಗೊಂಡಿದೆ. ಈ ಅಪಘಾತದ ನಂತರ, ‘ದೊಡ್ಡ ತಲೆಗಳು ಮತ್ತು ಕಪ್ಪು ಕಣ್ಣುಗಳನ್ನು ಹೊಂದಿರುವ ಐದು ಪುಟ್ಟ ಮನುಷ್ಯರು’ ಹೊರ ಬಂದರು. ನಂತರ ಅವರೆಲ್ಲರೂ ಒಂದೇ ವೃತ್ತಾಕಾರದ ಗೋಳದಲ್ಲಿ ವಿಲೀನಗೊಂಡರು.
ಮುಂದೆ ಏನಾಯ್ತು..?
ಅದು ಅತ್ಯಂತ ಪ್ರಕಾಶಮಾನ ಬೆಳಕಿನಿಂದ ಝೇಂಕರಿಸಿತು. ಸಿಳ್ಳೆ ಹೊಡೆಯಲು ಪ್ರಾರಂಭಿಸಿತು. ಆ ಕ್ಷಣವನ್ನು ಕಂಡ 23 ಸೈನಿಕರು ಕಲ್ಲಾದರು. ಇದರ ನೇರ ಬೆಳಕಿಗೆ ಒಡ್ಡಿಕೊಳ್ಳದೆ ಮರೆಯಾಗಿ ನಿಂತಿದ್ದ ಇಬ್ಬರು ಸೈನಿಕರು ಮಾತ್ರ ಬದುಕುಳಿದರು. ಭಯಭೀತರಾದ ಸೈನಿಕರು ಮತ್ತು ಹಾನಿಗೊಳಗಾದ ಆ ನೌಕೆಯನ್ನು ಮಾಸ್ಕೋ ಬಳಿಯ ರಹಸ್ಯ ಸ್ಥಳದಲ್ಲಿ ಸಂರಕ್ಷಿಸಿ ಇಡಲಾಗಿದೆ. ಕಲ್ಲಿನ ಸೈನಿಕರ ಅವಶೇಷಗಳನ್ನು ಮಾಸ್ಕೋ ಬಳಿಯ ರಹಸ್ಯ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಲ್ಲಿ ಇಡಲಾಗಿದೆ ಎಂದು ಸಿಐಎ ವೆಬ್‌ಸೈಟ್‌ನಲ್ಲಿರುವ ದಾಖಲೆ ಹೇಳುತ್ತದೆ. ಭೂಮಿಯ ಮೇಲಿನ ಜನರಿಗೆ ಗೊತ್ತಿಲ್ಲದ ಶಕ್ತಿಯ ಮೂಲವೊಂದು ಸೈನಿಕರನ್ನು ಕಲ್ಲಾಗಿ ಪರಿವರ್ತಿಸಿದೆ ಅಂತಾ ತಜ್ಞರು ನಂಬಿದ್ದಾರೆ. ಇದೊಂದು ಅತ್ಯಂತ ಅಪಾಯಕಾರಿ ಪ್ರಕರಣ ಎನ್ನಲಾಗಿದೆ.
ಇದನ್ನೂ ಓದಿ: 1ನೇ ತರಗತಿ ಮಕ್ಕಳಿಗೆ ಅಡ್ಮಿಷನ್ ಗೊಂದಲ.. ಶಿಕ್ಷಣ ಸಚಿವರಿಂದ ಇಂದು ಗುಡ್‌ನ್ಯೂಸ್?
ರಹಸ್ಯಗಳು ಮತ್ತು ಪ್ರಶ್ನೆಗಳು..
ದಾಖಲೆಯಲ್ಲಿ ಮಾಡಲಾದ ಹೇಳಿಕೆಗಳು ಆಘಾತಕಾರಿಯಾಗಿವೆ. ಮತ್ತು ಅವು ನಿಗೂಢವಾಗಿವೆ. ಹೀಗಾಗಿ ಇದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಮನುಷ್ಯರನ್ನು ಶಿಲೆಗಳನ್ನಾಗಿ ಮಾಡುವಂತಹ ಶಕ್ತಿ ನಿಜವಾಗಿಯೂ ಭೂಮಿಗೆ ಇಳಿದಿದೆಯೇ? ಇದು ಸೋವಿಯತ್ ಒಕ್ಕೂಟದ ಕೆಲ ರಹಸ್ಯ ಮಿಲಿಟರಿ ತಂತ್ರಜ್ಞಾನದ ಫಲಿತಾಂಶವೇ? ಅನ್ಯಲೋಕದ ಕಥೆ ಕಟ್ಟುಕಥೆಯೇ? ವರದಿಯಲ್ಲಿ ಅನ್ಯ ಲೋಕದ ಜೀವಿಗಳ ಬಗ್ಗೆ ಬೇರೆ ನಿರ್ದಿಷ್ಟ ವಿವರಣೆಯಿಲ್ಲ. ಬದುಕುಳಿದ ಸೈನಿಕರ ಸಾಕ್ಷ್ಯವನ್ನು ದಾಖಲೆಯಲ್ಲಿ ಸೇರಿಸಲಾಗಿಲ್ಲ. ಹಾಗಿದ್ದೂ ಈ ವಿಚಾರ ಜಗತ್ತಿನೆಲ್ಲೆಡೆ ಸಂಚಲನ ಸೃಷ್ಟಿಸಿದೆ.
ಇನ್ನು ಈ ಘಟನೆ ಶೀತಲ ಸಮರದ ಕಾಲದಲ್ಲಿ ಸಂಭವಿಸಿದೆ ಎಂದು ವರದಿಯಾಗಿದ್ದರೂ ಸೋವಿಯತ್ ಒಕ್ಕೂಟ ಪತನದ ನಂತರವೇ ಬೆಳಕಿಗೆ ಬಂದಿದೆ. ವಿಚಿತ್ರ ಎನ್ಕೌಂಟರ್ ವಿವರಿಸುವ 250 ಪುಟಗಳ ಕೆಜಿಬಿ ಫೈಲ್ ಅನ್ನು ಸಿಐಎ ಪಡೆದ ನಂತರ ಸುದ್ದಿ ಆಗುತ್ತಿದೆ. 1991ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ CIA ಈ ಕಡತವನ್ನು ಪಡೆದುಕೊಂಡಿತ್ತು. ಅದರಲ್ಲಿ ಈ ವಿಚಿತ್ರ ಘಟನೆಯ ಬಗ್ಗೆ ಉಲ್ಲೇಖ ಇದೆ.
ಇದನ್ನೂ ಓದಿ: ಅಂದು ಹಂಗೆ, ಇಂದು ಹಿಂಗೆ.. ಕೆಟ್ಟ ಮೇಲೆ ಬುದ್ಧಿ ಕಲಿತ ಸೋಶಿಯಲ್ ಮೀಡಿಯಾ ಸ್ಟಾರ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ