newsfirstkannada.com

PHOTOS; ಸಪ್ತಸಾಗರದಾಚೆಗೂ ಸಂಭ್ರಮ; ಅಮೆರಿಕಾ, ಫ್ರಾನ್ಸ್, ಮಾರಿಷಸ್‌ನಲ್ಲೂ ರಾಮಭಕ್ತರ ಜಯಘೋಷ!

Share :

Published January 22, 2024 at 1:45pm

  ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆ ವಿದೇಶದಲ್ಲೂ ಸಂಭ್ರಮ

  ಅಮೆರಿಕ, ಥೈಲ್ಯಾಂಡ್, ಫ್ರಾನ್ಸ್​ ಸೇರಿ ವಿವಿಧೆಡೆ ಪೂಜೆ, ಭಜನೆ, ರಾಮ ಜಪ

  ಶ್ರೀರಾಮನ ಭಕ್ತರಿಂದ ಮಾರಿಷಸ್ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಱಲಿ

ಅಯೋಧ್ಯೆಯಲ್ಲಿ 70 ಎಕರೆಯಲ್ಲಿ ಸ್ಥಳದಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ರಾಮಮಂದಿರ ಎಲ್ಲರ ಗಮನ ಸೆಳೆಯುತ್ತಿದೆ. ಮಧುವಣಗಿತ್ತಿಯಂತೆ ಅಯೋಧ್ಯೆಯ ರೆಡಿಯಾಗಿದ್ದು ಮಂದಿರಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರ ನೆರವೇರಿದೆ. ಎಲ್ಲ ಭಕ್ತರಿಗೂ ರಾಮಲಲ್ಲಾ ಇಂದು ದರ್ಶನ ನೀಡಿದ್ದಾನೆ. ಈಗಾಗಲೇ ಸಾಕಷ್ಟು ಗಣ್ಯರು, ರಾಜಕೀಯ ನಾಯಕರು, ಸಿನಿಮಾ ನಟ, ನಟಿಯರು ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ಆಯೋಧ್ಯೆಯೆಲ್ಲ ಹೂವುಗಳಿಂದ ಸಿಂಗಾರಗೊಂಡಿದೆ. ಪ್ರತಿ ಮನೆಯಲ್ಲು ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಅಯೋಧ್ಯೆ ಎಲ್ಲ ರಸ್ತೆಯಲ್ಲೂ ಭಕ್ತರು ಸಾಲುಗಟ್ಟಿ ರಾಮಮಂದಿರದತ್ತ ಧಾವಿಸಿದ್ದಾರೆ. ಎಲ್ಲಿ ನೋಡಿದರು ರಾಮಭಕ್ತರ ದಂಡೇ ಕಾಣುತ್ತಿದೆ. ಭಾರತದಲ್ಲಿ ಹಬ್ಬದ ಸಡಗರವೇ ಮನೆ ಮಾಡಿದ್ದರೇ ಅತ್ತ ವಿದೇಶಗಳಲ್ಲೂ ರಾಮನ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಇಷ್ಟದ ದೇವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ. ಅದರಂತೆ ವಿದೇಶಗಳಲ್ಲಿ ರಾಮಭಕ್ತರ ಸ್ಪೆಷಲ್ ಫೋಟೋಗಳು ಇಲ್ಲಿವೆ.

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಭಾರತದಲ್ಲಿ ಭರ್ಜರಿಯಾಗಿ ನೆರವೇರಿದೆ. ಅತ್ತ ಮಾರಿಷಸ್ ದೇಶದಲ್ಲಿ ರಾಮಭಕ್ತರು ದೊಡ್ಡ ಱಲಿಯನ್ನು ನಡೆಸಿದ್ದಾರೆ. ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮಾರಿಷಸ್​ನಲ್ಲಿರುವ ಹಿಂದುಗಳು ಬೃಹತ್ ಪ್ರಮಾಣದಲ್ಲಿ ಕಾರ್ ಱಲಿ ಮಾಡುವ ಮೂಲಕ ಶ್ರೀರಾಮನಿಗೆ ಗೌರವ ಸಮರ್ಪಣೆ ಮಾಡಿದರು.

ಫ್ರಾನ್ಸ್​ನಲ್ಲಿರುವ ಹಿಂದೂಗಳು ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಾಚರಣೆ ಮಾಡಿದರು. ಅಲ್ಲಿನ ಹಿಂದೂಗಳು ತಮ್ಮ ಕಾರುಗಳಿಗೆ ಕೇಸರಿ ಬಾವುಟ ಕಟ್ಟಿಕೊಂಡು ಪ್ರಮುಖ ನಗರದ ರಸ್ತೆಗಳಲ್ಲಿ ಸಾಲುಗಟ್ಟಿ ಸಂಚಾರ ಮಾಡಿದರು. ಈ ವೇಳೆ ಜೈ ಶ್ರೀರಾಮ್ ಎಂದು ಘೋಷಣೆ ಕೂಡ ಕೂಗಿದರು.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ಹಿಂದೂಗಳ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಭಗವಾಧ್ವಜ ಹಿಡಿದು ಸಂಭ್ರಮಾಚರಣೆ ಮಾಡಿದರು.

ಫ್ರಾನ್ಸ್​, ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ಹಿಂದೂಗಳು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸೆಲೆಬ್ರೆಷನ್ ಮಾಡಿದಂತೆ ಥೈಲ್ಯಾಂಡ್​ನಲ್ಲೂ ಹಿಂದೂಗಳ ಸಂಭ್ರಮಿಸಿದರು.

ವಿಶ್ವದಲ್ಲೆಡೆ ಹಿಂದುಗಳು ದೊಡ್ಡ ಮಟ್ಟದಲ್ಲಿದ್ದಾರೆ. ಅದರಂತೆ ರಾಮ ಪ್ರತಿಷ್ಠಾಪನೆ ನೆರವೇರಿದ ಹಿನ್ನೆಲೆಯಲ್ಲಿ ಸಿಚೆಲಸ್ ದೇಶದಲ್ಲಿ ಸ್ವಾಮಿ ನಾರಾಯಣಸ್ವಾಮಿ ದೇವಾಲಯದಲ್ಲಿ ದೀಪಗಳನ್ನು ಬೆಳಗುವ ಮೂಲಕ ಶ್ರೀರಾಮನಿಗೆ ಗೌರವ ಸೂಚಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್​ ಟೈಮ್ಸ್ ಸ್ಕ್ವಾರ್​ನಲ್ಲಿ ಭಗವಾನ್ ಶ್ರೀರಾಮನ ಚಿತ್ರಗಳನ್ನು ಎಲ್​​ಇಡಿಗಳಲ್ಲಿ ಪ್ರದರ್ಶನ ಮಾಡಲಾಯಿತು.

ಇನ್ನು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಂಡಿದೆ. 500 ವರ್ಷಗಳ ಬಳಿಕ ಕೋಟ್ಯಾನುಕೋಟಿ ರಾಮಭಕ್ತರ ಬಯಕೆ ಈಡೇರಿದೆ. ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ನೂತನ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿತು. ರಾಮಲಲ್ಲಾ ಮೂರ್ತಿ ವಿರಾಜಮಾನವಾಗಿದ್ದು, ಪ್ರಾಣ ಪ್ರತಿಷ್ಠಾಪನೆಯ ಮೂಲಕ ಬಾಲರಾಮನ ಮೂರ್ತಿ ಎಲ್ಲರಿಗೂ ದರ್ಶನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS; ಸಪ್ತಸಾಗರದಾಚೆಗೂ ಸಂಭ್ರಮ; ಅಮೆರಿಕಾ, ಫ್ರಾನ್ಸ್, ಮಾರಿಷಸ್‌ನಲ್ಲೂ ರಾಮಭಕ್ತರ ಜಯಘೋಷ!

https://newsfirstlive.com/wp-content/uploads/2024/01/RAM_TEMPLE-7.jpg

Load More