/newsfirstlive-kannada/media/post_attachments/wp-content/uploads/2025/04/All-party.jpg)
ಪಹಲ್ಗಾಮ್‌ನಲ್ಲಿ ನಡೆದಿರೋ ಉಗ್ರ ಕೃತ್ಯವನ್ನ ಪಕ್ಷಾತೀತವಾಗಿ ಎದುರಿಸಬೇಕಿದೆ. ಈ ನಿಟ್ಟಿನಲ್ಲಿ ಇವತ್ತು ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ಕರೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಉಗ್ರರ ಸವಾಲನ್ನ ಮೆಟ್ಟಿ ನಿಲ್ಲಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ. ವಿಪಕ್ಷಗಳ ನಾಯಕರ ಅಭಿಪ್ರಾಯವನ್ನ ರಕ್ಷಣಾ ಸಚಿವರು ಆಲಿಸಲಿದ್ದಾರೆ. ಭಯೋತ್ಪಾದಕರ ದಾಳಿ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ INDIA ಒಕ್ಕೂಟದ ಪ್ರಮುಖರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಪಾಕ್ಗೆ ಹೋದವರು ಮೇ 1ರೊಳಗೆ ಬರ್ಬೇಕು; ಭಾರತದಲ್ಲಿರೋ ಪಾಕಿಸ್ತಾನಿಯರಿಗೆ ತೊಲಗಲು ಡೆಡ್ಲೈನ್..!
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ 5 ಪ್ರಮುಖ ನಿರ್ಣಯಗಳನ್ನ ಕೈಗೊಂಡಿದೆ. ಸಿಂಧೂ ನದಿ ನೀರು ಒಪ್ಪಂದ ಈ ಕ್ಷಣದಿಂದಲೇ ಅಮಾನತಿನಲ್ಲಿ ಇಡಲಾಗುತ್ತೆ ಎಂಬ ಪ್ರಮುಖ ನಿರ್ಣಯವನ್ನ ಮೋದಿ ನಿನ್ನೆ ನಡೆಸಿದ ಸಭೆಯಲ್ಲಿ ಕೈಗೊಳ್ಳಲಾಗಿದೆ. 2ನೇಯದಾಗಿ, ಭಾರತ ಪಾಕಿಸ್ತಾನ ಗಡಿಯ ಅಠಾರಿ ಚೆಕ್‌ಪೋಸ್ಟ್ ಈ ಕ್ಷಣದಿಂದಲೇ ಕ್ಲೋಸ್ ಮಾಡಲಾಗಿದೆ. ಪಾಕಿಸ್ತಾನಕ್ಕೆ ಹೋಗಿರುವವರು ಮೇ.1ರ ಒಳಗಾಗಿ ಭಾರತಕ್ಕೆ ಮರಳಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ.
ಮೂರನೇಯದಾಗಿ SAARC ವೀಸಾ ಅಡಿ ಪಾಕಿಸ್ತಾನದ ನಾಗರಿಕರಿಗೆ ಭಾರತಕ್ಕೆ ಪ್ರವೇಶವಿಲ್ಲ. ಈ ಹಿಂದೆ ಪಾಕ್ ನಾಗರಿಕರಿಗೆ ನೀಡಲಾಗಿರುವ ವಿಶೇಷ ವೀಸಾಗಳೂ ರದ್ದು ಮಾಡಲಾಗುತ್ತಿದೆ. ಭಾರತದಲ್ಲಿರೋ ಪಾಕ್ ಪ್ರಜೆಗಳಿಗೆ ಇಲ್ಲಿಂದ ತೆರಳಲು 48 ಗಂಟೆಗಳ ಗಡುವು ನೀಡಲಾಗಿದೆ. ನಾಲ್ಕನೇಯ ನಿರ್ಣಯವೇನೆಂದ್ರೆ, ಪಾಕ್‌ನ ರಾಯಭಾರ ಕಚೇರಿ ಅಧಿಕಾರಿಗಳಿಗೆ ಭಾರತ ಬಿಡಲು ವಾರದ ಗಡುವು ನೀಡಲಾಗಿದೆ. ಪಾಕ್‌ನ 3 ಸೇನೆಯ ಅಡ್ವೈಸರ್‌ಗಳಿಗೆ ಭಾರತ ಬಿಡೋದಕ್ಕೆ ಕಡ್ಡಾಯ ಆದೇಶ ನೀಡಲಾಗಿದೆ. ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್‌ನಲ್ಲಿರೋ ಅಧಿಕಾರಿಗಳೂ ವಾಪಸ್ ಬರುವಂತೆ ಸೂಚನೆ ನೀಡಲಾಗಿದೆ. ಭಾರತದ ಮೂರು ಸೇನೆಯ ಅಡ್ವೈಸರ್‌ಗಳಿಗೆ ಭಾರತಕ್ಕೆ ಮರಳೋಕೆ ಸೂಚನೆ ಕಳಿಸಲಾಗಿದೆ. ಕಟ್ಟಕಡೆಯ ನಿರ್ಣಯ ಅಂದ್ರ, ಭಾರತದಲ್ಲಿರೋ ಪಾಕ್ ರಾಯಭಾರ ಕಚೇರಿಯ ಸಿಬ್ಬಂದಿ ಸಂಖ್ಯೆ 30ಕ್ಕೆ ಇಳಿಕೆ ಮಾಡಲಾಗಿದೆ. ಮತ್ತು ಭೂ ಸೇನೆ, ವಾಯು, ನೌಕಾ ಸೇನೆಗಳಿಗೆ ಹದ್ದಿನ ಕಣ್ಗಾವಲಿಡೋಕೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ತಾಯ್ನಾಡಿಗೆ ಬಂದ ಮಂಜುನಾಥ್, ಭರತ್ ಮೃತದೇಹ.. ಅಗಲಿದ ಪುತ್ರನ ನೋಡಿ ತಂದೆ-ತಾಯಿ ಕಣ್ಣೀರು
ಪಹಲ್ಗಾಮ್‌ನಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಉಗ್ರರು ಫೈರಿಂಗ್ ಮಾಡಿದ್ದಾರೆ. ಈ ರಕ್ತಪಿಪಾಸುಗಳನ್ನ ಮಡಿಲಲ್ಲಿ ಇಟ್ಟುಕೊಂಡು ಸಾಕುತ್ತಿರೋ ಪಾಪಿಸ್ತಾನಕ್ಕೆ ತಕ್ಕ ಶಾಸ್ತಿ ಆಗುತ್ತಿದೆ. ಉಗ್ರರ ಅಟ್ಟಹಾಸಕ್ಕೆ ಭಾರತ ಪ್ರತೀಕಾರ ತೀರಿಸಿಕೊಳ್ಳಬೇಕು ಅನ್ನೋದು ದೇಶವಾಸಿಗಳ ಇಂಗಿತವಾಗಿದೆ.
ಇದನ್ನೂ ಓದಿ: ಉಗ್ರರ ಗುಂಡಿನ ದಾಳಿಯಲ್ಲಿ ಜೀವ ಬಿಟ್ಟ ಮೂವರ ಕುಟುಂಬಸ್ಥರಿಗೆ ಸಿಎಂ ಪರಿಹಾರ ಘೋಷಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ