/newsfirstlive-kannada/media/post_attachments/wp-content/uploads/2025/01/Serial-Actress-Shashikala.jpg)
ಬೆಂಗಳೂರು: ಇವ್ರು ಬೆಳ್ಳಿ ತೆರೆ ಜೊತೆಗೆ ಕಿರುತರೆ ನಟಿ ಕೂಡ ಹೌದು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರೋ ಇವ್ರು ಅನಾಥಶ್ರಮ ಕೂಡ ನಡೆಸ್ತಿದ್ದಾರೆ. ಇಷ್ಟೊಂದು ಸಮಾಜ ಮುಖಿ ಕಾರ್ಯ ಮಾಡ್ತಿರೋ ಇವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಅದು ಅಗ್ನಿಸಾಕ್ಷಿಯಾಗಿ ಕೈಹಿಡಿದ ಪತಿ ಹಾಗೂ ನಿರ್ದೇಶಕನೇ ಕಿರುಕುಳದ ಆರೋಪ ಮಾಡಿದ್ದಾರೆ.
ಕಿರುತರೆ ನಟಿ ಶಶಿಕಲಾ ಅಲಿಯಾಸ್ ಸುಶೀಲಮ್ಮ. ಸ್ಯಾಂಡಲ್‌ವುಡ್‌ನ ಸಾಕಷ್ಟು ಹೀರೋಗಳ ಜೊತೆ ನಟಿಸಿರೋ ಇವ್ರು ಹಲವು ಸಿರೀಯಲ್‌ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆ ಅಮ್ಮನ ಮಡಿಲು ಅಂತಾ ಅನಾಥಶ್ರಮ ಕೂಡ ನಡೆಸ್ತಿದ್ದಾರೆ. ಇದೀಗ ಇವರ ವಿರುದ್ಧವೇ ಬ್ಲಾಕ್‌ಮೇಲ್ ಮಾಡಿರೋ ಆರೋಪ ಕೇಳಿಬಂದಿದೆ.
ಇವರ ಹೆಸರು ನಿರ್ದೇಶಕ ಹರ್ಷವರ್ಧನ್. 2022ರಲ್ಲಿ ತೆರೆಕಂಡಿದ್ದ ಪ್ರಜಾರಾಜ್ಯ ಸಿನಿಮಾದ ನಿರ್ದೇಶಕ ಕೂಡ ಹೌದು. ಅಷ್ಟೇ ಅಲ್ಲದೇ ಯಾವ ನಟಿ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ಯೋ ಅದೇ ಶಶಿಕಲಾ ಗಂಡ ಕೂಡ. ಪತ್ನಿ ಶಶಿಕಲಾ ವಿರುದ್ಧ ಹರ್ಷವರ್ಧನ್ ಇದೀಗ ಕಿರುಕುಳ, ಬ್ಲಾಕ್‌ಮೇಲ್ ಮಾಡ್ತಿದ್ದಾರೆಂದು ಆರೋಪಿ ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಿರ್ದೇಶಕನಿಗೆ ಕಿರುಕುಳ ಕೊಟ್ರಾ ನಟಿ?
2020ರಲ್ಲಿ ನಿರ್ದೇಶಕ ಹರ್ಷವರ್ಧನ್ ಹೊಸ ಸಿನಿಮಾ ಶೂಟಿಂಗ್ ಶುರು ಮಾಡಿದ್ರು. 2021ರ ಮಾರ್ಚ್‌ನಲ್ಲಿ ಶಶಿಕಲಾ ಕಲಾವಿದೆಯಾಗಿ ಎಂಟ್ರಿ ಕೊಟ್ಟಿದ್ರು. ಆಗಲೇ ಹರ್ಷವರ್ಧನ್ ಮೊಬೈಲ್ ನಂಬರ್ ಪಡೆದಿದ್ರಂತೆ. ಅಲ್ಲದೆ ಸಿನಿಮಾಗೆ ಹೂಡಿಕೆ ಮಾಡ್ತೀನಿ ಅಂತ ನಂಬಿಸಿದ್ರಂತೆ. ರಿಲೇಷನ್ ಶಿಪ್‌ನಲ್ಲಿರುವಂತೆ ಹರ್ಷವರ್ಧನ್‌ಗೆ ಒತ್ತಾಯ ಮಾಡಿದ್ರಂತೆ. ಮದುವೆ ಆಗಲ್ಲ ಎಂದಾಗ ಓಕೆ ಅಂತಾನೂ ಹೇಳಿದ್ರಂತೆ. ಕೆಲ ದಿನಗಳ ನಂತರ ಮದುವೆಯಾಗುವಂತೆ ಮತ್ತೆ ಶಶಿಕಲಾ ಬಲವಂತ ಮಾಡಿದ್ದು, ಹರ್ಷವರ್ಧನ್ ಆಗಲ್ಲ ಎಂದಾಗ ಕಾಲ್ ರೆಕಾರ್ಡ್ ಇಟ್ಟು ಬೆದರಿಕೆ ಹಾಕಿರೋ ಆರೋಪವಿದೆ. ಅಲ್ಲದೆ ಹಲ್ಲೆ ಕೂಡ ಮಾಡಿರೋ ಆರೋಪವಿದ್ದು ಆಗ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಶಶಿಕಲಾ ವಿರುದ್ಧ ದೂರೂ ನೀಡಲಾಗಿತ್ತು. ಆದ್ರೆ 2022ರಲ್ಲಿ ಹರ್ಷವರ್ಧನ್ ವಿರುದ್ಧ ಶಶಿಕಲಾ ಸುಳ್ಳು ದೂರು ಕೊಟ್ಟಿದ್ರು ಎನ್ನಲಾಗಿದ್ದು ನಿರ್ದೇಶಕ ಜೈಲಿಗೂ ಹೋಗಿದ್ರು. ಜೈಲಿನಿಂದ ಬಿಡುಗಡೆ ನಂತರ ಸಿನಿಮಾ ಮಾಡಬೇಕಂದ್ರೆ ಶಶಿಕಲಾಳ ಮದುವೆ ಆಗುವಂತೆ ನಿರ್ಮಾಪಕರೊಬ್ರು ತಾಕೀತು ಮಾಡಿದ್ರು. ಹೀಗಾಗಿ 2022ರ ಮಾರ್ಚ್ 5ರಂದು ಶಶಿಕಲಾ ಜೊತೆ ಹರ್ಷ ಮದುವೆಯಾಗಿತ್ತು. ಆದ್ರೆ ಬಳಿಕ ಮನೆಗೆ ಶಶಿಕಲಾರ ಬೇರೆ ಸ್ನೇಹಿತರು ಬರ್ತಿದ್ದಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ 2024ರ ಅಗಸ್ಟ್ನಲ್ಲಿ ಹರ್ಷವರ್ಧನ್ ಅವರನ್ನ ಶಶಿಕಲಾ ಮನೆಯಿಂದಾಚೆ ಹಾಕಿದ್ರು ಅನ್ನೋದು ಹರ್ಷವರ್ಧನ್ ಮಾಡಿರೋ ಆರೋಪ.
ಮನೆಬಿಟ್ಟು ಹೊರಬಂದ್ರೂ ನಟಿ ಶಶಿಕಲಾ ನಿರ್ದೇಶಕನಿಗೆ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ಕೊಟ್ಟಿದ್ದಾರೆಂಬ ಆರೋಪವಿದೆ. ನಿರ್ದೇಶಕನ ಆರೋಪದ ಬಗ್ಗೆ ಶಶಿಕಲಾ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಪೊಲೀಸರು ತನಿಖೆ ಕೈಗೆತ್ತಿಕೊಂಡಿರೋದ್ರಿಂದ ಸತ್ಯ ಯಾವುದು ಸುಳ್ಳು ಯಾವುದು ಅನ್ನೋದು ಗೊತ್ತಾಗಲಿದೆ.
ಇದನ್ನೂ ಓದಿ:ಮುಂದಿನ ಸೀಸನ್ಗೂ ಕಿಚ್ಚನ ಸಾರಥ್ಯ? ಬಿಗ್ಬಾಸ್ ಫಿನಾಲೆಗೆ ಮುನ್ನ ಭರ್ಜರಿ ಗುಡ್ನ್ಯೂಸ್ ಕೊಟ್ಟ ಸುದೀಪ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ