ನ್ಯಾಯ ಮತ್ತು ಬದಲಾವಣೆಗೆ ಹಾಡು ರಚನೆ
ಬನ್ನಿ, ಒಟ್ಟಾಗಿ ನಿಲ್ಲೋಣ ಎಂದ ರ‍್ಯಾಪರ್ ಆಲ್ ಓಕೆ
ಶಕ್ತಿ ಮತ್ತು ಮರುಜೀವನದ ಕಥೆಯನ್ನು ಹೊತ್ತಿರುವ ಹಾಡು
ತಾಯಿ ಅಥವಾ ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ ಅನಾಚಾರಗಳು ನಡೆಯುತ್ತಿವೆ. ಕಾಮುಕರ ಕಣ್ಣು ಹೆಣ್ಣಿನ ಮೇಲರ ಬಿದ್ದು ಅತ್ಯಾ*ಚಾರಕ್ಕೆ ಒಳಗಾಗುತ್ತಿದ್ದಾಳೆ. ಆದರೆ ಇಂತಹ ಕ್ರಿಮಿಗಳು ತಾವು ಕೂಡ ಒಂದು ಹೆಣ್ಣಿನ ಹೊಟ್ಟೆಯಿಂದ ಜನಿಸಿದ್ದಾರೆ ಎಂಬುದನ್ನು ಮರೆತು ನೀಚ ಕೃತ್ಯವೆಸಗುತ್ತಿದ್ದಾರೆ. ಅಂತಹ ದುರುಳರನ್ನು ದೇವಿ ಮಹಿಷಾಸುರನನ್ನು ಸಂಹಾರ ಮಾಡಿದಂತೆ ಸಮಾಜ ಸಂಹಾರ ಮಾಡಬೇಕು ಎಂಬುದನ್ನು ಕನ್ನಡದ ರ‍್ಯಾಪರ್ ಆಲ್ ಓಕೆ ಅದ್ಭುತ ಸಾಲುಗಳನ್ನು ಬರೆದು ತಮ್ಮ ಕಂಠದಾನನಿಂದ ಹಾಡಿದ ಹಾಡನ್ನು ಬಿಡುಗಡೆ ಮಾಡಿದ್ದಾರೆ.
‘ಐ’ ಹೆಸರಿನಲ್ಲಿ ವಿಡಿಯೋ ಹಾಡನ್ನು ಆಲ್ ಓಕೆ ನಿರ್ಮಿಸಿ ಯುಟ್ಯೂಬ್ನಲ್ಲಿ ರಿಲೀಸ್ ಮಾಡಿದ್ದಾರೆ. ಇದರಲ್ಲಿ ನಟಿ ಅಮೃತಾ ಅಯ್ಯಂಗಾರ್ ನಟಿಸಿದ್ದು, ಅತ್ಯಾ*ಚಾರಕ್ಕೆ ಒಳಗಾದ ಹೆಣ್ಣು ಮಗಳಂತೆ ಕಾಣಿಸಿಕೊಂಡಿದ್ದಾರೆ. ನಟಿ ಮಾಲಾಶ್ರೀಯವರು ಪೊಲೀಸ್ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾಲಕ್ಷ್ಮಿಯನ್ನು ಪೀಸ್, ಪೀಸ್ ಮಾಡಿದ ಹಂತ*ಕ ಮೊಬೈಲ್‌ನ್ನು ಎಲ್ಲಿ ಇಟ್ಟು ಹೋಗಿದ್ದ ಗೊತ್ತಾ?
ಹೆಣ್ಣಿನ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಅಲ್ ಓಕೆ, ‘ನೋವು, ಶಕ್ತಿ ಮತ್ತು ಮರುಜೀವನದ ಕಥೆಯನ್ನು ಹೊತ್ತಿರುವ ಹಾಡು ಇದಾಗಿದೆ. ‘She Will Rise’ ಎಂಬುದು ಕೇವಲ ಒಂದು ಜಾಹೀರಾತು ಮಾತ್ರವಲ್ಲ, ಅದು ಒಂದು ಪ್ರತಿಜ್ಞೆ. ಧೈರ್ಯದ ಹೆಣ್ಣುಮಕ್ಕಳಿಗೆ ಈ ಹಾಡು ಸಮರ್ಪಿತವಾಗಿದೆ. ನ್ಯಾಯ ಮತ್ತು ಬದಲಾವಣೆಗೆ ಕಿರುಚುವ ಸ್ವರವಾಗಿದೆ. ಬನ್ನಿ, ಒಟ್ಟಾಗಿ ನಿಲ್ಲೋಣ, ಯಾವುದೇ ಸ್ವರ ಮೌನವಾಗದಂತೆ ನೋಡಿಕೊಳ್ಳೋಣ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಪ್ಪ ಐ ಲವ್ ಯು ಪಾ.. ಡ್ರೋನ್ ಪ್ರತಾಪ್ ಜೀವನದಲ್ಲಿ ಹೊಸ ಬೆಳಕು; ಈ ಪುಣ್ಯ ಕಿಚ್ಚನಿಗೆ ಹೋಗಲಿ ಎಂದ ಫ್ಯಾನ್ಸ್!
ಸದ್ಯ ಹಾಡು ಬಿಡುಗಡೆಗೊಂಡ 2 ಗಂಟೆಯಲ್ಲಿ ಅದ್ಭುತ ವೀವ್ಸ್ ಪಡೆಯುತ್ತಿದೆ. ಅನೇಕರು ಈ ಹಾಡು ಕೇಳಿ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದೀರಿ ಎಂದು ಹೊಗಳುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ