ಟೆಸ್ಟ್​ ಸ್ಪೆಷಲಿಸ್ಟ್ಸ್​​ ಮೇಲೆ ಫ್ರಾಂಚೈಸಿ ಪ್ರೀತಿ.. ಆರ್​ಸಿಬಿಯದ್ದೂ ಅದೇ ಕತೆ.. ಯಾಕೆ ಹೀಗೆ..?

author-image
Ganesh
Updated On
ಟೆಸ್ಟ್​ ಸ್ಪೆಷಲಿಸ್ಟ್ಸ್​​ ಮೇಲೆ ಫ್ರಾಂಚೈಸಿ ಪ್ರೀತಿ.. ಆರ್​ಸಿಬಿಯದ್ದೂ ಅದೇ ಕತೆ.. ಯಾಕೆ ಹೀಗೆ..?
Advertisment
  • ಸಪೋರ್ಟ್​ ಸ್ಟಾಫ್​​ ವಿಭಾಗಕ್ಕೆ ಡೆಲ್ಲಿ ಕ್ಯಾಪಿಟಲ್ಸ್​ ಸರ್ಜರಿ
  • ಉಳಿದ ಫ್ರಾಂಚೈಸಿಗಳಿಗೂ ‘ಟೆಸ್ಟ್​ ಸ್ಪೆಷಲಿಸ್ಟ್’ಗಳೇ​ ಕೋಚ್
  • RCB ಕೋಚ್​​ ಒಂದೇ ಒಂದು T20I ಪಂದ್ಯ ಆಡಿಲ್ಲ

ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿ ಕಾವಿನ ನಡುವೆ ಐಪಿಎಲ್​ ವಲಯದಲ್ಲಿ ಚುಟುವಟಿಕೆಗಳು ಜೋರಾಗಿವೆ. ​ಮೆಗಾ ಆಕ್ಷನ್​ಗೆ ಫ್ರಾಂಚೈಸಿಗಳ ವಲಯದಲ್ಲಿ ತಯಾರಿ ನಡೆಯುತ್ತಿದೆ. ಆಟಗಾರರ ಖರೀದಿಗೂ ಮುನ್ನ ಸಪೋರ್ಟ್​​ ಸ್ಟಾಫ್​ ವಿಭಾಗಕ್ಕೆ ಸರ್ಜರಿ ಮಾಡ್ತಿದ್ದು, ಟಿ20 ತಂಡಗಳ ಕೋಚಿಂಗ್​ಗೆ ಟೆಸ್ಟ್​ ಸ್ಪೆಷಲಿಸ್ಟ್​ಗಳಿಗೆ ಮಣೆ ಹಾಕ್ತಿವೆ.

ಡೆಲ್ಲಿ ಕ್ಯಾಪಿಟಲ್ಸ್​ ಸರ್ಜರಿ
ಮುಂಬರುವ ಐಪಿಎಲ್​ಗೂ ಮುನ್ನ T20 ಕ್ರಿಕೆಟ್​ಗೆ ಟೆಸ್ಟ್​ ಸ್ಪೆಷಲಿಸ್ಟ್​ಗಳನ್ನ ಕೋಚ್​ಗಳಾಗಿ ಡೆಲ್ಲಿ ನೇಮಿಸಿದೆ. ಒಂದೇ ಒಂದು T20 ಇಂಟರ್​ನ್ಯಾಷನಲ್​ ಪಂದ್ಯವನ್ನಾಡದ ವೇಣುಗೋಪಾಲ್​ ರಾವ್​ ತಂಡದ ಡೈರೆಕ್ಟರ್​ ಆಗಿದ್ರೆ, ಹೇಮಂಗ್​ ಬದಾನಿ ಹೆಡ್​ ಕೋಚ್​ ಆಗಿದ್ದಾರೆ. ಸ್ಕೌಟಿಂಗ್​ ಹೆಡ್​ ಆಗಿ ಆಯ್ಕೆಯಾಗಿರೋ ವಿಜಯ್​ ಭಾರಧ್ವಾಜ್​ ಕೂಡ ರಣಜಿ ಕಿಂಗ್​ ಅನಿಸಿಕೊಂಡವರು. ಬೌಲಿಂಗ್​ ಕೋಚ್​ ಆಗಿ ಆಯ್ಕೆಯಾಗಿರೋ ಮುನಾಫ್​ ಪಟೇಲ್​ ಟೀಮ್​ ಇಂಡಿಯಾ ಪರ 3, ಐಪಿಎಲ್​ನಲ್ಲಿ 63 ಪಂದ್ಯ ಆಡಿದ್ದರೂ ಹೇಳಿಕೊಳ್ಳುವಂತಹ ಪರ್ಫಾಮೆನ್ಸ್​ ನೀಡಿಲ್ಲ.

ಇದನ್ನೂ ಓದಿ: ಮಗಳ ಅಡ್ಮಿಷನ್​​ಗೆ ಹೋಗಿದ್ದ ತಂದೆಗೆ ಕಾದಿತ್ತು ಆಘಾತ; 1ನೇ ತರಗತಿ ಪ್ರವೇಶಕ್ಕೆ ಲಕ್ಷ ಲಕ್ಷ ಫೀಸ್..!

‘ಟೆಸ್ಟ್​ ಸ್ಪೆಷಲಿಸ್ಟ್’ಗಳೇ​ ಕೋಚ್​
ಡೆಲ್ಲಿಗೂ ಮುನ್ನ ರಾಜಸ್ಥಾನ್​ ರಾಯಲ್ಸ್ ರಾಹುಲ್​ ದ್ರಾವಿಡ್​ನ​ ಹೆಡ್​ ಕೋಚ್​ ಆಗಿ ನೇಮಿಸಿತು. ದ್ರಾವಿಡ್ ವಿಶ್ವ ಕ್ರಿಕೆಟ್​ನಲ್ಲಿ ಹೆಸರು ಮಾಡಿರೋದೇ ಟೆಸ್ಟ್​ ಸ್ಪೆಷಲಿಸ್ಟ್​ ಎಂದು ತಾನೇ? ಡೆಲ್ಲಿ ಕ್ಯಾಪಿಟಲ್ಸ್​​, ರಾಜಸ್ಥಾನ್​​ ರಾಯಲ್ಸ್​ ಮಾತ್ರವಲ್ಲ. ಉಳಿದ ಫ್ರಾಂಚೈಸಿಗಳ ಹೆಡ್​ಕೋಚ್​ಗಳು ಕೂಡ ಟೆಸ್ಟ್​ ಸ್ಪೆಷಲಿಸ್ಟ್​ಗಳೇ.

‘ಟೆಸ್ಟ್​ ಸ್ಪೆಷಲಿಸ್ಟ್’ಗಳೇ​ ಕೋಚ್
ಆರ್​​ಸಿಬಿ ತಂಡದ ಹೆಡ್​ ಕೋಚ್​ ಆ್ಯಂಡಿ ಫ್ಲವರ್​, ಕೆಕೆಆರ್​ ತಂಡದ ಹೆಡ್​ ಕೋಚ್​ ಚಂದ್ರಕಾಂತ್​ ಪಂಡಿತ್​ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನ ಆಡಿಲ್ಲ. ಲಕ್ನೋ ಸೂಪರ್​ ಜೈಂಟ್ಸ್​ ಕೋಚ್​ ಜಸ್ಟಿನ್​ ಲ್ಯಾಂಗರ್​ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ 41 ಪಂದ್ಯ ಆಡಿದ್ದರೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಸಿಎಸ್​ಕೆ ಕೋಚ್​​ ಸ್ಟೀಫನ್​ ಫ್ಲೆಮಿಂಗ್​ದೂ ಇದೇ ಕಥೆ.

ಸನ್​ರೈಸರ್ಸ್​ ಹೈದ್ರಾಬಾದ್​ ತಂಡದ ಹೆಡ್​ ಕೋಚ್​ ಡೇನಿಯಲ್​ ವೆಟೋರಿ, ಗುಜರಾತ್​ ಟೈಟನ್ಸ್​ನ ಆಶಿಶ್​ ನೆಹ್ರಾ ಟಿ20 ಕ್ರಿಕೆಟ್​ ಆಡಿದ್ದಾರೆ. ಚುಟುಕು ಫಾರ್ಮೆಟ್​ನ ಪಂಟರ್​ಗಳೇನಲ್ಲ. ಇರೋದ್ರಲ್ಲಿ ಮುಂಬೈನ ಮಾಹೇಲ ಜಯವರ್ಧನೆ, ಪಂಜಾಬ್​ ರಿಕಿ ಪಾಂಟಿಂಗ್​​ ಒಂದು ಮಟ್ಟಿಗೆ ಒಕೆ ಅನ್ನಬಹುದು ಅಷ್ಟೇ.

ಇದನ್ನೂ ಓದಿ:ಫ್ಯಾನ್ಸ್​ಗೆ ಬಿಗ್​ ಶಾಕ್​​; ಭಾರೀ ಅಪಾಯದಲ್ಲಿ RCB ಸೆಂಚೂರಿ ಸ್ಟಾರ್ ಐಪಿಎಲ್​ ಕರಿಯರ್​​!

ಇವರ ಮೇಲ್ಯಾಕೆ ಒಲವು?
ಟಿ20 ಕ್ರಿಕೆಟ್​ ಅನ್ನೋದು ಫಾಸ್ಟ್​ ಗೇಮ್​. ಐಪಿಎಲ್ ಟೂರ್ನಿ ಈ ಟಿ20 ಕ್ರಿಕೆಟ್​ಗೇ ಹೊಸ ರೂಪ ಕೊಟ್ಟ ಟೂರ್ನಿ. ಈ ಮಿಲಿಯನ್​ ಡಾಲರ್​ ಟೂರ್ನಿಯ ಕೋಚ್​​ಗಳೆಲ್ಲಾ ಕ್ರಿಕೆಟ್​ನ ಪ್ಯೂರೆಸ್ಟ್​ ಫಾರ್ಮೆಟ್ ಟೆಸ್ಟ್​ ಕ್ರಿಕೆಟ್​ನ ಪಂಟರ್ಸ್​.

‘ಟೆಸ್ಟ್​ ಸ್ಪೆಷಲಿಸ್ಟ್’​ಗಳ​ ಮೇಲ್ಯಾಕೆ ಒಲವು..?

  • ಕೂಲ್​ ಅಂಡ್ ಕಾಮ್​ ಆ್ಯಟಿಟ್ಯೂಡ್​, ಹೆಚ್ಚು ತಾಳ್ಮೆ
  • ಅತ್ಯುತ್ತಮ ಗೇಮ್​ ರೀಡರ್ಸ್​, ಶಾರ್ಪ್​ ಥಿಂಕರ್ಸ್​
  • ಗೇಮ್​ಗೆ ಬೇಕಿರೋ ಟೆಕ್ನಿಕ್​ಗೆ ಹೆಚ್ಚಿನ ಒತ್ತು
  • ಬೌಲರ್​ಗಳನ್ನ ಬೇಗ ಸ್ಟಡಿ ಮಾಡಬಲ್ಲ ಪಂಟರ್ಸ್​
  • ಹೊಸ ಐಡಿಯಾ, ಮ್ಯಾನ್​ ಮ್ಯಾನೇಜ್​ಮೆಂಟ್​ ಸ್ಕಿಲ್ಸ್​

ಟಿ20 ಕ್ರಿಕೆಟ್​ನ ಪಂಟರ್ಸ್​ ಅನ್ನಿಸಿಕೊಳ್ಳದಿದ್ರೂ ಕೋಚ್​ ಆಗಲು ಬೇಕಾದ ಎಲ್ಲಾ ಕ್ವಾಲಿಟಿಸ್​ ಇವ್ರಲ್ಲಿದೆ. ಜೊತೆಗೆ ಇವ್ರು ರಿಸಲ್ಟ್​ ಕೂಡ ಕೊಟ್ಟಿದ್ದಾರೆ. ರಾಜಸ್ಥಾನ್ ರಾಯಲ್ಸ್​ ಕೋಚ್​ ಟೀಮ್​ ಇಂಡಿಯಾಗೆ ಟಿ20 ವಿಶ್ವಕಪ್​ ಗೆಲ್ಲಿಸಿಕೊಡಲಿಲ್ವಾ.? ಇದಕ್ಕಿಂತ ಉದಾಹರಣೆ ಬೇಕಾ.?
ದ್ರಾವಿಡ್​ ಮಾತ್ರವಲ್ಲ.. ಸ್ಟೀಫನ್​ ಫ್ಲೆಮಿಂಗ್​ ಚೆನ್ನೈಗೆ 5 ಬಾರಿ ಕಪ್​ ಗೆಲ್ಲಿಸಿಕೊಟ್ಟಿದ್ರೆ ಜಯವರ್ಧನೆ ಮುಂಬೈಗೆ, ಆಶಿಶ್​ ನೆಹ್ರಾ ಗುಜರಾತ್​ಗೆ, ಚಂದ್ರಕಾಂತ್​ ಈ ಸೀಸನ್​ನಲ್ಲಿ ಕೆಕೆಆರ್​ಗೆ ಕಪ್​ ಗೆಲ್ಲಿಸಿಕೊಟ್ಟಿದ್ದಾರೆ. ಈ ರಿಸಲ್ಟ್​ ಸಿಕ್ಕಿರೋದ್ರಿಂದಲೇ ಫ್ರಾಂಚೈಸಿಗಳು ಟೆಸ್ಟ್​ ಸ್ಪೆಷಲಿಸ್ಟ್​ಗಳ ಮೇಲೆ ಹೆಚ್ಚಿನ ಒಲವು ಹೊಂದಿದೆ.

ಇದನ್ನೂ ಓದಿ:13 ಭರ್ಜರಿ ಸಿಕ್ಸರ್​​.. 25 ಫೋರ್​​.. ಆಕ್ಷನ್​​ಗೆ ಮುನ್ನ ಅಬ್ಬರಿಸಿದ ಆರ್​​ಸಿಬಿ ಸ್ಟಾರ್​ ಬ್ಯಾಟರ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment