/newsfirstlive-kannada/media/post_attachments/wp-content/uploads/2023/10/LPG-Gas.jpg)
2025ರ ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಬಜೆಟ್ ಆಗಿರೋ ಕಾರಣ ಈಗ ಎಲ್ಲರ ಗಮನ ಎಲ್‌ಪಿಜಿ ಗ್ಯಾಸ್‌ಗಳತ್ತ ಸೆಳೆದಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತವೆ. ಈ ಸಲ ಬಜೆಟ್ ಕೂಡ ಫೆಬ್ರವರಿ ಮೊದಲ ದಿನ ಬರುವುದರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಆಗುತ್ತಾ? ಹೆಚ್ಚಾಗುತ್ತಾ? ಎಂದು ನೋಡಬೇಕಿದೆ.
ಕಡಿಮೆ ಆಗಬೇಕು ಅನ್ನೋ ನಿರೀಕ್ಷೆಯಲ್ಲಿ ಜನ
ನಾಳೆ ಅಲ್ಲ ನಾಡಿದ್ದು ಎಂದರೆ ಫೆಬ್ರವರಿ 1ನೇ ತಾರೀಕು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ಮೋದಿ ಸರ್ಕಾರದ ಪೂರ್ಣಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರಿಗೆ 8ನೇ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ಎಲ್‌ಪಿಜಿ ದರ ಕಡಿಮೆ ಆಗಬಹುದು ಅನ್ನೋ ನಿರೀಕ್ಷೆಯಲ್ಲಿ ಜನ ಇದ್ದಾರೆ.
ಬಜೆಟ್ ದಿನ ಹೆಚ್ಚಾಗುತ್ತಾ ಎಲ್‌ಪಿಜಿ ಗ್ಯಾಸ್ ಬೆಲೆ?
ಕಳೆದ ವರ್ಷ ಲೋಕಸಭಾ ಚುನಾವಣೆ ಕಾರಣ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಿದ್ದರು. ಮಧ್ಯಂತರ ಬಜೆಟ್ ಘೋಷಣೆಗೆ ಮುನ್ನವೇ ತೈಲ ಮಾರುಕಟ್ಟೆ ಕಂಪನಿಗಳು LPG ಗ್ಯಾಸ್ ಬೆಲೆ ಹೆಚ್ಚಿಸಿದ್ದವು.
2024ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಗೆಲುವು ಸಾಧಿಸಿತ್ತು. ಗೆಲುವಿನ ನಂತರ ಜುಲೈ ತಿಂಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ಆಗ ಮೆಟ್ರೋ ನಗರಗಳಾದ್ಯಂತ 19 ಕೆಜಿ ಸಿಲಿಂಡರ್ ಬೆಲೆಗಳನ್ನು 30 ರಿಂದ 31 ರೂ. ಕಡಿಮೆ ಮಾಡಿದ್ದರು. ಈ ಬಾರಿ ಕೂಡ ಇದೇ ಪ್ರವೃತ್ತಿ ಕಾಣಬಹುದು.
ಈ ಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ ಸಬ್ಸಿಡಿಯನ್ನು ಶೇ. 8ರಷ್ಟು ಹೆಚ್ಚಿಸೋ ಸಾಧ್ಯತೆ ಇದೆ. ಹೀಗಾದಲ್ಲಿ ಮೋದಿ ಸರ್ಕಾರ ಬಜೆಟ್‌ನಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಕಡಿಮೆ ಆಗಬಹುದು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ; ಟೀಮ್ ಇಂಡಿಯಾದಿಂದಲೇ ಔಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ