/newsfirstlive-kannada/media/post_attachments/wp-content/uploads/2025/07/Thailand_2.jpg)
ಥೈಲ್ಯಾಂಡ್ ದೇಶದಲ್ಲಿ ಬೌದ್ಧ ಭಿಕ್ಕುಗಳನ್ನು ಹನಿಟ್ರ್ಯಾಪ್ ಮಾಡಿ, ಬ್ಲಾಕ್ ಮೇಲ್ ಮಾಡಲಾಗಿದೆ. ಬೌದ್ಧ ಭಿಕ್ಕುಗಳ ಜೊತೆ ಲೈಂಗಿಕ ಸಂಬಂಧ ಬೆಳೆಸಿದ ಮಹಿಳೆಯೊಬ್ಬರು ಬರೋಬ್ಬರಿ 102 ಕೋಟಿ ರೂಪಾಯಿ ಹಣ ವಸೂಲಿ ಮಾಡಿದ್ದಾಳೆ. ಕಳೆದ 3 ವರ್ಷದ ಅವಧಿಯಲ್ಲಿ ಈ 102 ಕೋಟಿ ರೂಪಾಯಿಯ ಹಣ ವಸೂಲಿ ಮಾಡಿರೋದು ಥೈಲ್ಯಾಂಡ್‌ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಥೈಲ್ಯಾಂಡ್ ಪೊಲೀಸರು ಈಗ ಬೌದ್ಧ ಭಿಕ್ಕುಗಳಿಗೆ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದ ವಿಲವನ್ ಎಮಸ್ವಾತ್ ಎಂಬ 30ರ ಅಸುಪಾಸಿನ ಮಹಿಳೆಯನ್ನು ಬಂಧಿಸಿದ್ದಾರೆ. ಬೌದ್ಧ ಭಿಕ್ಕುಗಳು ಸನ್ಯಾಸಿಗಳು. ಬೌದ್ಧ ಭಿಕ್ಕುಗಳು ಬ್ರಹ್ಮಚಾರಿಗಳಾಗಿ ಇರಬೇಕು. ಆದರೇ, ಅಂಥವರೇ, ಈ ಮಹಿಳೆಯ ಬಲೆಗೆ ಬಿದ್ದು, ಬ್ಲಾಕ್ ಮೇಲ್‌ಗೆ ಒಳಗಾಗಿ 102 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಥೈಲ್ಯಾಂಡ್ ನಲ್ಲಿ ಇದು ದೊಡ್ಡ ಲೈಂಗಿಕ ಹಗರಣವಾಗಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ.
ವಿಲವನ್ ಎಮಸ್ವಾತ್ ಎಂಬ ಮಹಿಳೆಗೆ 30 ರ ಹರೆಯ. ಉತ್ತರ ಬ್ಯಾಂಕಾಂಕ್‌ನ ನಾಂಥಬೂರಿ ಬಳಿ ಈಕೆಯ ಲಕ್ಷುರಿ ಬಂಗಲೆ ಇದೆ. ಈ ಲಕ್ಷುರಿ ಬಂಗಲೆಯಿಂದ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಈಕೆಯ ವಿರುದ್ಧ ಹಣ ವಸೂಲಿ, ಆಕ್ರಮ ಹಣ ವರ್ಗಾವಣೆ ಹಾಗೂ ಕಳುವಾದ ಗೂಡ್ಸ್ಗಳನ್ನು ಪಡೆದುಕೊಂಡ ಆರೋಪ ಇದೆ. ಪೊಲೀಸರು ಈಕೆಯನ್ನು ಮಿಸ್ ಗಾಲ್ಪ್ ಅಂತಾ ಕರೆಯುತ್ತಾರೆ. ಕನಿಷ್ಠ 9 ಮಂದಿ ಬೌದ್ಧ ಭಿಕ್ಕುಗಳ ಜೊತೆ ಈಕೆ ಲೈಂಗಿಕ ಸಂಬಂಧ ಬೆಳೆಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಈಕೆಯ ಪೋನ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದ್ದಾರೆ. ಪೋನ್ನಲ್ಲಿ ಬೌದ್ಧ ಭಿಕ್ಕುಗಳು, ಬೌದ್ಧ ಧರ್ಮಗುರುಗಳ ಜೊತೆಗೆ ಸಂಬಂಧ ಇರುವ ವಿಡಿಯೋಗಳು ಪತ್ತೆಯಾಗಿವೆ. ಬ್ಲಾಕ್ ಮೇಲ್ ಮಾಡಿ ಸಂಪಾದಿಸಿದ ಹಣವನ್ನು ಆನ್ ಲೈನ್ನಲ್ಲಿ ಜೂಜು ಆಡಲು ಈ ಸುಂದರಿ ವಿಲವನ್ ಎಮಸ್ವಾತ್ ಬಳಕೆ ಮಾಡಿದ್ದಾಳೆ.
ದಿ ಟೈಮ್ಸ್ ವರದಿಯ ಪ್ರಕಾರ, ಕೆಲ ಬೌದ್ಧ ಭಿಕ್ಕುಗಳು ಈ ಸುಂದರಿ ವಿಲವನ್ ಎಮಸ್ವಾತ್ ಜೊತೆ ಸಂಬಂಧ ಇದ್ದಿದ್ದನ್ನು ಒಪ್ಪಿಕೊಂಡಿದ್ದಾರೆ. ಓರ್ವ ಬೌದ್ಧ ಭಿಕ್ಕು, ಈಕೆಯ ಜೊತೆಗೆ ಬಹಳ ದೀರ್ಘಕಾಲದವರೆಗೂ ನನಗೆ ಸಂಬಂಧ ಇತ್ತು ಎಂದಿದ್ದಾರೆ. ಈಕೆಯೇ ನನಗೆ ಕಾರ್ ಒಂದನ್ನು ನೀಡಿದ್ದಳು ಎಂದಿದ್ದಾರೆ. ಆದರೇ, ಈಕೆ ಮತ್ತೊಬ್ಬ ಬೌದ್ಧ ಭಿಕ್ಕು ಜೊತೆ ಹೋದ ಮೇಲೆ ನಮ್ಮ ಸಂಬಂಧ ಹಳಸಿತು. ಬಳಿಕ ನನ್ನಿಂದ ಹಣಕ್ಕಾಗಿ ಬೇಡಿಕೆ ಇಟ್ಟಳು ಎಂದು ಬೌದ್ಧ ಭೀಕ್ಕು ಒಬ್ಬರು ಹೇಳಿದ್ದಾರೆ.
80 ಸಾವಿರ ಪೋಟೋಗಳು
ಬಿಬಿಸಿ ವರದಿ ಪ್ರಕಾರ, ವಿಲವನ್ ಎಮಸ್ವಾತ್, ಬರೋಬ್ಬರಿ 385 ಮಿಲಿಯನ್ ಬಹತ್ ಸಂಪಾದಿಸಿದ್ದಾಳಂತೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೇ, ಕಳೆದ 3 ವರ್ಷದಲ್ಲಿ ಬರೋಬ್ಬರಿ 102 ಕೋಟಿ ರೂಪಾಯಿ ಹಣವನ್ನು ಬ್ಲಾಕ್ ಮೇಲ್ ಮೂಲಕವೇ ಸಂಪಾದಿಸಿದ್ದಾಳೆ. ಇನ್ನೂ ಸುಂದರಿ ವಿಲವನ್ ಎಮಸ್ವಾತ್ ಬಳಿ 80 ಸಾವಿರ ಪೋಟೋಗಳು ಸಿಕ್ಕಿವೆ. ತನ್ನ ಮನೆಯಲ್ಲೇ ಬಹಳಷ್ಟು ಬೌದ್ಧ ಭೀಕ್ಕುಗಳ ಜೊತೆ ಲೈಂಗಿಕ ಕೃತ್ಯದಲ್ಲಿ ತೊಡಗಿರುವ ನೂರಾರು ವಿಡಿಯೋಗಳು ಸಿಕ್ಕಿವೆ. ಈ ಪೋಟೋ, ವಿಡಿಯೋಗಳನ್ನೇ ಬಳಸಿ ಈ ಸುಂದರಿ ವಿಲವನ್ ಎಮಸ್ವಾತ್, ಬೌದ್ಧ ಭಿಕ್ಕುಗಳನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾಳೆ.
ಡೈರಿ ಸ್ಟಾರ್ ವರದಿಯ ಪ್ರಕಾರ, ವಿಲವನ್ ಎಮಸ್ವಾತ್, ಬೌದ್ಧ ಸನ್ಯಾಸಿ ಒಬ್ಬರಿಂದ ತನಗೆ ಮಗು ಹುಟ್ಟಿದೆ ಎಂದು ಹೇಳಿಕೊಂಡಿದ್ದಾಳೆ. ಜೂನ್ ಮಧ್ಯಭಾಗದಲ್ಲಿ ಬೌದ್ಧ ಸನ್ಯಾಸಿಯೊಬ್ಬರು, ಮಹಿಳೆಯಿಂದ ಬ್ಲಾಕ್ ಮೇಲ್‌ಗೆ ಒಳಗಾಗಿ ಇದ್ದಕ್ಕಿದ್ದಂತೆ, ಸನ್ಯಾಸತ್ವವನ್ನು ತ್ಯಜಿಸಿದಾಗ, ಈ ಬ್ಲಾಕ್ ಮೇಲ್ ಕೇಸ್ ಬೆಳಕಿಗೆ ಬಂದಿದೆ. ವಾಟ್ ಟ್ರೈ ಥೋಟ್ಸಾಥೆಪ್ ಬೌದ್ಧ ಕೇಂದ್ರದ ಸನ್ಯಾಸಿ, ಧೀಡೀರನೇ ನಾಪತ್ತೆಯಾದಾಗ, ಈ ಲೈಂಗಿಕ ಹಗರಣ ಬೆಳಕಿಗೆ ಬಂದಿದೆ. ವಿಲವನ್ ಎಮಸ್ವಾತ್ ಬ್ಲಾಕ್ ಮೇಲ್ನಿಂದ ತಪ್ಪಿಸಿಕೊಳ್ಳಲು ಬೌದ್ಧ ಸನ್ಯಾಸಿ ನಾಪತ್ತೆಯಾಗಿದ್ದಾರೆ. ಆದರೇ, ಈಗ ವಿಲವನ್ ಎಮಸ್ವಾತ್, ನಾಪತ್ತೆಯಾಗಿರುವ ಬೌದ್ಧ ಸನ್ಯಾಸಿಯೇ ತನ್ನ ಮಗುವಿನ ತಂದೆ ಎಂದು ಹೇಳಿದ್ದಾಳೆ.
ಇದನ್ನೂ ಓದಿ:ನಾಗರ ಪಂಚಮಿ ವಿಶೇಷ.. ಈ ಪ್ರದೇಶದಲ್ಲಿ ಜೀವಂತ ನಾಗರ ಹಾವುಗಳನ್ನು ಹಿಡಿದು ಏನ್ ಮಾಡ್ತಾರೆ ಗೊತ್ತಾ?
ಬೌದ್ಧ ಭಿಕ್ಕುಗಳ ವಿರುದ್ಧ ಶಿಸ್ತುಕ್ರಮ, ಸಾರ್ವಜನಿಕರ ಆಕ್ರೋಶ
ದಿ ಟೈಮ್ಸ್ ಪ್ರಕಾರ, ಪ್ರಸಿದ್ಧ ದೇವಾಲಯಗಳ ಹಲವಾರು ಮುಖ್ಯಸ್ಥರು ಸೇರಿದಂತೆ 9 ಸನ್ಯಾಸಿಗಳನ್ನು ಪದಚ್ಯುತಗೊಳಿಸಲಾಗಿದೆ. ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿರುವ ಮಹಿಳೆಯರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ನೀಡುವಂತೆ ಕಾನೂನನ್ನು ತಿದ್ದುಪಡಿ ಮಾಡಲು ಸೆನೆಟ್‌ನ ಸಮಿತಿಯು ಪ್ರಸ್ತಾಪಿಸಿದೆ. ಈ ವಿಚಾರವು ಪುರುಷರು ತಮ್ಮ ಸ್ವಂತ ಕ್ರಿಯೆಗಳಿಗೆ ಜವಾಬ್ದಾರರಾಗಬೇಕೆಂದು ಹೇಳುವವರನ್ನು ಕೆರಳಿಸಿದೆ. ಬೌದ್ಧ ಭಿಕ್ಕುಗಳು, ಸನ್ಯಾಸಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
2,00,000 ಸನ್ಯಾಸಿಗಳು ಮತ್ತು 85,000 ಶಿಷ್ಯರು
ಈ ಹಗರಣವು ಉನ್ನತ ಸನ್ಯಾಸಿಗಳಲ್ಲಿರುವ ಸುಳ್ಳು ಮತ್ತು ಬೂಟಾಟಿಕೆಗಳ ವ್ಯವಸ್ಥೆ ಬಹಿರಂಗಪಡಿಸಿದೆ. ಇದೊಂದೇ ಪ್ರಕರಣವಲ್ಲ ಎಂಬುದನ್ನು 9 ಮಂದಿ ಸನ್ಯಾಸಿಗಳು ಭಾಗಿಯಾಗಿರುವುದು ತೋರಿಸುತ್ತಿದೆ. ಇದು ಬೌದ್ಧ ದೇವಾಲಯಗಳ ಗೋಡೆ ಹಿಂದಿನ ಎಂದಿನ ವ್ಯವಹಾರದಂತೆ ನಡೆದಿದೆ ಎಂದು ಬ್ಯಾಂಕಾಕ್ ಪೋಸ್ಟ್ನ ಅಂಕಣಕಾರ ಸನಿತ್ಸುದಾ ಏಕಾಚೈ ಬರೆದಿದ್ದಾರೆ.
ಥೈಲ್ಯಾಂಡ್‌ನಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಜನರು ಬೌದ್ಧರು. ಸುಮಾರು 2,00,000 ಸನ್ಯಾಸಿಗಳು ಮತ್ತು 85,000 ಶಿಷ್ಯರು ಇದ್ದಾರೆ. ಸಂಘ ಅಥವಾ ಬೌದ್ಧ ಸನ್ಯಾಸಿ ಸಮುದಾಯವನ್ನು ಒಳಗೊಂಡ ಹಗರಣಗಳು ಥೈಲ್ಯಾಂಡ್‌ನಲ್ಲಿ ಸಾಮಾನ್ಯವಲ್ಲ. ಹೆಚ್ಚಾಗಿ ಲೈಂಗಿಕತೆ, ಹಣ ಅಥವಾ ಎರಡನ್ನೂ ಒಳಗೊಂಡಿರುತ್ತವೆ. ಆದರೆ ವಿಲಾವನ್ ಎಮಸ್ವಾತ್ ಜೊತೆ ಲೈಂಗಿಕ ಕೃತ್ಯದಲ್ಲಿ ಭಾಗಿಯಾಗಿರುವ ಸನ್ಯಾಸಿಗಳ ಹಿರಿತನವು ಘಟನೆಯನ್ನು ಅಸಾಮಾನ್ಯವಾಗಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ