newsfirstkannada.com

ಸೆಲೆಬ್ರಿಟಿಯಿಂದ ಹಿಡಿದು ಜನಸಾಮಾನ್ಯರವರೆಗೂ ಒಂದೇ ಪೋಸ್ಟ್​​.. ಏನಿದು ‘All Eyes on Rafah’ ಟ್ರೆಂಡ್​​?

Share :

Published May 29, 2024 at 7:18pm

    ‘ಆಲ್ ಐಸ್ ಆನ್ ರಫಾ’ ಎಂಬ ಪೋಸ್ಟ್‌ನ ಅರ್ಥವೇನು ಗೊತ್ತಾ?

    ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿರೋ ಆ ಫೋಸ್ಟ್​

    ಸೆಲೆಬ್ರಿಟಿಗಳಿಂದ ಹಿಡಿದು ಸಾಕಷ್ಟು ಜನರು ಶೇರ್​ ಮಾಡುತ್ತಿರುವುದೇಕೆ?

ಸೋಶಿಯಲ್​ ಮೀಡಿಯಾದಲ್ಲಿ ಆ ಒಂದು ಪೋಸ್ಟ್​  ಸಖತ್​ ಹಲ್​ಚಲ್​ ಎಬ್ಬಿಸುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರವರೆಗೂ ಈ ಪೋಸ್ಟ್​ನ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಪೋಸ್ಟ್​​ 40 ಮಿಲಿಯನ್​ ಅಷ್ಟೂ ಶೇರ್​ ಕೂಡ ಆಗಿದೆ. ‘ಆಲ್ ಐಸ್ ಆನ್ ರಫಾ’ ಈ ಪೋಸ್ಟ್​ ಇನ್​ಸ್ಟಾಗ್ರಾಮ್​​ನಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿದೆ. ಇನ್ನೂ ಈ ಒಂದು ಪೋಸ್ಟ್​ ವಿರುದ್ಧ ಪರ ಹಾಗೂ ವಿರೋಧದ ಚರ್ಚೆ ಕೂಡ ಶುರುವಾಗಿದೆ.

ಏನಿದು ಪೋಸ್ಟ್​.. ಈ ಪೋಸ್ಟ್‌ನ ಅರ್ಥವೇನು?

‘ಆಲ್ ಐಸ್ ಆನ್ ರಫಾ’ ಈ ಪೋಸ್ಟ್​ ಹಾಕಲು ಕಾರಣ ರಫಾ ಮೇಲಿನ ಇಸ್ರೇಲ್​ ದಾಳಿ. ಭಾರತೀಯ ಸೆಲೆಬ್ರಿಟಿಗಳು ಹೆಚ್ಚಾಗಿ ಈ ಪೋಸ್ಟ್‌ ಹಾಕ್ತಿದ್ದಾರೆ. ನಟ ದುಲ್ಕರ್ ಸಲ್ಮಾನ್, ಕೀರ್ತಿ ಸುರೇಶ್, ಪ್ರಿಯಾಂಕಾ ಚೋಪ್ರಾ, ಮಾಧುರಿ ದೀಕ್ಷಿತ್, ವರುಣ್ ಧವನ್, ರಶ್ಮಿಕಾ ಮಂದಣ್ಣ, ವಿಜಯ್ ವರ್ಮಾ, ಮಾಧುರಿ ದೀಕ್ಷಿತ್, ಹೀಗೆ ಸಾಕಷ್ಟು ಸೆಲೆಬ್ರಿಟಿಗಳು ರಫಾ ಮೇಲಿನ ಇಸ್ರೇಲ್‌ ಬಾಂಬ್ ದಾಳಿಯನ್ನು ಖಂಡಿಸಿ ‘ಆಲ್ ಐಸ್ ಆನ್ ರಫಾ’ ಎಂಬ ಪೋಸ್ಟ್‌ನ್ನು ಶೇರ್​ ಮಾಡಿಕೊಂಡಿದ್ದಾರೆ. All eyes on Rafah ಈ ಪೋಸ್ಟ್‌ನ್ನು ಇನ್ಸ್ಟಾಗ್ರಾಂವೊಂದರಲ್ಲೇ 40 ದಶಲಕ್ಷಕ್ಕೂ ಹೆಚ್ಚು ಬಾರಿ ಶೇರ್​ ಮಾಡಲಾಗಿದೆ.

ಇದನ್ನೂ ಓದಿ: ಗೋವಾದಲ್ಲಿ ಟೈಟು, ಎಣ್ಣೆ ಏಟಲ್ಲಿ ಫೈಟು! ಸ್ಯಾಂಡಲ್​​ವುಡ್​ ನಿರ್ಮಾಪಕನ ಮೂಗು ಬಗಿದ ಆರೋಪ​

ಈ ಚಿತ್ರ ರಫಾದಲ್ಲಿನ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಅಲ್ಲಿನ ನಿರಾಶ್ರಿತ ಜನರನ್ನು ಇಸ್ರೇಲ್‌ ಯುದ್ಧ ಟ್ಯಾಂಕರ್​​ಗಳು ಮತ್ತು ಮಿಲಿಟರಿ ಪಡೆಗಳು ಸುತ್ತುವರಿದಿರುವುದನ್ನು ಪ್ರತಿಬಿಂಬಿಸುತ್ತದೆ. ‘ಆಲ್ ಐಸ್ ಆನ್ ರಾಫಾ’ ಅನ್ನೋ ಪದವನ್ನ ಫೆಬ್ರವರಿ 2024ರಲ್ಲಿ ಆಕ್ರಮಿತ ಪ್ಯಾಲೇಸ್ತೀನ್‌ ಪ್ರಾಂತ್ಯಗಳ WHOನ ಕಚೇರಿಯ ನಿರ್ದೇಶಕ ಡಾ ರಿಕ್ ಪೀಪರ್‌ಕಾರ್ನ್ ಮೊದಲ ಬಾರಿಗೆ ಬಳಕೆ ಮಾಡಿದ್ದರು. ಈ ಪದದ ಅರ್ಥ ರಫಾದ ಮೇಲೆ ಎಲ್ಲರ ಕಣ್ಣಿದೆ. ಗಾಝಾದ ರಫಾದಲ್ಲಿ ನಡೆಯುತ್ತಿರುವ ನರಮೇಧವಾಗಿದೆ. ಇಸ್ರೇಲ್‌ ರಫಾ ಮೇಲೆ ದಾಳಿ ನಡೆಸಿದರೆ ಅದು ಮಹಾ ದುರಂತ ಅಂತ ಹೇಳಿದ್ದಾರೆ. ಮೇ 26ರಂದು, ಇಸ್ರೇಲ್‌ ವಾಯುಪಡೆಗಳು ನಿರಾಶ್ರಿತರಿರುವ ಪ್ರದೇಶದ ಮೇಲೆ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ 45 ಜನರ ಹತ್ಯೆ ನಡೆದಿದೆ. 300ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ಯಾಲೆಸ್ತೀನ್‌ ನಿರಾಶ್ರಿತರಿಗಾಗಿರುವ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಪ್ರಕಾರ, ಜನರು ರಫಾಗೆ ಓಡಿಹೋಗುವಂತೆ ಇಸ್ರೇಲ್‌ ಮಾಡಿದೆ. ಬಾಂಬ್ ಬ್ಲಾಸ್ಟ್​​, ಆಹಾರ ಮತ್ತು ನೀರಿನ ಕೊರತೆಯಿಂದ ಜನ ಒದ್ದಾಡ್ತಿದ್ದಾರೆ. ಗಾಝಾದ ಸದ್ಯದ ಪರಿಸ್ಥಿತಿ ಭೂಮಿಯ ಮೇಲಿನ ನರಕವಾಗಿದೆ ಎಂದು ಹೇಳಿದೆ.

View this post on Instagram

A post shared by @bollywoodarab.fc2

ಕಳೆದ ಎರಡು ವಾರಗಳಿಂದ ಇಸ್ರೇಲ್ ರಾಫಾ ಮೇಲೆ ದಾಳಿ ನಡೆಸುತ್ತಿದೆ. ರಾಫಾ ಮೇಲಿನ ದಾಳಿಯನ್ನು ಹಮಾಸ್‌ನ್ನು ಸೋಲಿಸುವ ತನ್ನ ಕಾರ್ಯತಂತ್ರದ ಭಾಗ ಅಂತ ಇಸ್ರೇಲ್‌ ಹೇಳಿಕೊಂಡಿದೆ. ಮೇ 24ರಂದು, ರಫಾದಲ್ಲಿ ಇಸ್ರೇಲ್ ತನ್ನ ಆಕ್ರಮಣಕಾರಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ICJ ಆದೇಶಿಸಿದೆ. ನ್ಯಾಯಾಲಯದ ಸೂಚನೆಯ ಹೊರತಾಗಿಯೂ, ಇಸ್ರೇಲ್ ರಫಾದಲ್ಲಿ ತನ್ನ ದಾಳಿಯನ್ನು ಮುಂದುವರೆಸಿದ್ದು, ಮೇ 25ರಿಂದ 60ಕ್ಕೂ ಹೆಚ್ಚು ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದೆ. ಅಷ್ಟೇ ಅಲ್ಲದೆ ರಫಾದಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ 900 ಕೆಜಿ ತೂಕದ 7 ಬಾಂಬ್‌ಗಳನ್ನು ಹಾಕಿದೆ. ಒಟ್ಟಿನಲ್ಲಿ All eyes on Rafah ಇಮೇಜ್ ಮಾತ್ರ ಸಖತ್ ಸದ್ದು ಮಾಡ್ತಿದ್ದು ಇಸ್ರೇಲ್-ಹಮಾಸ್ ಯುದ್ಧ ಎಲ್ಲಿಗೆ ಬಂದು ನಿಲ್ಲುತ್ತೋ ಗೊತ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಲೆಬ್ರಿಟಿಯಿಂದ ಹಿಡಿದು ಜನಸಾಮಾನ್ಯರವರೆಗೂ ಒಂದೇ ಪೋಸ್ಟ್​​.. ಏನಿದು ‘All Eyes on Rafah’ ಟ್ರೆಂಡ್​​?

https://newsfirstlive.com/wp-content/uploads/2024/05/all-eves-on-rafah.jpg

Load More